ಇಂಡೋನೇಷ್ಯಾ ತೈಲ ಡಿಪೋದಲ್ಲಿ ಬೆಂಕಿ: 17 ಮಂದಿ ಸಾವು, ಸಾವಿರಾರು ಜನರ ಸ್ಥಳಾಂತರ

ಇಂಡೋನೇಷ್ಯಾ ರಾಜಧಾನಿಯಲ್ಲಿನ ಇಂಧನ ಶೇಖರಣಾ ಡಿಪೋದಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು ಹತ್ತಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂಧನ ಡಿಪೋಗೆ ಬೆಂಕಿ
ಇಂಧನ ಡಿಪೋಗೆ ಬೆಂಕಿ

ಜಕಾರ್ತಾ: ಇಂಡೋನೇಷ್ಯಾ ರಾಜಧಾನಿಯಲ್ಲಿನ ಇಂಧನ ಶೇಖರಣಾ ಡಿಪೋದಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು ಹತ್ತಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಕಿ ಇತರ ಪ್ರದೇಶಗಳಿಗೆ ವ್ಯಾಪಿಸುತ್ತಿದ್ದಂತೆ ಅಲ್ಲಿ ವಾಸಿಸುತ್ತಿದ್ದ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ತೈಲ ಮತ್ತು ಅನಿಲ ಕಂಪನಿ ಪರ್ಟಮಿನಾದಿಂದ ನಿರ್ವಹಿಸಲ್ಪಡುವ ಇಂಧನ ಸಂಗ್ರಹಣಾ ಡಿಪೋ ಉತ್ತರ ಜಕಾರ್ತಾದ ತನಾಹ್ ಮೆರಾಹ್ ಪ್ರದೇಶದ ಜನನಿಬಿಡ ಪ್ರದೇಶದ ಸಮೀಪದಲ್ಲಿದೆ. ಇಂಡೋನೇಷ್ಯಾದ ಇಂಧನ ಅಗತ್ಯಗಳ ಶೇಕಡ 25 ಪ್ರತಿಶತ ಈ ಡಿಪೋ ಪೂರೈಸುತ್ತದೆ.

ಕನಿಷ್ಠ 180 ಅಗ್ನಿಶಾಮಕ ಸಿಬ್ಬಂದಿ ಮತ್ತು 37 ಅಗ್ನಿಶಾಮಕ ವಾಹನಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಂಕಿಯನ್ನು ನಂದಿಸಲು ಕೆಲಸ ಮಾಡುತ್ತಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಡುಡುಂಗ್ ಅಬ್ದುರ್ಚಮನ್, ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. 42 ಜನರು ಆಸ್ಪತ್ರೆಗೆ ದಾಖಲಾಗಿದ್ದು ಕೆಲವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com