ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್‌ ಉಗ್ರರ ಸುರಂಗ: ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್‌!

ಹಮಾಸ್ ಬಂಡುಕೋರರು ಅಡುಗುದಾಣಗಳ ಧ್ವಂಸ ಮಾಡಲು ಮುಂದಾಗಿರುವ ಇಸ್ರೇಲ್‌ ಹೊಸ ವಿಡಿಯೋ ಹಂಚಿಕೊಂಡಿದೆ. ವಿಡಿಯೋದಲ್ಲಿ ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಸುರಂಗವೊಂದು ಇರುವುದು ಕಂಡು ಬಂದಿದ್ದು...
ಆಸ್ಪತ್ರೆಯಲ್ಲಿ ಸುರಂಗ ಪತ್ತೆಯಾಗಿರುವುದು.
ಆಸ್ಪತ್ರೆಯಲ್ಲಿ ಸುರಂಗ ಪತ್ತೆಯಾಗಿರುವುದು.

ಜೆರುಸಲೇಂ: ಹಮಾಸ್ ಬಂಡುಕೋರರು ಅಡುಗುದಾಣಗಳ ಧ್ವಂಸ ಮಾಡಲು ಮುಂದಾಗಿರುವ ಇಸ್ರೇಲ್‌ ಹೊಸ ವಿಡಿಯೋ ಹಂಚಿಕೊಂಡಿದೆ. ವಿಡಿಯೋದಲ್ಲಿ ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಸುರಂಗವೊಂದು ಇರುವುದು ಕಂಡು ಬಂದಿದ್ದು, ಇಲ್ಲಿ ಹಮಾಸ್‌ ಉಗ್ರರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು ಎಂದು ಇಸ್ರೇಲ್ ಹೇಳಿದೆ.

ಈ ಸುರಂಗದ ವಿಡಿಯೋವನ್ನು ಇಸ್ರೇಲಿ ಸೇನೆ ಮಂಗಳವಾರ ಬಿಡುಗಡೆ ಮಾಡುವ ಮೂಲಕ ಮೂಲಕ ಹಮಾಸ್‌ ಉಗ್ರರ ಕೃತ್ಯವನ್ನು ಬಹಿರಂಗ ಮಾಡಿದೆ.

ಗಾಜಾದಲ್ಲಿನ ರಾಂಟಿಸ್ಸಿ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರರು ಸಂಗ್ರಹಿಸಿಟ್ಟಿರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್‌ ಸೈನ್ಯದ ವಕ್ತಾರ ಹೇಳಿದ್ದು, ಈ ಕುರಿತ ವೀಡಿಯೊ ಮತ್ತು ಫೋಟೋಗಳನ್ನು ಇಸ್ರೇಲಿ ಸೇನಾಪಡೆ ಬಿಡುಗಡೆ ಮಾಡಿದೆ.

ಈ ಸುರಂಗಕ್ಕೆ ಸೋಲಾರ್ ಮೂಲಕ ವಿದ್ಯುತ್ ಸಂಚಾರವಾಗುತ್ತಿದ್ದು, ಸುಮಾರು 20 ಅಡಿ ಆಳವಿದೆ. ಈ ಮಾರ್ಗ ನೇರವಾಗಿ ಆಸ್ಪತ್ರೆಯ ನೆಲಮಹಡಿ ತಲುಪಿರುವುದನ್ನು ಇಸ್ರೇಲ್ ಪಡೆ ಮತ್ತೆ ಮಾಡಿದೆ. ಸುರಂಗದ ಬಾಗಿಲು ಬುಲೆಟ್ ಪ್ರೂಫ್ ಹಾಗೂ ದಾಳಿಯನ್ನು ತಡೆದುಕೊಳ್ಳಬಹುದುದಾಗಿದ್ದು, ಮೇಲಿನಿಂದ ಸುರಂಗ ಪತ್ತೆ ಮಾಡಲು ಕಷ್ಟವಾಗುವ ರೀತಿ ರಚಿಸಲಾಗಿದೆ.

ಈ ಸುರಂಗ ಮಾರ್ಗದಿಂದ ರಾಂಟಿಸಿ ಆಸ್ಪತ್ರೆಯು ಕೇವಲ 200 ಗಜಗಳ (183 ಮೀಟರ್) ದೂರದಲ್ಲಿದೆ. ಹಮಾಸ್ ಆಸ್ಪತ್ರೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ಪಡೆ ಆರೋಪಿಸಿ, ಆಸ್ಪತ್ರೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಆದರೆ ಸುರಂಗ ಪತ್ತೆ ಮಾಡಲು ವಿಫಲವಾಗಿತ್ತು.

ಈ ಸುರಂಗಗಳ ಒಳಗೆ, ಹಮಾಸ್ ಭಯೋತ್ಪಾದಕರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಜೊತೆಗೆ ಅವರು ಇಲ್ಲಿಂದಲೇ ನಮ್ಮ ಮೇಲೆ ತಂತ್ರ ರೂಪಿಸುತ್ತಾರೆ ಎಂದು ಇಸ್ರೇಲ್ ಭದ್ರತಾ ಪಡೆಗಳು ಹೇಳಿವೆ.

ಸುರಂಗವು ಯಾರಿಗೂ ಸಿಗದಂತೆ ಮುಚ್ಚಲ್ಪಟ್ಟಿದೆ ಮತ್ತು ಆಸ್ಪತ್ರೆಯು ಶಾಲೆ ಮತ್ತು ಯುಎನ್ ಕಟ್ಟಡದ ಪಕ್ಕದಲ್ಲಿದೆ ಎಂದು ಇಸ್ರೇಲಿ ಪಡೆಗಳು ತಿಳಿಸಿವೆ.

ಈ ಸುರಂಗ ಪ್ರವೇಶಿಸಿದ ಇಸ್ರೇಲಿ ಪಡೆಗಳಿಗೆ ಗ್ರೆನೇಡ್, ಬಾಂಬ್‌ಗಳು, ನೆಲ ಬಾಂಬ್, ಬುಲೆಟ್ ಪ್ರೂಫ್ ಜಾಕೆಟ್, ರಾಕೆಟ್ ಲಾಂಚರ್‌ಗಳು ಸೇರಿ ಗನ್‌ಗಳು ಸಿಕ್ಕಿವೆ. ಗಾಜಾದಲ್ಲಿರುವ ಇತರೆ ಸುರಂಗದಲ್ಲೂ ಈ ರೀತಿ ಶಸ್ತ್ರಾಸ್ತ್ರಗಳ ಸಂಗ್ರಹಿಸಿಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಇಸ್ರೇಲ್‌ ಸೇನೆ ಆಸ್ಪತ್ರೆಯ ಮೇಲೆ ಏರ್‌ ಸ್ಟ್ರೈಕ್‌ ಮಾಡುವ ಮೂಲಕ ಮಗ್ದ ಮಕ್ಕಳನ್ನು ಹತ್ಯೆ ಮಾಡುತ್ತಿದೆ ಎಂದು ಹಮಾಸ್‌ ಹೇಳಿತ್ತು. ಆದರೆ, ಇಸ್ರೇಲ್‌ ಈ ಆರೋಪವನ್ನು ತಳ್ಳಿ ಹಾಕಿ, ಹಮಾಸ್‌ ಉಗ್ರರು ಆಸ್ಪತ್ರೆಯನ್ನು ರಕ್ಷಣಾ ಕವಚವನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿತ್ತು. ಈಗ ಸುರಂಗದ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಹಮಾಸ್‌ ಉಗ್ರರ ಬಣ್ಣವನ್ನು ಬಯಲು ಮಾಡಿದೆ.

ರಾಂಟಿಸ್ಸಿ ಆಸ್ಪತ್ರೆ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ಮಕ್ಕಳ ಆಸ್ಪತ್ರೆಯಾಗಿದ್ದು, ಇಲ್ಲಿ ಗ್ರೆನೇಡ್‌ಗಳು ಮತ್ತು ಇತರ ಸ್ಫೋಟಕಗಳು ಪತ್ತೆಯಾಗಿದೆ. ಇಲ್ಲಿ ಸಣ್ಣ ಸಣ್ಣ ಅಡುಗೆಮನೆ ಇದ್ದು, ಸುರಂಗದ ಬಳಿಯಲ್ಲೇ ಹಿರಿಯ ಹಮಾಸ್ ಕಮಾಂಡರ್ ಮನೆ ಇತ್ತು ಎನ್ನಲಾಗಿದೆ.

ಹಮಾಸ್ ಬಂದೂಕುಧಾರಿಗಳು ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್‌ಗೆ ನುಗ್ಗಿ, ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದರು. ನಂತರ 240 ಮಂದಿ ಇಸ್ರೇಲಿಗರನ್ನು ಗಾಜಾಕ್ಕೆ ತಂದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com