ಬಾಲಿ ಹೋಟೆಲ್‌ನಲ್ಲಿ ಹೇರ್ ಡ್ರೈಯರ್, ಡೋರ್ ಮ್ಯಾಟ್, ಟವೆಲ್‌ಗಳನ್ನು ಕದ್ದು ಸಿಕ್ಕಿಬಿದ್ದ ಭಾರತೀಯ ಪ್ರವಾಸಿಗರು; ಮುಂದೇನಾಯ್ತು?

ನಿಯಮಿತ ತಪಾಸಣೆಯ ಸಮಯದಲ್ಲಿ, ಹೋಟೆಲ್ ಸಿಬ್ಬಂದಿ ಅತಿಥಿಗಳ ಲಗೇಜ್‌ ಒಳಗೆ ಪ್ಯಾಕ್ ಮಾಡಲಾದ ವಸ್ತುಗಳನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.
Bali Hotel Catches Indian Tourists Taking Robes, Hairdryer, Doormat, And More In Their Luggage
Photo: X/@TARUNspeakss
Updated on

ಯಾವುದೇ ಹೋಟೆಲ್ ಕೋಣೆಯಿಂದ ಹೊರಡುವಾಗ, ನಮ್ಮಲ್ಲಿ ಹೆಚ್ಚಿನವರು ವಾಶ್‌ರೂಂಗಳಲ್ಲಿ ಬಳಸುವ ಸೋಪ್, ಹಲ್ಲುಜ್ಜುವ ಬ್ರಷ್ ಸೇರಿದಂತೆ ಟೀ ಮತ್ತು ಕಾಫಿ ಬ್ಯಾಗ್‌ಗಳಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ, ಇದನ್ನ ಹೊರತುಪಡಿಸಿ ನೀವು ಏನನ್ನಾದರೂ ತೆಗೆದುಕೊಂಡರೆ ಅದು ಕಳ್ಳತನವಾಗುತ್ತದೆ. ಬಾಲಿಯಲ್ಲಿ ನಡೆದ ಘಟನೆಯೊಂದು ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗತೊಡಗಿದೆ. ಈ ವಿಡಿಯೋದಲ್ಲಿ, ಭಾರತದ ಪ್ರವಾಸಿಗರ ಗುಂಪೊಂದು ಹೋಟೆಲ್‌ನಿಂದ ಹೊರಡುವಾಗ ತಮ್ಮ ಲಗೇಜ್‌ನಲ್ಲಿ ಹಲವಾರು ವಸ್ತುಗಳನ್ನು ಸಾಗಿಸುತ್ತಿರುವುದನ್ನು ಹೋಟೆಲ್ ಸಿಬ್ಬಂದಿ ಪತ್ತೆಮಾಡಿದ್ದಾರೆ.

ಬಾಲಿ ಹೋಟೆಲ್‌ನಿಂದ ರೋಬ್ಸ್ (ನಿಲುವಂಗಿಗಳು), ಟವೆಲ್‌ಗಳು ಮತ್ತು ಇನ್ನಿತರೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಭಾರತೀಯ ಪ್ರವಾಸಿಗರು ಸಿಕ್ಕಿಬಿದ್ದಿದ್ದಾರೆ.

ದಿ ಬಾಲಿ ಟೈಮ್ಸ್ ವರದಿ ಪ್ರಕಾರ, ಈ ಘಟನೆ ಏಪ್ರಿಲ್ 19 ರಂದು ಅಸ್ವಾರಾ ರೆಸಾರ್ಟ್ ಉಬುದ್‌ನಲ್ಲಿ ನಡೆದಿದೆ. ಏಪ್ರಿಲ್ 16 ರಂದು ಚೆಕ್ ಇನ್ ಮಾಡಿದ್ದ ನಾಲ್ವರು ಭಾರತೀಯ ಪ್ರವಾಸಿಗರು ಚೆಕ್ ಔಟ್ ಮಾಡುವ ಮೊದಲು ಸಿಬ್ಬಂದಿ ಹೋಟೆಲ್ ಕೊಠಡಿಗಳಿಂದ ಹಲವಾರು ವಸ್ತುಗಳು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ.

ನಿಯಮಿತ ತಪಾಸಣೆಯ ಸಮಯದಲ್ಲಿ, ಹೋಟೆಲ್ ಸಿಬ್ಬಂದಿ ಅತಿಥಿಗಳ ಲಗೇಜ್‌ ಒಳಗೆ ಪ್ಯಾಕ್ ಮಾಡಲಾದ ವಸ್ತುಗಳನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ. ಇವುಗಳಲ್ಲಿ ಸ್ನಾನ ಮತ್ತು ಪೂಲ್ ಟವೆಲ್‌ಗಳು, ಕಿಮೋನೊ ನಿಲುವಂಗಿಗಳು, ಹೇರ್ ಡ್ರೈಯರ್, ಡೋರ್‌ಮ್ಯಾಟ್, ಟಿವಿ ರಿಮೋಟ್ ಬಾಕ್ಸ್ ಮತ್ತು ಊಟದ ಪಾತ್ರೆಗಳು ಸೇರಿವೆ. ಸಿಬ್ಬಂದಿ ಹುಡುಕಾಟ ನಡೆಸಿದಾಗ, ಕೊಠಡಿಯಲ್ಲಿ ಕಾಣೆಯಾಗಿದ್ದ ವಸ್ತುಗಳು ಪ್ರವಾಸಿಗರ ಬ್ಯಾಗ್‌ಗಳಲ್ಲಿ ಪತ್ತೆಯಾಗಿವೆ.

Bali Hotel Catches Indian Tourists Taking Robes, Hairdryer, Doormat, And More In Their Luggage
'ಸೈಮಾ' ಸಮಾರಂಭ ಮುಗಿದ ನಂತರ ಐಷಾರಾಮಿ ಹೊಟೇಲ್ ನಲ್ಲಿ ಭರ್ಜರಿ ಪಾರ್ಟಿ: ಆಯೋಜಕರು, ಹೋಟೆಲ್​ ಮ್ಯಾನೇಜರ್​ಗೆ ನೋಟಿಸ್

ಗಂಭೀರ ಪರಿಸ್ಥಿತಿಯ ಹೊರತಾಗಿಯೂ, ಪ್ರಕರಣವು ಪರಸ್ಪರ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಲಾಗಿದೆ. ಪ್ರವಾಸಿಗರು ಎಲ್ಲ ವಸ್ತುಗಳನ್ನು ಹಿಂತಿರುಗಿಸಿದರು ಮತ್ತು ಹೋಟೆಲ್ ಶುಲ್ಕ ವಿಧಿಸದಿರಲು ನಿರ್ಧರಿಸಿತು. ಅಂತಿಮವಾಗಿ, ಅತಿಥಿಗಳು ಚೆಕ್ ಔಟ್ ಮಾಡಿ ಹೊರಡಲು ಅವಕಾಶ ನೀಡಲಾಯಿತು ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದರು.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದು, ಈ ಘಟನೆ 'ಮುಜುಗರದ' ಮತ್ತು 'ವಿದೇಶಗಳಲ್ಲಿ ಭಾರತದ ವರ್ಚಸ್ಸಿಗೆ ಹಾನಿಕರ' ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಅವರು ವಿದೇಶಕ್ಕೆ ಪ್ರಯಾಣಿಸಲು ಶಕ್ತರು. ಆದರೆ, ಚಮಚಗಳು ಮತ್ತು ಟವೆಲ್‌ಗಳನ್ನು ಖರೀದಿಸಲು ಸಾಧ್ಯವಿಲ್ಲವೇ? ಎಂದಿದ್ದಾರೆ. 'ಇದನ್ನು ನೋಡುವಾಗ ತುಂಬಾ ಮುಜುಗರವಾಗುತ್ತಿದೆ' ಎಂದು ಒಬ್ಬರು ಬರೆದಿದ್ದಾರೆ.

ಒಬ್ಬ ಬಳಕೆದಾರರು, 'ಕೆಲವು ಸಾವಿರ ಮೌಲ್ಯದ ವಸ್ತುಗಳಿಗೆ, ನೀವು ನಮ್ಮ ಹೆಮ್ಮೆಯನ್ನು ಕಳೆದಿರಿ' ಎಂದಿದ್ದಾರೆ. ಮತ್ತೊಬ್ಬರು, 'ಇಂತಹ ನಡವಳಿಕೆಯೇ ಭಾರತೀಯ ಪ್ರವಾಸಿಗರಿಗೆ ಕೆಟ್ಟ ಹೆಸರು ಬರಲು ಕಾರಣ' ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವು ಕಾಮೆಂಟ್‌ಗಳು ವ್ಯಂಗ್ಯವಾಗಿವೆ. ಒಬ್ಬ ಬಳಕೆದಾರರು 'ಕೇವಲ ಟವೆಲ್ ಮತ್ತು ಡೋರ್‌ಮ್ಯಾಟ್? ಹಾಸಿಗೆ ಮತ್ತು ಟೈಲ್ಸ್‌ಗಳನ್ನು ಏಕೆ ಬಿಟ್ಟಿರಿ?' ಎಂದು ಪ್ರಶ್ನಿಸಿದ್ದಾರೆ. ಇತರರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ದಂಡ ವಿಧಿಸಬೇಕೆಂದು ಸೂಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com