ಗಡಿ ದಾಟಿ ನುಗ್ಗಿ RSS ಶಿಬಿರ-ಮನೆಗಳ ಮೇಲೆ ನೇರ ದಾಳಿ: ಮತ್ತೆ ಬಾಲ ಬಿಚ್ಚಿದ ಪಾಕ್‌; ಭಾರತಕ್ಕೆ ಗೊಡ್ಡು ಬೆದರಿಕೆ!

ಪಾಕಿಸ್ತಾನವು ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಬದ್ಧವಾಗಿದೆ, ಆದರೆ ಯಾವುದೇ ಪ್ರಚೋದನೆ ಎದುರಾಗಿದ್ದೇ ಆದರೆ, ಸ್ವಾತಂತ್ರ್ಯ ರಕ್ಷಣೆಗೆ ಪೂರ್ಣ ಸಜ್ಜಾಗಿರುತ್ತದೆ. ಈ ಬಾರಿ ಸಂಘರ್ಷ ಎದುರಾಗಿದ್ದೇ ಆದರೆ, ಆ ದಾಳಿ ಗಡಿ ಭಾಗಕ್ಕೆ ಸೀಮಿತವಾಗಿರುವುದಿಲ್ಲ.
Pakistan's Defence Minister Khawaja Asif
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್
Updated on

ಇಸ್ಲಾಮಾಬಾದ್: ಮತ್ತೆ ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಎದುರಾಗಿದ್ದೇ ಆದರೆ, ನಮ್ಮ ದಾಳಿ ಕೇವಲ ಗಡಿಭಾಗಕ್ಕೆ ಸೀಮಿತವಾಗದೇ, ಗಡಿ ನುಗ್ಗಿ ಆರ್‌ಎಸ್‌ಎಸ್ ಶಿಬಿರಗಳು ಹಾಗೂ ಮನೆಗಳ ಮೇಲೆ ನೇರ ದಾಳಿ ನಡೆಸುತ್ತೇವೆಂದು ಪಾಕಿಸ್ತಾನ ಭಾರತಕ್ಕೆ ಬೆದರಿಕೆ ಹಾಕಿದೆ.

ಪಾಕಿಸ್ತಾನವು ಗಡಿಯಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಹಿಂದೆಂದೂ ಕಾಣದ ರೀತಿಯಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಖಡಕ್ ಎಚ್ಚರಿಕೆ ನೀಡಿದ್ದರು.

ಈ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಭವಿಷ್ಯದಲ್ಲಿ ಯಾವುದೇ ಸಂಘರ್ಷ ಉಂಟಾದರೆ, ಪಾಕಿಸ್ತಾನ ತನ್ನ ಸೇನೆ ಮೂಲಕ ಭಾರತದ ಆಂತರಿಕ ಪ್ರದೇಶಗಳಿಗೆ RSS ಶಿಬಿರಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಲಿದೆ. ಈ ದಾಳಿ ಗಡಿಭಾಗಕ್ಕಷ್ಟೇ ಸೀಮಿತವಾಗಿರುವುದಿಲ್ಲ ಎಂದು ಗೊಡ್ಡು ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನವು ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಬದ್ಧವಾಗಿದೆ, ಆದರೆ ಯಾವುದೇ ಪ್ರಚೋದನೆ ಎದುರಾಗಿದ್ದೇ ಆದರೆ, ಸ್ವಾತಂತ್ರ್ಯ ರಕ್ಷಣೆಗೆ ಪೂರ್ಣ ಸಜ್ಜಾಗಿರುತ್ತದೆ. ಈ ಬಾರಿ ಸಂಘರ್ಷ ಎದುರಾಗಿದ್ದೇ ಆದರೆ, ಆ ದಾಳಿ ಗಡಿ ಭಾಗಕ್ಕೆ ಸೀಮಿತವಾಗಿರುವುದಿಲ್ಲ. ಭಾರತದ ಆಂತರಿಕ ತಾಣಗಳನ್ನು ಪೂರ್ತಿಯಾಗಿ ಗುರಿಯಾಗಿಸಲಾಗುವುದು ಎಂದು ಹೇಳಿದ್ದಾರೆ.

Pakistan's Defence Minister Khawaja Asif
Op Sindoor: ವಿಶ್ವಭೂಪಟದಿಂದ ಪಾಕ್ ನಿರ್ನಾಮಕ್ಕೆ ಕೆಲವೇ ನಿಮಿಷಗಳ ಅಂತರದಲ್ಲಿದ್ದೆವು, ಆದ್ರೆ ಅವರು ತಡೆದರು..; ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com