ಸಿಡ್ನಿ ಮಾಲ್‌ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿತ: 5 ಮಂದಿ ಸಾವು; ಆರೋಪಿಗೆ ಗುಂಡಿಟ್ಟ ಪೊಲೀಸರು, ಭೀಕರ ದೃಶ್ಯ!

ಸಿಡ್ನಿಯ ಬೋಂಡಿ ಮಾಲ್‌ನಲ್ಲಿ ಆಗಂತುಕನೊಬ್ಬ ಸಿಕ್ಕ ಸಿಕ್ಕವರಿಗೆ ಚೂರಿ ಇರಿದಿದ್ದು ಕನಿಷ್ಠ 5 ಜನರು ಸಾವನ್ನಪ್ಪಿದ್ದು ಹಲವರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಆಗಂತುಕ ವ್ಯಕ್ತಿ
ಆಗಂತುಕ ವ್ಯಕ್ತಿ

ಸಿಡ್ನಿ: ಸಿಡ್ನಿಯ ಬೋಂಡಿ ಮಾಲ್‌ನಲ್ಲಿ ಆಗಂತುಕನೊಬ್ಬ ಸಿಕ್ಕ ಸಿಕ್ಕವರಿಗೆ ಚೂರಿ ಇರಿದಿದ್ದು ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು ಹಲವರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಬೋಂಡಿ ಜಂಕ್ಷನ್‌ನಲ್ಲಿರುವ ವೆಸ್ಟ್‌ಫೀಲ್ಡ್ ಮಾಲ್‌ನಲ್ಲಿ ದಾಳಿ ನಡೆದಿದೆ ಎಂದು ವರದಿಗಳು ಸೂಚಿಸಿವೆ. ಸಾಮೂಹಿಕ ಚೂರಿ ಇರಿತ ವರದಿಯಾದ ನಂತರ ಆಗಂತುಕನಿಗೆ ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರನಿಗೆ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಆಂಬ್ಯುಲೆನ್ಸ್ ತಿಳಿಸಿದೆ.

ಯಾವ ಉದ್ದೇಶಕ್ಕೆ ಈ ಕೃತ್ಯ ಎಸಗಲಾಗಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ ಈ ಹಂತದಲ್ಲಿ 'ಭಯೋತ್ಪಾದನೆ' ಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಅನೇಕ ಸಾವುನೋವುಗಳು ವರದಿಯಾಗಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಜೊತೆ ನಾವಿದ್ದೇವೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com