

ಬಾಲಿ: ಈ ಹಿಂದೆ ಕೇವಲ 12 ಗಂಟೆಗಳಲ್ಲಿ ಸಾವಿರಕ್ಕೂ ಹೆಚ್ಚು ಪುರುಷರೊಂದಿಗೆ ಸೆ** ಮಾಡಿ ದಾಖಲೆ ನಿರ್ಮಿಸಿದ್ದ ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ ಬ್ಲೂ ರನ್ನು ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವಾರ ಇಂಡೋನೇಷ್ಯಾದ ಬಾಲಿಯಲ್ಲಿ 'ಓನ್ಲಿಫ್ಯಾನ್ಸ್' ಸ್ಟಾಕ್ ಬೋನಿ ಬ್ಲೂ ಅವರನ್ನು ಬಂಧಿಸಲಾಗಿದೆ. ಬಾಲಿಯಲ್ಲೂ ಬೋನಿಬ್ಲೂ ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಿಸಿದ ಶಂಕೆಯ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ. ಮುಸ್ಲಿಂ ಬಹುಸಂಖ್ಯಾತ ದೇಶದ ನೈತಿಕ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಯಿತು. ಅವರ ಜೊತೆಗೆ, 15 ಆಸ್ಟ್ರೇಲಿಯನ್ನರು ಸೇರಿದಂತೆ 17 ಪುರುಷ ಪ್ರವಾಸಿಗರನ್ನು ಸಹ ಬಂಧಿಸಲಾಗಿದೆ ಎಂದು ಇಂಡೋನೇಷ್ಯಾ ಮಾಧ್ಯಮಗಳು ವರದಿ ಮಾಡಿದೆ.
ಬೋನಿ ಬ್ಲೂ ಅವರು ಬಾಲಿಯಲ್ಲಿ ತಮ್ಮ "ಬ್ಯಾಂಗ್‌ಬಸ್" ಪ್ರವಾಸವನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಕಾನೂನುಬದ್ಧ ಆಸ್ಟ್ರೇಲಿಯಾದ 'ಶಾಲಾ ವಿದ್ಯಾರ್ಥಿಗಳೊಂದಿಗೆ' ಸ್ಪಷ್ಟ ವಿಷಯವನ್ನು ಒಳಗೊಂಡಿತ್ತು. ಪೊಲೀಸರ ಪ್ರಕಾರ, ಅವರ ಗುಂಪಿನಲ್ಲಿ ಬ್ರಿಟಿಷ್ ಮತ್ತು ಆಸ್ಟ್ರೇಲಿಯಾದ ರಾಷ್ಟ್ರೀಯತೆಗಳ ಕನಿಷ್ಠ 17 ಪುರುಷ ಪ್ರವಾಸಿಗರು ಸೇರಿದ್ದಾರೆ. ಅವರು 19 ರಿಂದ 40 ವರ್ಷ ವಯಸ್ಸಿನವರಾಗಿದ್ದರು. ತಮ್ಮ ಅಶ್ಲೀಲ ಚಿತ್ರ ತಯಾರಿಕೆಗೆ ಇವರನ್ನು ಬಳಸಿಕೊಂಡು ಇಂಡೋನೇಷ್ಯಾ ಕಾನೂನು ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಬೋನಿ ಬ್ಲೂ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ದಾಳಿಯ ಸಮಯದಲ್ಲಿ ಪೊಲೀಸರು ಕ್ಯಾಮೆರಾಗಳು, ಗರ್ಭನಿರೋಧಕಗಳು ಮತ್ತು "ಬೋನಿ ಬ್ಲೂಸ್ ಬ್ಯಾಂಗ್‌ಬಸ್" ಎಂದು ಹೆಸರಿಸಲಾದ ವಾಹನವನ್ನು ವಶಪಡಿಸಿಕೊಂಡರು. ಬ್ಲೂ ಅವರ ಪಾಸ್‌ಪೋರ್ಟ್ ಅನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ಬಾಕಿ ಇರುವ ಕಾರಣ ಅವರು ಬಂಧನದಲ್ಲಿದ್ದಾರೆ ಎನ್ನಲಾಗಿದೆ.
15 ವರ್ಷ ಜೈಲು, 6 ಬಿಲಿಯನ್ ದಂಡ, ಗಡಿಪಾರು ಶಿಕ್ಷೆ
ಇನ್ನು ಈ ಪ್ರಕರಣದಲ್ಲಿ ಬೋನಿ ಬ್ಲೂ ತಪ್ಪಿತಸ್ಥರೆಂದು ಸಾಬೀತಾದರೆ, ಇಂಡೋನೇಷ್ಯಾದ ಕಟ್ಟುನಿಟ್ಟಾದ ಅಶ್ಲೀಲ ವಿರೋಧಿ ಕಾನೂನುಗಳ ಅಡಿಯಲ್ಲಿ ಅವರಿಗೆ 15 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 6 ಬಿಲಿಯನ್ ರೂಪಾಯಿ (ಸುಮಾರು $541,000) ವರೆಗೆ ದಂಡ ವಿಧಿಸಬಹುದು. ಆದಾಗ್ಯೂ, ಹಲವಾರು ವರದಿಗಳು ಬೋನಿ ಬ್ಲೂ ರನ್ನು ಗಡೀಪಾರು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇನ್ನು ಬಂಧಿತ ಬೋನಿ ಬ್ಲೂ ಅವರ ಪ್ರಸ್ತುತ ಪರಿಸ್ಥಿತಿಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
ಯಾರು ಈ ಬೋನಿ ಬ್ಲೂ?
ಬೋನಿ ಬ್ಲೂ 26 ವರ್ಷದ ಬ್ರಿಟನ್ ಪ್ರಜೆಯಾಗಿದ್ದು, ಆಕೆಯ ನಿಜವಾದ ಹೆಸರು ಟಿಯಾ ಬಿಲ್ಲಿಂಗರ್ ಎಂದು. ಈ ವರ್ಷದ ಆರಂಭದಲ್ಲಿ ಈ ಕೇವಲ 12 ಗಂಟೆಗಳಲ್ಲಿ 1,057 ಪುರುಷರೊಂದಿಗೆ ಸೆಕ್ಸ್ ಮಾಡಿ ದಾಖಲೆ ನಿರ್ಮಿಸಿದ್ದಾಗಿ ಹೇಳಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಅಲ್ಲದೆ ಆಕೆ 2004 ರಲ್ಲಿ ಲಿಸಾ ಸ್ಪಾರ್ಕ್ಸ್‌ಎಕ್ಸ್ ಸ್ಥಾಪಿಸಿದ 24 ಗಂಟೆಗಳಲ್ಲಿ 919 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ದಾಖಲೆಯನ್ನು ಮುರಿದಿದ್ದಾಗೆ ಹೇಳಿಕೊಂಡಿದ್ದರು.
ಬೋನಿ ಬ್ಲೂಗೆ ಮುಳಾದ ಪ್ರಚಾರ ವಿಡಿಯೋ
ಇನ್ನು ಈ ಹಿಂದೆ ತಮ್ಮ "ಬ್ಯಾಂಗ್‌ಬಸ್" ಪ್ರವಾಸವನ್ನು ಪ್ರಚಾರ ಮಾಡಿದ್ದ ಬೋನಿ ಬ್ಲೂ ಬಹಿರಂಗವಾಗಿಯೇ ಅಪ್ರಾಪ್ತ ಶಾಲಾ ಗಂಡು ಮಕ್ಕಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ನಾನು ಬಾಲಿಯಲ್ಲಿದ್ದೇನೆ. ಅದರ ಅರ್ಥ ನಿಮಗೆ ತಿಳಿದಿದೆ ಎಂದು ಹೇಳಿದ್ದರು.
ಬೋನಿ ಬ್ಲೂ ಅವರ ಈ ವಿಡಿಯೋಗೆ ಇಂಡೋನೇಷ್ಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ಥಳೀಯ ಅಧಿಕಾರಿಗಳಿಗೆ ಸಾಕಷ್ಟು ದೂರುಗಳು ಬಂದಿದ್ದವು. ತಮ್ಮ ಅಶ್ಲೀಲ ಕಟೆಂಟ್ ಗಾಗಿ ಚಿತ್ರೀಕರಿಸಲು ರೆಸಾರ್ಟ್ ದ್ವೀಪದ ಸುತ್ತಲೂ ಪ್ರಯಾಣಿಸಲು ಬಸ್ ಅನ್ನು ಬಾಡಿಗೆಗೆ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ವಿದೇಶಿ ಪ್ರಜೆಗಳನ್ನು ಒಳಗೊಂಡ ಇಂಡೋನೇಷ್ಯಾದ ಹಿಂದಿನ ಪ್ರಕರಣಗಳು ಮತ್ತು ಸ್ಪಷ್ಟ ವಿಷಯವನ್ನು ಗಮನಿಸಿದರೆ, ಬೋನಿ ಬ್ಲೂ ವಿರುದ್ಧ ಕಾನೂನು ಕ್ರಮಕ್ಕಿಂತ ಗಡೀಪಾರು ಮಾಡುವ ಸಾಧ್ಯತೆ ಹೆಚ್ಚು ಎಂದು ಕಾನೂನು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
Advertisement