ಗಾಜಾ ಸಂಘರ್ಷದ ನಡುವೆ ಇರಾಕ್ ನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿ ಮೇಲೆ ರಾಕೆಟ್ ದಾಳಿ!

ಇಸ್ರೇಲ್-ಹಮಾಸ್ ಸಂಘರ್ಷದ ನಡುವೆಯೇ ಇರಾಕ್ ನ ಬಾಗ್ದಾದ್ ನಲ್ಲಿನ ಅಮೇರಿಕಾ ರಾಯಭಾರಿ ಕಚೇರಿ ಮೇಲೆ ರಾಕೆಟ್ ದಾಳಿ ನಡೆದಿದೆ.
ಬಾಗ್ದಾದ್ ನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿ ಪ್ರದೇಶ
ಬಾಗ್ದಾದ್ ನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿ ಪ್ರದೇಶ

ಬಾಗ್ದಾದ್: ಇಸ್ರೇಲ್-ಹಮಾಸ್ ಸಂಘರ್ಷದ ನಡುವೆಯೇ ಇರಾಕ್ ನ ಬಾಗ್ದಾದ್ ನಲ್ಲಿನ ಅಮೇರಿಕಾ ರಾಯಭಾರಿ ಕಚೇರಿ ಮೇಲೆ ರಾಕೆಟ್ ದಾಳಿ ನಡೆದಿದೆ.

ಹಲವು ರಾಕೆಟ್ ಗಳಿಂದ ದಾಳಿ ನಡೆದಿದೆಯಾದರೂ ಇದರಿಂದ ಪ್ರಾಣಾಪಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ಅಮೇರಿಕಾ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ತಕ್ಷಣಕ್ಕೆ ಯಾರೂ ಸಹ ಹೊಣೆಗಾರಿಕೆ ಹೊತ್ತುಕೊಂಡಿಲ್ಲ. ಇರಾಕ್ ಮತ್ತು ನೆರೆಯ ಸಿರಿಯಾದಲ್ಲಿ ಜಿಹಾದಿಗಳ ವಿರುದ್ಧ ಹೋರಾಡುವ ಅಂತರರಾಷ್ಟ್ರೀಯ ಒಕ್ಕೂಟವನ್ನು ಯುನೈಟೆಡ್ ಸ್ಟೇಟ್ಸ್ ಮುನ್ನಡೆಸುತ್ತಿದೆ ಮತ್ತು ಅದರ ಪಡೆಗಳು ಇತ್ತೀಚಿನ ವಾರಗಳಲ್ಲಿ ದಾಳಿಗೆ ಒಳಗಾಗಿವೆ.

ಗಾಝಾ ಪಟ್ಟಿಯಲ್ಲಿ ಅಮೆರಿಕದ ಮಿತ್ರರಾಷ್ಟ್ರ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪು ಹಮಾಸ್ ನಡುವೆ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಯುದ್ಧದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com