‘ನಾವಿಲ್ಲದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು’: ಹಾಸ್ಯ ಮೂಲಕವೇ ಟ್ರಂಪ್‌ಗೆ ಕಿಂಗ್ ಚಾರ್ಲ್ಸ್ III ಫುಲ್ ರೋಸ್ಟ್..!

ಭಾಷಣದ ವೇಳೆ, ಕಿಂಗ್ ಚಾರ್ಲ್ಸ್ ಅವರು ಟ್ರಂಪ್‌ಗೆ ಹಾಸ್ಯ ರೀತಿಯಲ್ಲೇ, ನೀವು ಹೇಳಿದಂತೆ ಅಮೆರಿಕಾ ಇಲ್ಲದಿದ್ದರೆ ಯುರೋಪ್ ಜರ್ಮನ್ ಮಾತನಾಡುತ್ತಿತ್ತು, ಆದರೆ, "ಬ್ರಿಟನ್ ಸಹಾಯ ಮಾಡದಿದ್ದರೆ ಇಂದು ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು" ಎಂದು ಕಾಲೆಳೆದರು.
Britain's King Charles III speaks during a State Dinner with US President Donald Trump
ಬ್ರಿಟನ್ ಕಿಂಗ್ ಚಾರ್ಲ್ಸ್ III
Updated on

ವಾಷಿಂಗ್ಟನ್: ಬ್ರಿಟನ್ ಸಹಾಯ ಮಾಡದಿದ್ದರೆ ಇಂದು ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬ್ರಿಟನ್ ಕಿಂಗ್ ಚಾರ್ಲ್ಸ್ III ತಿರುಗೇಟು ನೀಡಿದ್ದಾರೆ.

ಏಪ್ರಿಲ್ 28, 2026 ರಂದು ಶ್ವೇತಭವನದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಔತಣಕೂಟದಲ್ಲಿ ಬ್ರಿಟನ್‌ನ ಕಿಂಗ್ ಚಾರ್ಲ್ಸ್ III (King Charles III) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಫ್ರೆಂಚ್ ಭಾಷೆಗೆ ಸಂಬಂಧಿಸಿದ ಒಂದು ಸ್ವಾರಸ್ಯಕರ ಪ್ರಸಂಗ ನಡೆಯಿತು.

ಔತಣಕೂಟದ ಭಾಷಣದ ವೇಳೆ, ಕಿಂಗ್ ಚಾರ್ಲ್ಸ್ ಅವರು ಟ್ರಂಪ್‌ಗೆ ಹಾಸ್ಯ ರೀತಿಯಲ್ಲೇ, ನೀವು ಹೇಳಿದಂತೆ ಅಮೆರಿಕಾ ಇಲ್ಲದಿದ್ದರೆ ಯುರೋಪ್ ಜರ್ಮನ್ ಮಾತನಾಡುತ್ತಿತ್ತು, ಆದರೆ, "ಬ್ರಿಟನ್ ಸಹಾಯ ಮಾಡದಿದ್ದರೆ ಇಂದು ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು" ಎಂದು ಕಾಲೆಳೆದರು.

ವೈಟ್ ಹೌಸ್ ಈಸ್ಟ್ ವಿಂಗ್ ಪುನರ್ ನಿರ್ಮಾಣದ ವಿಷಯದಲ್ಲೂ ಚಾರ್ಲ್ಸ್ ಟ್ರಂಪ್ ಅವರನ್ನು ಲಘುವಾಗಿ ಟೀಕಿಸಿದರು. “1814ರಲ್ಲಿ ನಾವು ಬ್ರಿಟಿಷರು ವೈಟ್ ಹೌಸ್‌ನ್ನು ಸುಟ್ಟುಹಾಕಿದ ಘಟನೆ ಕೂಡ ಒಂದು ರೀತಿಯ ರಿಯಲ್ ಎಸ್ಟೇಟ್ ಅಭಿವೃದ್ಧಿಯೇ” ಎಂದು ವ್ಯಂಗ್ಯವಾಡಿದರು.

ಅದೇ ವೇಳೆ, 1773ರ ಬೋಸ್ಟನ್ ಟೀ ಪಾರ್ಟಿ ಘಟನೆಯನ್ನು ಉಲ್ಲೇಖಿಸಿ, “ಈ ಭೋಜನ ಅದಕ್ಕಿಂತ ಉತ್ತಮವಾಗಿದೆ” ಎಂದೂ ಚಾರ್ಲ್ಸ್ ಹಾಸ್ಯ ಚಟಾಕಿೃ ಹಾರಿಸಿದರು.

ಟ್ರಂಪ್ ಅವರು ಈ ಹಿಂದೆ "ಅಮೆರಿಕದ ಸಹಾಯವಿಲ್ಲದಿದ್ದರೆ ಯುರೋಪ್ ರಾಷ್ಟ್ರಗಳು ಇಂದು ಜರ್ಮನ್ ಮಾತನಾಡುತ್ತಿದ್ದವು" ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಚಾರ್ಲ್ಸ್ ಈ ಹಾಸ್ಯಮಯ ತಿರುಗೇಟು ನೀಡಿದ್ದಾರೆ.

Britain's King Charles III speaks during a State Dinner with US President Donald Trump
ಕೈಗೆ ಗಾಯ, ಬಣ್ಣ ಬದಲಾವಣೆ: ಫೋಟೋ ವೈರಲ್, ಟ್ರಂಪ್ ಆರೋಗ್ಯ ಕುರಿತು ಊಹಾಪೋಹ ಶುರು!

ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಅಂಗವಾಗಿ ಕಿಂಗ್ ಚಾರ್ಲ್ಸ್ ಮತ್ತು ಕ್ವೀನ್ ಕ್ಯಾಮಿಲ್ಲಾ ಏಪ್ರಿಲ್ 27 ರಿಂದ 30, 2026 ರವರೆಗೆ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.

ಈ ಕಾರ್ಯಕ್ರಮದ ವಾತಾವರಣ ಸ್ನೇಹಪೂರ್ಣವಾಗಿದ್ದರೂ, ಅದರ ಹಿಂದೆ ರಾಜಕೀಯ ಸಂದೇಶಗಳೂ ಅಡಗಿದ್ದವು. ಬ್ರಿಟನ್ ಮತ್ತು ಅಮೆರಿಕದ ನಡುವಿನ “Special Relationship” ಎಂಬ ನಿಕಟ ಸಂಬಂಧವನ್ನು ಒತ್ತಿ ಹೇಳಲು ಎರಡೂ ನಾಯಕರು ಪ್ರಯತ್ನಿಸಿದರು. ಇತ್ತೀಚೆಗೆ ಇರಾನ್ ಸಂಬಂಧಿತ ವಿಷಯಗಳಲ್ಲಿ ಉಂಟಾದ ಉದ್ವಿಗ್ನತೆ ನಡುವೆಯೂ, ಈ ಭೋಜನಕೂಟವು ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ವೇದಿಕೆಯಾಗಿತ್ತು.

ಟ್ರಂಪ್ ತಮ್ಮ ಮಾತಿನಲ್ಲಿ ಚಾರ್ಲ್ಸ್ ಅವರನ್ನು ಮೆಚ್ಚಿಕೊಂಡು, ಅದ್ಭುತ ಭಾಷಣ ಮಾಡಿದ್ದಕ್ಕಾಗಿ ಚಾರ್ಲ್ಸ್ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆಂದು ಹೇಳಿ ತಮ್ಮ ನಾಯಕರನ್ನೂ ಕೂಡ ನಿಲ್ಲಿಸಿ ಚಪ್ಪಾಳೆ ತಟ್ಟುವಂತೆ ಮಾಡಿದರು.

ಇದೇ ಸಂದರ್ಭದಲ್ಲಿ ಚಾರ್ಲ್ಸ್ ನೀಡಿದ ಉಡುಗೊರೆಗೂ ವಿಶೇಷ ಅರ್ಥವಿತ್ತು. ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ನಿರ್ಮಿಸಲಾದ ಬ್ರಿಟಿಷ್ ಸಬ್‌ಮೆರಿನ್ HMS Trump‌ನ ಘಂಟೆಯನ್ನು ಅವರು ಟ್ರಂಪ್ ಅವರಿಗೆ ನೀಡಿದರು.

ಉಡುಗೊರೆ ನೀಡಿದ ಕಿಂಗ್ ಚಾರ್ಲ್ಸ್ ಅವರು ಅಧ್ಯಕ್ಷ ಟ್ರಂಪ್‌ಗೆ "ನಿಮಗೆ ನಮ್ಮ ಅಗತ್ಯವಾದಾಗಲೆಲ್ಲಾ ನಮ್ಮನ್ನು ಸಂಪರ್ಕಿಸಲು ಈ ಗಂಟೆ ಬಾರಿಸಿ (Just give us a ring)" ಎಂದು ಹೇಳಿದರು.

ಒಟ್ಟಾರೆ, ಈ ಭೋಜನಕೂಟವು ರಾಜತಾಂತ್ರಿಕತೆಯ ಜೊತೆಗೆ ಹಾಸ್ಯ, ಇತಿಹಾಸ ಮತ್ತು ರಾಜಕೀಯ ಸಂದೇಶಗಳ ಸಮನ್ವಯವಾಗಿ ಕಾಣಿಸಿಕೊಂಡಿತು.

ಚಾರ್ಲ್ಸ್ ಅವರ ಮಾತುಗಳು ಕೇವಲ ನಗುವಿಗೆ ಕಾರಣವಾಗದೇ, ಬ್ರಿಟನ್–ಅಮೆರಿಕಾ ಸಂಬಂಧದ ಆಳವನ್ನು ನೆನಪಿಸುವುದರ ಜೊತೆಗೆ, ಹಳೆಯ ಇತಿಹಾಸವನ್ನು ಹೊಸ ರೀತಿಯಲ್ಲಿ ಪ್ರಸ್ತುತಪಡಿಸಿದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com