ಶೀಘ್ರದಲ್ಲೇ ಭಾರತದೊಂದಿಗೆ 'ಅತಿ ದೊಡ್ಡ ವ್ಯಾಪಾರ ಒಪ್ಪಂದ': ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್; Video

ಚೀನಾ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಈಗಷ್ಟೇ ಸಹಿ ಮಾಡಿದ್ದೇವೆ. ಎಲ್ಲರೊಂದಿಗೂ ನಾವು ಒಪ್ಪಂದ ಮಾಡಿಕೊಳ್ಳುವುದಿಲ್ಲ... ಆದರೆ ನಾವು ಕೆಲ ಒಳ್ಳೆಯ ಒಪ್ಪಂದ ಮಾಡಿಕೊಳ್ಳಲಿದ್ದೇವೆ.
Donald trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಚೀನಾ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿರುವುದನ್ನು ಗುರುವಾರ ಪ್ರಕಟಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಶೀಘ್ರದಲ್ಲೇ ಭಾರತದೊಂದಿಗೆ 'ಅತಿ ದೊಡ್ಡ ವ್ಯಾಪಾರ ಒಪ್ಪಂದ" ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ.

ಶ್ವೇತಭವನದಲ್ಲಿ ನಡೆದ ಸಮಾರಂಭದ ಮಾತನಾಡಿರುವ ಟ್ರಂಪ್ ಅವರು, "ಚೀನಾ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಈಗಷ್ಟೇ ಸಹಿ ಮಾಡಿದ್ದೇವೆ. ಎಲ್ಲರೊಂದಿಗೂ ನಾವು ಒಪ್ಪಂದ ಮಾಡಿಕೊಳ್ಳುವುದಿಲ್ಲ... ಆದರೆ ನಾವು ಕೆಲ ಒಳ್ಳೆಯ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಬಹುಶಃ ಮುಂದಿನ ದಿನಗಳಲ್ಲಿ ಭಾರತದ ಜೊತೆಗೆ ದೊಡ್ಡ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ನಾವು ಭಾರತವನ್ನು ಅನಾವರಣಗೊಳಿಸಲಿದ್ದೇವೆ. ಚೀನಾ ಜೊತೆಗಿನ ಒಪ್ಪಂದದಲ್ಲಿ ನಾವು ಚೀನಾವನ್ನು ಅನಾವರಣಗೊಳಿಸಲು ಆರಂಭಿಸಿದ್ದೇವೆ. ಇವು ಇಲ್ಲಿಯವರೆಗೆ ಸಾಧ್ಯವಿರಲಿಲ್ಲ. ಎಲ್ಲಾ ದೇಶಗಳ ಜೊತೆಗಿನ ಸಂಬಂಧ ಉತ್ತಮವಾಗಿದೆ ಎಂದು ತಿಳಿಸಿದರು.ಅದರೆ ಚೀನಾ ಜೊತೆಗಿನ ಒಪ್ಪಂದ ಕುರಿತ ವಿವರ ನೀಡಲು ನಿರಾಕರಿಸಿದರು.

ಅಮೆರಿಕ ಎಲ್ಲ ದೇಶಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ. ನಾವು ಎಲ್ಲ ದೇಶಗಳ ಜತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಕೆಲ ದೇಶಗಳಿಗೆ ನಾವು ಪತ್ರ ಬರೆದು ಧನ್ಯವಾದ ಸಲ್ಲಿಸಲಿದ್ದೇವೆ. ನೀವು ಶೇಕಡ 25, 35, 45ರಷ್ಟು ಸುಂಕ ಪಾವತಿಸಬೇಕಾಗುತ್ತದೆ. ಅದು ಸುಲಭ ಮಾರ್ಗ. ನಮ್ಮವರು ಆ ರೀತಿ ಮಾಡುವುದಿಲ್ಲ. ಅದಕ್ಕಾಗಿ ಸ್ವಲ್ಪ ಮಾಡಲಿದ್ದೇವೆ. ಆದರೆ ನಾನು ಮಾಡುವುದಕ್ಕಿಂತ ಹೆಚ್ಚಿನದನ್ನು ಅವರು ಮಾಡಬಹುದು ಎಂದರು.

ಈ ತಿಂಗಳ ಆರಂಭದಲ್ಲಿ ಅಮೆರಿಕ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ಮಾತನಾಡಿದ್ದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು, ನವದೆಹಲಿಯಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದ್ದು, ಇದಾದ ಬಳಿಕ ಉಭಯ ದೇಶಗಳು ಅಂತಿಮ ತೀರ್ಮಾನಕ್ಕೆ ಬರಲಿವೆ. ಅತಿ ಶೀಘ್ರದಲ್ಲೇ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಘೋಷಣೆಯಾಗಲಿದೆ ಎಂದು ಹೇಳಿದ್ದರು.

ಜೂನ್‌ 1 (ಭಾನುವಾರ)ರಂದು ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆ ವೇದಿಕೆಯ (ಯುಎಸ್‌ಐಎಸ್‌ಪಿಎಫ್) ಎಂಟನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ್ದ ಹೊವಾರ್ಡ್ ಲುಟ್ನಿಕ್, ಭಾರತವನ್ನು ಬಹುವಾಗಿ ಪ್ರೀತಿಸುವ ಡೊನಾಲ್ಡ್‌ ಟ್ರಂಪ್‌, ಎರಡೂ ದೇಶಗಳಿಗೆ ಅನುಕೂಲವಾಗುವಂತಹ ವ್ಯಾಪಾರ ಒಪ್ಪಂದನ್ನು ಜಾರಿಗ ತರಲಿದ್ದಾರೆ. ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ಗಮನಿಸಿದರೆ, ಭಾರತ ಹೆಚ್ಚು ಅನುಕೂಲಕರ ವಿನಾಯಿತಿಗಳನ್ನು ಪಡೆಯಬಹುದು, "ಭಾರತವನ್ನು ಗೌರವಿಸುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ವ್ಯಾಪಾರ ಒಪ್ಪಂದದಲ್ಲಿ ನಮ್ಮ ಮಿತ್ರ ರಾಷ್ಟ್ರವನ್ನು ನಷ್ಟಕ್ಕೆ ಗುರಿಯಾಗಿಸುವುದಿಲ್ಲ ಎಂದು ತಿಳಿಸಿದ್ದರು.

Donald trump
'ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ಸೇರಿ ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪುರಸ್ಕಾರ ಸಿಗುವುದಿಲ್ಲ': Donald Trump ಕೊರಗು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com