ವಾಸನೆ ಹಿಡಿದು ಅಡುಗೆ ಮನೆಗೇ ನುಗ್ಗಿದ ಆನೆ, ವಿಡಿಯೋ ವೈರಲ್

ಮನೆಯಲ್ಲಿನ ಅಡುಗೆಯ ವಾಸನೆ ಹಿಡಿದು ಕಾಡಾನೆಯೊಂದು ಅಡುಗೆ ಮನೆಗೇ ನುಗ್ಗಿದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಡುಗೆ ಮನೆಗೆ ನುಗ್ಗಿದ ಆನೆ
ಅಡುಗೆ ಮನೆಗೆ ನುಗ್ಗಿದ ಆನೆ
Updated on: 

ನವದೆಹಲಿ: ಮನೆಯಲ್ಲಿನ ಅಡುಗೆಯ ವಾಸನೆ ಹಿಡಿದು ಕಾಡಾನೆಯೊಂದು ಅಡುಗೆ ಮನೆಗೇ ನುಗ್ಗಿದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನೌ ದಿಸ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಗಂಡು ಆನೆಯು ಆಹಾರವನ್ನು ಹುಡುಕುವ ವೇಳೆ ವಾಸನೆ ಹಿಡಿದು ನೇರ ಮನೆಗೇ ನುಗ್ಗಿದೆ. ಅಡುಗೆ ಮನೆಯ ಕಿಟಕಿಯ ಮೂಲಕ ಅಡುಗೆ ಮನೆಯೊಳಗೆ ತಲೆ ಹಾಕಿ ಅಲ್ಲಿರುವ ಪಾತ್ರೆ-ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಸಿಕ್ಕ ಆಹಾರ ವಸ್ತುಗಳನ್ನು ತಿನ್ನಲೆತ್ನಿಸಿದೆ.

ಮನೆಯವರು ಆನೆಯ ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

ವಿಡಿಯೋ ಮೂಲ ಥೈಲಾಂಡ್
ಇನ್ನು ಈ ವೈರಲ್ ವಿಡಿಯೋದ ಮೂಲ ಥೈಲ್ಯಾಂಡ್ ಎಂದು ಹೇಳಲಾಗಿದ್ದು, ಥೈಲ್ಯಾಂಡ್‌ನ ಹುವಾ ಹಿನ್ ಜಿಲ್ಲೆಯ ಚಲೆರ್ಮ್ಕಿಯಾಟ್‌ಪಟ್ಟಣ ಗ್ರಾಮದ ನಿವಾಸಿ ರಾಚಡವಾನ್ ಪುಯೆಂಗ್‌ಪ್ರಸೊಪ್ಪೋನ್ ಅವರ ಮನೆಗೆ ಆನೆ ನುಗ್ಗಿದೆ. ಕಳೆದ ಶನಿವಾರ ಮುಂಜಾನೆ ತನ್ನ ಮನೆಯಲ್ಲಿ ಅಡುಗೆಮನೆಯಲ್ಲಿ ಶಬ್ದ ಕೇಳಿದ್ದು, ನೋಡಲು ಬಂದಾಗ ಆನೆ ನುಗ್ಗಿರುವ ವಿಚಾರ ತಿಳಿದಿದೆ. ಆನೆ, ಆಹಾರ ಹುಡುಕುತ್ತಾ ಗೋಡೆಯ ಮೂಲಕ ಮನೆಯೊಳಗೆ ನುಗ್ಗಿದೆ. ಅಡುಗೆ ಮನೆಯ ಡ್ರಾಯರ್ ಗಳನ್ನು ಜಾಲಾಡಿ ಸಿಕ್ಕ ವಸ್ತುಗಳನ್ನು ತಿಂದು ತೇಗಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com