ಇರಾನ್-ಇಸ್ರೇಲ್ ಯುದ್ಧ: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

ಇಂದು ಭಾನುವಾರ ಮುಂಜಾನೆ ಯುಎಸ್ ಮಿಲಿಟರಿ ಇರಾನ್‌ನ ಮೂರು ತಾಣಗಳ ಮೇಲೆ ದಾಳಿ ಮಾಡಿತು, ಜೂನ್ 13 ರಂದು ಇರಾನಿನ ಪರಮಾಣು ತಾಣಗಳನ್ನು ಮೊದಲು ಹೊಡೆಯುವ ಮೂಲಕ ಇಸ್ರೇಲ್‌ ಬೆಂಬಲಿಸಿತು.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದ ಉಂಟಾದ ಷೇರು ಮಾರುಕಟ್ಟೆ ಏರಿಳಿತದ ನಡುವೆಯೂ, ಜೂನ್‌ನಲ್ಲಿ ಭಾರತವು ರಷ್ಯಾದ ತೈಲ ಖರೀದಿಯನ್ನು ಹೆಚ್ಚಿಸಿದೆ, ಸೌದಿ ಅರೇಬಿಯಾ ಮತ್ತು ಇರಾಕ್‌ನಂತಹ ಮಧ್ಯಪ್ರಾಚ್ಯ ಪೂರೈಕೆದಾರರಿಂದ ಒಟ್ಟು ಪ್ರಮಾಣಕ್ಕಿಂತ ಹೆಚ್ಚಿನದನ್ನು ಆಮದು ಮಾಡಿಕೊಳ್ಳುತ್ತಿದೆ.

ಇಂದು ಭಾನುವಾರ ಮುಂಜಾನೆ ಯುಎಸ್ ಮಿಲಿಟರಿ ಇರಾನ್‌ನ ಮೂರು ತಾಣಗಳ ಮೇಲೆ ದಾಳಿ ಮಾಡಿತು, ಜೂನ್ 13 ರಂದು ಇರಾನಿನ ಪರಮಾಣು ತಾಣಗಳನ್ನು ಮೊದಲು ಹೊಡೆಯುವ ಮೂಲಕ ಇಸ್ರೇಲ್‌ ಬೆಂಬಲಿಸಿತು.

ಭಾರತೀಯ ಸಂಸ್ಕರಣಾಗಾರಗಳು ಜೂನ್‌ನಲ್ಲಿ ದಿನಕ್ಕೆ 2-2.2 ಮಿಲಿಯನ್ ಬ್ಯಾರೆಲ್‌ಗಳ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ. ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಮತ್ತು ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಖರೀದಿಸಿದ ಒಟ್ಟು ಪ್ರಮಾಣಕ್ಕಿಂತ ಹೆಚ್ಚು ಎಂದು ಜಾಗತಿಕ ವ್ಯಾಪಾರ ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ನ ಪ್ರಾಥಮಿಕ ಮಾಹಿತಿ ತೋರಿಸಿದೆ.

Representational image
ಅಣ್ವಸ್ತ್ರ ಕೇಂದ್ರಗಳ ಮೇಲೆ ದಾಳಿ: ಅಮೆರಿಕಾ ಎಚ್ಚರಿಕೆಗೆ ಬಗ್ಗದ ಇರಾನ್; ಇಸ್ರೇಲ್‌ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್‌ಗಳ ಸುರಿಮಳೆ; 23ಕ್ಕೂ ಹೆಚ್ಚು ಜನರಿಗೆ ಗಾಯ..!

ಮೇ ತಿಂಗಳಲ್ಲಿ ರಷ್ಯಾದಿಂದ ಭಾರತದ ತೈಲ ಆಮದು ದಿನಕ್ಕೆ 1.96 ಮಿಲಿಯನ್ ಬ್ಯಾರೆಲ್‌ಗಳು(bpd). ಜೂನ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನಿಂದ ಆಮದು ಕೂಡ 439,000 ಬಿಪಿಡಿಗೆ ಏರಿದೆ, ಇದು ಹಿಂದಿನ ತಿಂಗಳಲ್ಲಿ ಖರೀದಿಸಲಾದ 280,000 ಬಿಪಿಡಿಗಿಂತ ದೊಡ್ಡ ಜಿಗಿತವಾಗಿದೆ.

ಮಧ್ಯಪ್ರಾಚ್ಯದಿಂದ ಪೂರ್ಣ ತಿಂಗಳ ಆಮದು ಅಂದಾಜುಗಳು ದಿನಕ್ಕೆ ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳಷ್ಟಿದ್ದು, ಇದು ಹಿಂದಿನ ತಿಂಗಳ ಖರೀದಿಗಿಂತ ಕಡಿಮೆಯಾಗಿದೆ ಎಂದು ಕೆಪ್ಲರ್ ಹೇಳಿದ್ದಾರೆ.

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆ ರಾಷ್ಟ್ರವಾದ ಭಾರತವು ವಿದೇಶಗಳಿಂದ ಸುಮಾರು 5.1 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ, ಇದನ್ನು ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ.

Representational image
'37 ಗಂಟೆ ಸತತ ಪಯಣ, ಆಗಸದಲ್ಲಿಯೇ ಇಂಧನ ಭರ್ತಿ': Iran ಪರಮಾಣು ಘಟಕದ ಮೇಲೆ ದಾಳಿ ಮಾಡಿದ B-2 Spirit ರೋಚಕ ಪಯಣ

ಮಧ್ಯಪ್ರಾಚ್ಯದಿಂದ ಸಾಂಪ್ರದಾಯಿಕವಾಗಿ ತೈಲವನ್ನು ಪಡೆಯುತ್ತಿರುವ ಭಾರತವು ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ನಂತರ ರಷ್ಯಾದಿಂದ ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಇಲ್ಲಿಯವರೆಗೆ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿಲ್ಲ. ಸರಬರಾಜುಗಳು ಇಲ್ಲಿಯವರೆಗೆ ಯಾವುದೇ ಪರಿಣಾಮ ಬೀರದಿದ್ದರೂ, ಮುಂಬರುವ ದಿನಗಳಲ್ಲಿ ಮಧ್ಯಪ್ರಾಚ್ಯದಿಂದ ಕಚ್ಚಾ ತೈಲ ಸಾಗಣೆಯಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಕೆಪ್ಲರ್‌ನ ಸಂಸ್ಕರಣೆ ಮತ್ತು ಮಾಡೆಲಿಂಗ್‌ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ,

ಉತ್ತರಕ್ಕೆ ಇರಾನ್ ಮತ್ತು ದಕ್ಷಿಣಕ್ಕೆ ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಇರುವ ಹಾರ್ಮುಜ್ ಜಲಸಂಧಿಯು ಸೌದಿ ಅರೇಬಿಯಾ, ಇರಾನ್, ಇರಾಕ್, ಕುವೈತ್ ಮತ್ತು ಯುಎಇಗಳಿಂದ ತೈಲ ರಫ್ತಿಗೆ ಪ್ರಮುಖ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.

Representational image
Iran-Israel war: ಅಖಾಡಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ; ಇರಾನ್ ನ 3 ಅಣುಸ್ಥಾವರಗಳ ಮೇಲೆ ಏರ್‌ ಸ್ಟ್ರೈಕ್‌..!

ವಿಶೇಷವಾಗಿ ಕತಾರ್‌ನಿಂದ ಬರುವ ಅನೇಕ ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆಗಳು ಸಹ ಈ ಜಲಸಂಧಿಯ ಮೂಲಕ ಹಾದು ಹೋಗುತ್ತವೆ. ಇಸ್ರೇಲ್ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ, ಟೆಹ್ರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಬೆದರಿಕೆ ಹಾಕಿದೆ, ಇದರ ಮೂಲಕ ವಿಶ್ವದ ತೈಲದ ಐದನೇ ಒಂದು ಭಾಗ ಮತ್ತು ಪ್ರಮುಖ ಎಲ್ ಎನ್ ಜಿ ರಫ್ತು ಸಾಗಣೆಯಾಗಿದೆ.

ಭಾರತವು ತನ್ನ ಎಲ್ಲಾ ತೈಲದ ಸುಮಾರು ಶೇಕಡಾ 40ರಷ್ಟು ಮತ್ತು ಅದರ ಅರ್ಧದಷ್ಟು ಅನಿಲವನ್ನು ಕಿರಿದಾದ ಜಲಸಂಧಿಯ ಮೂಲಕ ಆಮದು ಮಾಡಿಕೊಳ್ಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com