
ಇಸ್ಲಾಮಾಬಾದ್: ಇರಾನ್ ಹಾಗೂ ಅಪ್ಘಾನಿಸ್ತಾನದ ಗಡಿಯಲ್ಲಿರುವ ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಉಗ್ರಗಾಮಿಗಳು ಹಾಗೂ ಪಾಕ್ ಸೇನೆ ನಡುವಿನ ಗುಂಡಿನ ಕಾಳಗ ಪ್ರತಿದಿನ ನಡೆಯುತ್ತಿದ್ದು, ಧೀರ್ಘಕಾಲದಿಂದ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ನಡೆದ ಗುಂಡಿನ ಕಾಳಗದಲ್ಲಿ 10 ಮಂದಿ ಸೈನಿಕರು ಮೃತಪಟ್ಟಿದ್ದರು.
ಈ ಮಧ್ಯೆ ನೈಋತ್ಯ ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 19 ಕ್ಕೆ ಏರಿದೆ ಎಂದು ಘಟನೆಯ ಒಂದು ವಾರದ ನಂತರ ಅಧಿಕಾರಿಗಳು ತಿಳಿಸಿದ್ದಾರೆ.
ಮಾರುಕಟ್ಟೆಯೊಂದರ ಬಳಿ ತೈಲ ಟ್ಯಾಂಕರ್ ಸ್ಫೋಟಗೊಂಡ ನಂತರ ಬೆಂಕಿಯನ್ನು ನಂದಿಸಲು ಭಾರೀ ಜನಸ್ತೋಮ ನೆರೆದಿತ್ತು. ಈ ವೇಳೆ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಅನೇಕರನ್ನು ಚಿಕಿತ್ಸೆಗಾಗಿ ಮೆಗಾ ಸಿಟಿ ಕರಾಚಿಗೆ ಸಾಗಿಸಲಾಯಿತು.
ಸಾವಿನ ಸಂಖ್ಯೆ 19 ಕ್ಕೆ ಏರಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮುಹಮ್ಮದ್ ಹಸನ್ ಮೆಂಗಲ್ ಸುದ್ದಿಸಂಸ್ಥೆ AFPಗೆ ತಿಳಿಸಿದ್ದಾರೆ. ಏಪ್ರಿಲ್ 28 ರಂದು ಬಲೂಚಿಸ್ತಾನ್ ಪ್ರಾಂತ್ಯದ ನೋಶ್ಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ನಿರ್ಲಕ್ಷ್ಯದ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
Advertisement