9 ತಿಂಗಳ ಬಳಿಕ ಸುನಿತಾ ವಿಲಿಯಮ್ಸ್ ಬುಧವಾರ ಭೂಮಿಗೆ ವಾಪಸ್; ಅಪರೂಪದ ಕ್ಷಣಗಳ ನೇರ ಪ್ರಸಾರ

ಮಾರ್ಚ್ 17, ಸೋಮವಾರ ರಾತ್ರಿ 10:45 ಕ್ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಅನ್ನು ಮುಚ್ಚುವ ಸಿದ್ಧತೆಗಳೊಂದಿಗೆ ನೇರಪ್ರಸಾರ ಪ್ರಾರಂಭವಾಗುತ್ತದೆ.
ಗಗನಯಾತ್ರಿಗಳು
ಗಗನಯಾತ್ರಿಗಳು
Updated on

ವಾಷಿಂಗ್ಟನ್: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರು ಮಾರ್ಚ್ 18ರಂದು ಅಂದ್ರೆ ಮಂಗಳವಾರ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ(NASA) ತಿಳಿಸಿದೆ.

ಈ ಇಬ್ಬರು ಗಗನಯಾತ್ರಿಗಳು ಬುಧವಾರ ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದು, ಈ ಅಪರೂಪದ ಕ್ಷಣಗಳನ್ನು ನಾಸಾ ನೇರಪ್ರಸಾರ ಮಾಡಲಿದೆ.

ಮಾರ್ಚ್ 17, ಸೋಮವಾರ ರಾತ್ರಿ 10:45 ಕ್ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಅನ್ನು ಮುಚ್ಚುವ ಸಿದ್ಧತೆಗಳೊಂದಿಗೆ ನೇರಪ್ರಸಾರ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ಬಹುತೇಕ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ.

ಗಗನಯಾತ್ರಿಗಳು
ಲಾಂಚ್ ಪ್ಯಾಡ್ ಸಮಸ್ಯೆ: ನಾಸಾ ಗಗನಯಾತ್ರಿಗಳನ್ನು ಮರಳಿ ಕರೆತರುವ SpaceX ಹಾರಾಟ ಮತ್ತಷ್ಟು ವಿಳಂಬ!

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಸ್ಪೇಸ್‌ಎಕ್ಸ್ ಕ್ರೂ-9 ಹಿಂದಿರುಗುವಿಕೆಯ ನೇರ ಪ್ರಸಾರವನ್ನು NASA ನೀಡಲಿದೆ ಎಂದು ಸಂಸ್ಥೆ X ನಲ್ಲಿ ತಿಳಿಸಿದೆ.

ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5.57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27) ಸುನಿತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಭೂಮಿಗೆ ತಲುಪಲಿದ್ದಾರೆ ಎಂದು ನಾಸಾ ತಿಳಿಸಿದೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕಳೆದ ವರ್ಷ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅದಾದ ಬಳಿಕ ಕೇವಲ ಒಂದು ವಾರದ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಇಬ್ಬರೂ ಅಲ್ಲಿಯೇ ಸಿಲುಕಿಕೊಂಡರು. ಈಗ ಅವರನ್ನು ಮರಳಿ ತರಲು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಅನ್ನು ಬಳಸಲಾಗುತ್ತಿದೆ. ಇಬ್ಬರು ಗಗನಯಾತ್ರಿಗಳು ಮಂಗಳವಾರ ಸಂಜೆ ಇತರ ಇಬ್ಬರು ಪ್ರಯಾಣಿಕರೊಂದಿಗೆ ಭೂಮಿಗೆ ಮರಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com