ಥೈಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಜನಾಂಗೀಯ ನಿಂದನೆ: ಪೊಲೀಸರಿಗೆ ದೂರು ಕೊಟ್ಟ ಭಾರತೀಯ ಪ್ರವಾಸಿಗ! Video

ಥೈಲ್ಯಾಂಡ್ ನಲ್ಲಿ ಜನಾಂಗೀಯ ನಿಂದನೆ ನೋಡಿದ್ದು ಇದೇ ಮೊದಲು, ಅಧಿಕಾರಿಗಳ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ ರೆಸ್ಟೋರೆಂಟ್ ಮ್ಯಾನೇಜರ್ ಕ್ಷಮೆಯಾಚಿಸಿದ್ದಾರೆ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾರೆ.
Thailand Restaurant,Indian Tourist
ಥೈಲ್ಯಾಂಡ್ ಮಹಿಳೆ, ಭಾರತೀಯ ಪ್ರಯಾಣಿಕ
Updated on

ಬ್ಯಾಂಕಾಕ್: ಥೈಲ್ಯಾಂಡ್‌ನ ರೆಸ್ಟೋರೆಂಟ್‌ನಲ್ಲಿ ಜನಾಂಗೀಯ ನಿಂದನೆಗೆ ಸಂಬಂಧಿಸಿದಂತೆ ಭಾರತೀಯ ಪ್ರಜೆಯೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಉಪಹಾರದ ಬಿಲ್‌ಗೆ ಸಂಬಂಧಿಸಿದ ಸಣ್ಣದಾಗಿ ಆರಂಭವಾದ ಜಗಳ ತದನಂತರ ತೀವ್ರ ವಾಕ್ ಸಮರ, ಜನಾಂಗೀಯ ನಿಂದನೆಗೆ ಕಾರಣವಾಯಿತು ಎಂದು ಆತ ಹೇಳಿಕೊಂಡಿದ್ದಾನೆ. ಅನುವಾದಕ್ಕೆ ಸಹಾಯ ಮಾಡಲು ರೆಸ್ಟೋರೆಂಟ್ ಮಹಿಳೆಯೊಬ್ಬರನ್ನು ಕರೆದಾಗ, ಆಕೆ ಪ್ರಯಾಣಿಕರು ಯಾವ ದೇಶದವರು ಎಂದು ಕೇಳಿದ್ದಾರೆ. ಬಳಿಕ

ಭಾರತದವರು ಎಂದು ತಿಳಿದ ನಂತರ ಮಹಿಳೆ ಜನಾಂಗೀಯ ನಿಂದನೆ ಮಾಡಲು ಶುರು ಮಾಡಿದ್ದಾರೆ. ಭಾರತೀಯರಿಗೆ ಹಣ ಕೊಡಲು ಬಯಸಲ್ಲ ಎಂದು ಬೈದಿದ್ದಾರೆ. ಹೀಗಾಗಿ ಪ್ರಯಾಣಿಕ ತಾನು ಜಗಳಕ್ಕೆ ನಿಲ್ಲುವ ಬದಲು ಗಲಾಟೆ ಪರಿಹರಿಸಲು ಥೈಲ್ಯಾಂಡ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಥೈಲ್ಯಾಂಡ್ ನಲ್ಲಿ ಜನಾಂಗೀಯ ನಿಂದನೆ ನೋಡಿದ್ದು ಇದೇ ಮೊದಲು, ಅಧಿಕಾರಿಗಳ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ ರೆಸ್ಟೋರೆಂಟ್ ಮ್ಯಾನೇಜರ್ ಕ್ಷಮೆಯಾಚಿಸಿದ್ದಾರೆ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾರೆ.

ಜನಾಂಗೀಯ ನಿಂದನೆ ಸರಿಯಲ್ಲ, ಚರ್ಚೆಯೂ ಸರಿಯಲ್ಲ. ಥೈಲ್ಯಾಂಡ್‌ನ ಕ್ರಾಬಿಯ ಆವೊ ನಾಂಗ್‌ನಲ್ಲಿ ಈ ಘಟನೆ ನಡೆದಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರನ್ನು ಕರೆಯಬೇಕಾಯಿತು. ನಿಮ್ಮ ಪೋಷಕರಿಗೆ ಕಲಿಸಿ. ನಿಮ್ಮ ಮಕ್ಕಳಿಗೆ ಕಲಿಸಿ. ನಿಮಗೆ ನೋವು ಸಂಭವಿಸಿದಾಗ ಮಾತ್ರ ನಿಮಗೆ ಅರ್ಥವಾಗುತ್ತದೆ ಎಂದು ಇನ್ಸಾಟಾಗ್ರಾಮ್ ನಲ್ಲಿ ಶೀರ್ಷಿಕೆ ಕೊಡಲಾಗಿದೆ.

ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಅನೇಕ ಮಮಂದಿ ಪ್ರಯಾಣಿಕನಿಗೆ ಬೆಂಬಲ ವ್ಯಕ್ತಪಡಿಸಿದ್ದು, ಜನಾಂಗೀಯ ನಿಂದನೆಯನ್ನು ಖಂಡಿಸಿದ್ದಾರೆ. ಮತ್ತೆ ಕೆಲವರು ವಿಡಿಯೋದಿಂದ ಮಾತ್ರ ಇಡೀ ಘಟನೆ ತಿಳಿಯಲು ಸಾಧ್ಯವಿಲ್ಲ ಎಂದಿದ್ದಾರೆ.

Thailand Restaurant,Indian Tourist
fu**king country: ಕೆನಡಾದಲ್ಲಿ ಜನಾಂಗೀಯ ನಿಂದನೆ; ಭಾರತೀಯ ಕೆಲಸಗಾರ್ತಿಯನ್ನು ಕೆಟ್ಟದಾಗಿ ಬೈದ ಕೆನಡಾ ಪ್ರಜೆ! Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com