ಕುವೈತ್ ನ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಮತ್ತೆ ಡ್ರೋನ್‌ ದಾಳಿ!

ಮಿನಾ ಅಲ್- ಅಹ್ಮದಿ ದಿನಕ್ಕೆ ಸುಮಾರು 7,30,000 ಬ್ಯಾರೆಲ್ ತೈಲವನ್ನು ಸಂಸ್ಕರಿಸಬಲ್ಲ ಸಾಮರ್ಥ್ಯ ಹೊಂದಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಕುವೈತ್: ಕುವೈತ್ ನ ಮಿನಾ ಅಲ್ - ಅಹ್ಮದಿ ತೈಲ ಸಂಸ್ಕರಣಾಗಾರದ ಮೇಲೆ ಇರಾನಿನ ಡ್ರೋನ್ ಗಳು ಶುಕ್ರವಾರ ಮತ್ತೆ ದಾಳಿ ನಡೆಸಿದ್ದು, ಹಲವಾರು ಘಟಕಗಳು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದಾಗಿ ವರದಿಯಾಗಿದೆ.

ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ ಘಟನೆಯನ್ನು ದೃಢಪಡಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಆದರೆ ದಾಳಿಯಿಂದಾದ ಯಾವುದೇ ಹಾನಿ ಕುರಿತ ಮಾಹಿತಿಯನ್ನು ಕುವೈತ್ ಹಂಚಿಕೊಂಡಿಲ್ಲ.

ಮಿನಾ ಅಲ್- ಅಹ್ಮದಿ ದಿನಕ್ಕೆ ಸುಮಾರು 7,30,000 ಬ್ಯಾರೆಲ್ ತೈಲವನ್ನು ಸಂಸ್ಕರಿಸಬಲ್ಲ ಸಾಮರ್ಥ್ಯ ಹೊಂದಿದೆ.

Casual Images
ಕುವೈತ್‌ನಲ್ಲಿ ಅಮೆರಿಕದ ಹಲವು ಯುದ್ಧ ವಿಮಾನಗಳು ಪತನ; ರಾಯಭಾರ ಕಚೇರಿ ಆವರಣದಲ್ಲಿ ಬೆಂಕಿ: ಕುವೈತ್‌

ಪರ್ಷಿಯನ್ ಕೊಲ್ಲಿಯ ಸಣ್ಣ, ತೈಲ ಸಮೃದ್ಧ ರಾಷ್ಟ್ರವಾದ ಕುವೈತ್ ನಲ್ಲಿ ಮಿನಾ ಅಲ್ - ಅಹ್ಮದಿ ಸೇರಿದಂತೆ ಮೂರು ತೈಲ ಸಂಸ್ಕರಣಾಗಾರಗಳಿವೆ. ದೇಶದ ತೈಲ ಉತ್ಪಾದನೆಯಲ್ಲಿ ಈ ಸಂಸ್ಕರಣಾಗಾರಗಳು ಪ್ರಮುಖವಾಗಿವೆ. ಇವುಗಳಿಲ್ಲದಿದ್ದರೆ ಸಂಸ್ಕರಣಾ ಸಾಮರ್ಥ್ಯದ ಕೊರತೆಯಿಂದಾಗಿ ತೈಲ ಬಾವಿಗಳನ್ನು ಮುಚ್ಚಬೇಕಾಗದ ಸಂದರ್ಭ ಎದುರಾಗಹುದು

ಸುರಕ್ಷತಾ ಕಾರಣಗಳಿಗಾಗಿ ಸಂಸ್ಕರಣಾಗಾರಗಳ ಕಾರ್ಯಾಚರಣೆಗಳನ್ನು ಮರುಪ್ರಾರಂಭಿಸುವುದು ಸುದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿರುತ್ತದೆ. ಅಂದರೆ ಕಾರ್ಯಾಚರಣೆ ಪುನರಾರಂಭಗೊಳ್ಳುವವರೆಗೆ ತೈಲ ಬಾವಿಗಳು ನಿಷ್ಕ್ರಿಯವಾಗಿರುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com