ನ್ಯೂಯಾರ್ಕ್: ಭಯಾನಕ ಘಟನೆ, ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ!

ಮಹಿಳೆಯನ್ನು ಗುರುತಿಸಲಾಗಿಲ್ಲ, 7:30 ರ ಸುಮಾರಿಗೆ ಬ್ರೂಕ್ಲಿನ್ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಸಿಟಿ ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಸ್ಕಾ ಹೇಳಿಕೆ.
Casual Images
ಸಾಂದರ್ಭಿಕ ಚಿತ್ರ
Updated on: 

ನ್ಯೂಯಾರ್ಕ್: ಭಯಾನಕ ಘಟನೆಯೊಂದರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸಬ್ ವೇ ರೈಲಿನೊಂದರಲ್ಲಿ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ.

ಮಹಿಳೆಯನ್ನು ಗುರುತಿಸಲಾಗಿಲ್ಲ, 7:30 ರ ಸುಮಾರಿಗೆ ಬ್ರೂಕ್ಲಿನ್ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಸಿಟಿ ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಸ್ಕಾ ಹೇಳಿದ್ದಾರೆ.

ರೈಲು ನಿಲ್ದಾಣವೊಂದರ ಬಳಿ ಬಂದಾಗ, ಸೀಟಿನಲ್ಲಿ ಹಾಗೆಯೇ ಮಲಗಿದ್ದ ಮಹಿಳೆಯ ಬಳಿ ಬಂದ ಹಂತಕ, ಲೈಟರ್ ನಂತೆ ಕಾಣಿಸುತ್ತಿದ್ದ ಸಾಧನದಿಂದ ಆಕೆಯ ಬಟ್ಟೆಗೆ ಬೆಂಕಿ ಹಚ್ಚಿದ್ದಾನೆ. ನಂತರ ಮಹಿಳೆ ಬಟ್ಟೆ ನೋಡನೋಡುತ್ತಿದ್ದಂತೆಯೇ ಸುಟ್ಟು ಹೋಗಿದೆ. ನಂತರ ಘಟನೆ ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Casual Images
ಮುಂಬೈ: ರೈಲಿನಲ್ಲಿ ಸೀಟಿಗಾಗಿ ಜಗಳ, ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ!

ಮತ್ತೊಂದು ಸಬ್ ವೇ ರೈಲಿನಲ್ಲಿ ಪರಾರಿಯಾಗುತ್ತಿದ್ದ ಹಂತಕವನ್ನು ಬಂಧಿಸಿದ್ದಾರೆ. ಆತನ ಪಾಕೆಟ್ ನಲ್ಲಿ ಲೈಟರ್ ಇತ್ತು ಎಂದು ಟಿಸ್ಕಾ ಹೇಳಿದ್ದಾರೆ.ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com