12 ರಿಂದ 15 ವರ್ಷದವರಿಗೆ ಫಿಜರ್ ಕೋವಿಡ್-19 ಲಸಿಕೆ: ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ

12 ರಿಂದ 15 ವರ್ಷದವರಿಗೆ ಫಿಜರ್–ಬಯೊಎನ್‌ಟೆಕ್ ಸಂಸ್ಥೆಗಳ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ.
ಫಿಜರ್ ಬಯೋಂಟೆಕ್ ಲಸಿಕೆ
ಫಿಜರ್ ಬಯೋಂಟೆಕ್ ಲಸಿಕೆ

ವಾಷಿಂಗ್ಟನ್: 12 ರಿಂದ 15 ವರ್ಷದವರಿಗೆ ಫಿಜರ್–ಬಯೊಎನ್‌ಟೆಕ್ ಸಂಸ್ಥೆಗಳ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ.

12-15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್–ಬಯೊಎನ್‌ಟೆಕ್ ಅಮೆರಿಕ ಸರ್ಕಾರಕ್ಕೆ ಕಳೆದ ವಾರ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಗೆ ಸ್ಪಂದಿಸಿರುವ ಅಮೆರಿಕ ಸರ್ಕಾರ ಮಕ್ಕಳಿಗೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.

ಅಮೆರಿಕದ ಎಫ್‌ಡಿಎ (ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ) ಅನುಮತಿ ನೀಡಿದ್ದು, ಇದಕ್ಕಾಗಿ ಲಸಿಕೆ ಬಳಕೆಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಅಮೆರಿಕ ಆಂತರಿಕ ಸಚಿವಾಲಯ ಹೇಳಿದೆ.

ಪ್ರಸ್ತುತ ಅಮೆರಿಕದಲ್ಲಿ ಫಿಜರ್–ಬಯೊಎನ್‌ಟೆಕ್ ಕೋವಿಡ್‌ ಲಸಿಕೆಯನ್ನು 16 ವರ್ಷ ಮೇಲ್ಪಟ್ಟವರಿಗೆ ನೀಡಲು ಅಮೆರಿಕದಲ್ಲಿ ಅನುಮತಿ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com