ಅಮೆರಿಕಾ: ಏರ್​ ಶೋ ವೇಳೆ 2ನೇ ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ, 6 ಮಂದಿ ಸಾವು

2ನೇ ವಿಶ್ವಯುದ್ಧದ ಸ್ಮರಣಾರ್ಥಕವಾಗಿ ಶನಿವಾರ ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಟೆಕ್ಸಾಸ್​ ನಗರದಲ್ಲಿ ನಡೆದಿದೆ.
ವೈಮಾನಿಕ ಪ್ರದರ್ಶನದ ವೇಳೆ ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ವಿಮಾನಗಳು.
ವೈಮಾನಿಕ ಪ್ರದರ್ಶನದ ವೇಳೆ ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ವಿಮಾನಗಳು.

ಟೆಕ್ಸಾಸ್: 2ನೇ ವಿಶ್ವಯುದ್ಧದ ಸ್ಮರಣಾರ್ಥಕವಾಗಿ ಶನಿವಾರ ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಟೆಕ್ಸಾಸ್​ ನಗರದಲ್ಲಿ ನಡೆದಿದೆ.

ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-63 ಕಿಂಗ್‌ಕೋಬ್ರಾ ಎಂಬ ಎರಡನೇ ವಿಶ್ವಯುದ್ಧ ಕಾಲದ ಎರಡು ಯುದ್ಧವಿಮಾನಗಳು ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್‌ನಲ್ಲಿ ನಡೆದ ಏರ್‌ಶೋನಲ್ಲಿ ಭಾಗಿಯಾಗಿದ್ದವು.

ಆದರೆ, ಮಧ್ಯಾಹ್ನ ಸುಮಾರಿಗೆ ಪ್ರದರ್ಶನದ ವೇಳೆ ಎರಡೂ ಯುದ್ಧ ವಿಮಾನಗಳ ವಿಂಗ್ಸ್ ತಗುಲಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ತುರ್ತು ಘಟಕ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು, ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಾರ್ಯಾಚರಣೆ ವೇಳೆ 6 ಮೃತ ದೇಹ ಪತ್ತೆಯಾಗಿರುವ ಮಾಹಿತಿ ಸಿಕ್ಕಿದ್ದು ಇನ್ನಷ್ಟು ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com