ಚುನಾವಣಾ ಅಕ್ರಮ ಆರೋಪ ಸಾಬೀತು: ಮ್ಯಾನ್ಮಾರ್ ನಾಯಕಿ ಸೂಕಿಗೆ ಶಿಕ್ಷೆ
ಯಾಂಗೂನ್: 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ಎಸಗಿರುವುದಾಗಿ ಆರೋಪ ಹೊರಿಸಿ ಮ್ಯಾನ್ಮಾರ್ ನಾಯಕಿ ಆನ್ ಸಾನ್ ಸೂಕಿ ಸರ್ಕಾರವನ್ನು ಕಿತ್ತೊಗೆದ ಸೇನೆ, ಅವರ ಆರೋಪ ಸಾಬೀತಾಗಿರುವುದಾಗಿ ತನ್ನ ಅಧೀನದಲ್ಲಿರುವ ಸುದ್ದಿ ವಾಹಿನಿ ಮೂಲಕ ಸುದ್ದಿ ಬಿತ್ತರಿಸಿದೆ.
ಕಳೆದ ವರ್ಷ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಯಕಿ ಆನ್ ಸಾನ್ ಸೂಕಿ ಅವರು ಭರ್ಜರಿ ಜಯ ದಾಖಲಿಸಿದ್ದರು. ಮತ್ತೆ ದೇಶದ ಅಧ್ಯಕ್ಷೆ ಸ್ಥಾನಕ್ಕೆ ಅವರು ಏರಲಿದ್ದರು.
ಅದಕ್ಕೂ ಮೊದಲೇ ಸೇನೆ ಚುನಾವಣೆಯಲ್ಲಿ ಸೂಕಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಚುನಾವಣಾ ಫಲಿತಾಂಶವನ್ನು ಅಸಿಂಧುಗೊಳಿಸಿತು. ನಂತರ ಸೂಕಿ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ಬಂಧಿಸಿ ದೇಶದಲ್ಲಿ ಸೇನಾಡಳಿತ ಹೇರಲಾಗಿತ್ತು.
ಇದನ್ನೂ ಓದಿ: ಭಾರತದೊಂದಿಗೆ ಯಾವುದೇ ಸಂಘರ್ಷ ಬಯಸುವುದಿಲ್ಲ: ತಾಲಿಬಾನ್
ಜನರು ಸೇನಾಡಳಿತ ವಿರೋಧಿಸಿ, ಸೂಕಿಯವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಭೀಕರ ಪ್ರತಿಭಟನೆ ನಡೆಸಿದ್ದರು. ಸೂಕಿ ವಿರುದ್ಧದ ನ್ಯಾಯಾಲಯ ವಿಚಾರಣೆ ನಡೆಯುತ್ತಿತ್ತು. ಇದೀಗ 76 ವರ್ಷದ ಸೂಕಿ ಅವರು ಚುನಾವಣೆ ಅಕ್ರಮ ಎಸಗಿದ್ದು ಸಾಬೀತಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಶಿಕ್ಷಾ ಪ್ರಮಾಣದ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮುಂದಿನ ನ್ಯಾಯಾಲಯ ವಿಚಾರಣೆಯಲ್ಲಿ ಅದು ತಿಳಿದುಬರಲಿದೆ ಎನ್ನಲಾಗುತ್ತಿದೆ. ದಶಕಗಲ ಕಾಲ ಸೂಕಿಗೆ ಜೈಲಾಗಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.
Related Article
'ಅಮೆರಿಕದಲ್ಲಿ ರಾಜೀನಾಮೆ ಪರ್ವ': ಅಮೆರಿಕನ್ನರಿಗೆ ಏನಾಗಿದೆ? ಏಕೆ ರಾಜೀನಾಮೆ ಕೊಡ್ತಿದ್ದಾರೆ?
ಸಾಕಷ್ಟು ದೇಶಗಳಲ್ಲಿ ಮೊದಲ ಡೋಸ್ ಲಸಿಕೆಯೇ ದೊರೆತಿಲ್ಲ... ಬೂಸ್ಟರ್ ಎಂಬುದು 'ಹಗರಣ': ವಿಶ್ವ ಆರೋಗ್ಯ ಸಂಸ್ಥೆ
ತಾಂಜಾನಿಯ ಪ್ರಧಾನಿಯನ್ನು ಭೇಟಿ ಮಾಡಿದ ಸಂಜಯ್ ದತ್: ಅಲ್ಲಿನ ಚಿತ್ರೋದ್ಯಮಕ್ಕೆ ನೆರವಿನ ಭರವಸೆ
ಅಮೆರಿಕ: H-1B ವೀಸಾದಾರರ ಪತ್ನಿಯರಿಗೆ ಉದ್ಯೋಗ ಪರವಾನಗಿ; ಬೈಡನ್ ಸರ್ಕಾರದ ಮಹತ್ವದ ನಿರ್ಧಾರ
ದಾಖಲೆಯ ಮೂರನೇ ಅವಧಿಗೂ ಷಿ ಜಿನ್ಪಿಂಗ್ ಚೀನಾ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಕೆ: ಕಮ್ಯುನಿಸ್ಟ್ ಪಕ್ಷದ ಸಭೆ ಅನುಮೋದನೆ
ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಲಾಹೋರ್ ಫಸ್ಟ್

