ಅಮೆರಿಕಾ ಶಾಲೆಯಲ್ಲಿ ಗುಂಡಿನ ದಾಳಿ: ಮೂವರ ಸಾವು

ಅಮೆರಿಕಾದ ಸೆಂಟ್ ಲೂಯಿಸ್‍ನ ಹೈಸ್ಕೂಲ್‍ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಯುವತಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಗುಂಡಿನ ದಾಳಿ ನಡೆದ ಸ್ಥಳದಲ್ಲಿ ನೆರೆದಿರುವ ಜನ.
ಗುಂಡಿನ ದಾಳಿ ನಡೆದ ಸ್ಥಳದಲ್ಲಿ ನೆರೆದಿರುವ ಜನ.

ಸೆಂಟ್ ಲೂಯಿಸ್: ಅಮೆರಿಕಾದ ಸೆಂಟ್ ಲೂಯಿಸ್‍ನ ಹೈಸ್ಕೂಲ್‍ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಯುವತಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಗುಂಡಿನ ದಾಳಿಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ದಾಳಿಕೋರನನ್ನು ಹತ್ಯೆ ಮಾಡಿದ್ದಾರೆ.

ಸೆಂಟ್ರಲ್ ವಿಷ್ಯುವಲ್ ಆ್ಯಂಡ್, ಪರ್ಫಾರ್ಮಿಂಗ್ ಆರ್ಟ್ಸ್‌ ಹೈಸ್ಕೂಲ್‍ ನಲ್ಲಿ ಈ ದಾಳಿ ಸಂಭವಿಸಿದ್ದು, ವಿದ್ಯಾರ್ಥಿಗಳು ಭೀತಿಯಿಂದ ತರಗತಿಗಳ ಬಾಗಿಲು ಮುಚ್ಚಿಕೊಂಡು ಮೂಲೆ ಮೂಲೆಗಳಲ್ಲಿ ಅವಿತುಕೊಂಡಿದ್ದರು.

ದಾಳಿಕೋರ ಸುಮಾರು 20 ವರ್ಷ ವಯಸ್ಸಿನವನಾಗಿದ್ದ ಎಂದು ಪೊಲೀಸ್ ಆಯುಕ್ತ ಮೈಕೆಲ್ ಸ್ಯಾಕ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com