Shehbaz Sharif  And Donald Trump
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಭಾರತ-ಯುಎಸ್ ವ್ಯಾಪಾರ ಒಪ್ಪಂದ: 'ಗೌರವವನ್ನು ಖರೀದಿಸಲು ಸಾಧ್ಯವಿಲ್ಲ'; ಸ್ವದೇಶದ ವಿರುದ್ಧವೇ ತಿರುಗಿಬಿದ್ದ ಪಾಕ್ ಜನ!

ನವದೆಹಲಿ ತಿಂಗಳುಗಟ್ಟಲೆ ಟ್ರಂಪ್ ಅವರ ಎಲ್ಲ ರೀತಿಯ ಒತ್ತಡವನ್ನು ಎದುರಿಸಿ ತನ್ನ ನಿಲುವನ್ನು ಕಾಯ್ದುಕೊಂಡಿದೆ ಎಂದು ಹೇಳಲಾಗಿದೆ.
Published on

ನವದೆಹಲಿ: ಅಮೆರಿಕದೊಂದಿಗೆ ಭಾರತ ಹೊಸದಾಗಿ ಮಾಡಿಕೊಂಡ ವ್ಯಾಪಾರ ಒಪ್ಪಂದವು ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳುಗಟ್ಟಲೆ ವಾಷಿಂಗ್ಟನ್‌ ಜೊತೆಗೆ ಉನ್ನತ ಮಟ್ಟದ ಸಂಪರ್ಕ ಸಾಧಿಸಿದರೂ, ಅದು ಫಲ ನೀಡಿಲ್ಲ.

ನೊಬೆಲ್ ಶಾಂತಿ ಪ್ರಶಸ್ತಿಗೆ ಅವರನ್ನು ನಾಮನಿರ್ದೇಶನ ಮಾಡುವುದು ಮತ್ತು ಶಾಂತಿ ಮಂಡಳಿಯಲ್ಲಿ ಅವರ ಸೇರ್ಪಡೆ ಬೆಂಬಲಿಸುವುದು ಸೇರಿದಂತೆ ಪಾಕಿಸ್ತಾನವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಿದರೂ, ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನವು ಹೆಚ್ಚಿನ ಸುಂಕಗಳಂತಹ ಹೆಚ್ಚಿನ ವ್ಯಾಪಾರ ಅಡೆತಡೆಗಳನ್ನು ಎದುರಿಸುತ್ತಿದೆ. ಎಂದು ವಿಮರ್ಷಕರು ಹೇಳಿದ್ದಾರೆ.

ನವದೆಹಲಿ ತಿಂಗಳುಗಟ್ಟಲೆ ಟ್ರಂಪ್ ಅವರ ಎಲ್ಲ ರೀತಿಯ ಒತ್ತಡವನ್ನು ಎದುರಿಸಿ ತನ್ನ ನಿಲುವನ್ನು ಕಾಯ್ದುಕೊಂಡಿದೆ ಎಂದು ಹೇಳಲಾಗಿದೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ, ಟ್ರಂಪ್ ಇಂಡಿಯಾ ಗೇಟ್ ಚಿತ್ರಗಳನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ನಿಯತಕಾಲಿಕೆಯ ಮುಖಪುಟವನ್ನು ಹಂಚಿಕೊಂಡರು. ನಂತರ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 18ಕ್ಕೆ ಇಳಿಸಲಾಗುವುದು ಎಂದು ಬಹಿರಂಗಪಡಿಸಿದರು. ಇದು ಪಾಕಿಸ್ತಾನದ ಸುಂಕಕ್ಕಿಂತ ಶೇ 1ರಷ್ಟು ಕಡಿಮೆ.

 Shehbaz Sharif  And Donald Trump
ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಬಗ್ಗೆ ಭಾರತದಿಂದ ಯಾವುದೇ ಮಾಹಿತಿ ಬಂದಿಲ್ಲ: ಮಾಸ್ಕೋ

ಪಾಕಿಸ್ತಾನದ ಜನರು ಪರಿಸ್ಥಿತಿಯನ್ನು ಗಮನಿಸಿದ್ದಾರೆ ಮತ್ತು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದಂತೆ ಟ್ರಂಪ್‌ಗೆ ಅತಿಯಾಗಿ ವಿಧೇಯರಾಗುವುದು ಅಥವಾ ಅತಿಯಾಗಿ ಹೊಗಳುವುದು ಇಲ್ಲದೆಯೇ ಭಾರತವು ಅಮೆರಿಕದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ ಎಂದು ಕೆಲವರು ತಮ್ಮ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪೋಸ್ಟ್ ಒಂದು ವೈರಲ್ ಆಗಿದ್ದು, ಪಾಕ್ ಮೂಲದ ಎಕ್ಸ್ ಬಳಕೆದಾರ ಉಮರ್ ಅಲಿ, 'ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಎಲ್ಲ ಕಾನೂನುಬಾಹಿರ ಮತ್ತು ಕೊಳಕು ಕೆಲಸಗಳನ್ನು ಮಾಡುವುದಕ್ಕೆ ಬೆಂಬಲಿಸುವ ಪ್ರೇಯಸಿಯಂತೆ ನಡೆಸಿಕೊಂಡಿದ್ದಾರೆ. ಆದರೆ, ಏನನ್ನಾದರೂ ಕೊಡುವ ಅಥವಾ ತೆಗೆದುಕೊಳ್ಳುವ ಸಮಯ ಬಂದಾಗ, ನಾನು ನನ್ನ ಕುಟುಂಬದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ, ನನ್ನನ್ನು ಮರೆತುಬಿಡಿ ಎಂದು ಆಕೆ ಹೇಳುತ್ತಾಳೆ. ನನ್ನ ದೇಹವು ನನ್ನ ಗಂಡನದ್ದು. ಆದರೆ, ನನ್ನ ಆತ್ಮವು ಯಾವಾಗಲೂ ನಿನ್ನದಾಗಿರುತ್ತದೆ ಎಂದು ಹೇಳುವಂತಿದೆ' ಎಂದು ಪ್ರಧಾನಿ ಮೋದಿ ಮತ್ತು ಟ್ರಂಪ್ ಅಪರೂಪದ ಖನಿಜಗಳ ಪೆಟ್ಟಿಗೆಯನ್ನು ಹಿಡಿದಿರುವ AI- ರಚಿತವಾದ ಚಿತ್ರದ ಜೊತೆಗೆ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮಾಜಿ ಸಚಿವ ಹಮ್ಮದ್ ಅಜರ್, ಇದು ಕಾರ್ಯತಂತ್ರದ ವೈಫಲ್ಯ ಎಂದು ಬಣ್ಣಿಸಿದ್ದಾರೆ. '21ನೇ ಶತಮಾನದಲ್ಲಿ ವಿದೇಶಾಂಗ ನೀತಿ ಎನ್ನುವುದು ಸಾರ್ವಜನಿಕ ಗ್ರಹಿಕೆ ಅಥವಾ ವೈಯಕ್ತಿಕ ಸಂಬಂಧಗಳ ಬಗ್ಗೆ ಅಲ್ಲ. ಇದು ಆರ್ಥಿಕ ಶಕ್ತಿ, ಸುಂಕಗಳು ಮತ್ತು ಮಾರುಕಟ್ಟೆ ಪ್ರವೇಶವನ್ನು ಬಳಸಿಕೊಳ್ಳುವುದರ ಬಗ್ಗೆ. ಯುರೋಪಿಯನ್ ಒಕ್ಕೂಟ ಮತ್ತು ಯುಎಸ್ ಜೊತೆಗಿನ ಭಾರತದ ಇತ್ತೀಚಿನ ವ್ಯಾಪಾರ ಒಪ್ಪಂದಗಳು ಈ ಅಂಶವನ್ನು ಸಾಬೀತುಪಡಿಸುತ್ತವೆ. ಅತಿಯಾದ ಹೊಗಳಿಕೆ ಮತ್ತು ಫೋಟೊ ಅವಕಾಶಗಳು ನಿಷ್ಪ್ರಯೋಜಕವಾಗಿವೆ' ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

 Shehbaz Sharif  And Donald Trump
'ಅಪಾರ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ': ಸುಂಕ ಕಡಿತದ ನಂತರ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ

ಫೆಬ್ರುವರಿ 2 ರಂದು ಘೋಷಿಸಲಾದ ಒಪ್ಪಂದದ ಪ್ರಕಾರ, ಭಾರತೀಯ ರಫ್ತಿನ ಮೇಲೆ ಅಮೆರಿಕದ ಸುಂಕವು ಶೇ 18ಕ್ಕೆ ನಿಗದಿಯಾಗಿದೆ. ಈಮಧ್ಯೆ, ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ವಾಷಿಂಗ್ಟನ್‌ನಲ್ಲಿ ನಿರಂತರ ಲಾಬಿ ಪ್ರಯತ್ನಗಳ ಹೊರತಾಗಿಯೂ, ಪಾಕಿಸ್ತಾನವು ಶೇ 19 ರಷ್ಟು ಸುಂಕ ಎದುರಿಸುತ್ತಿದೆ.

ಪಾಕ್ ವಿರೋಧ ಪಕ್ಷವಾದ ಪಿಟಿಐ (ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್) ನಾಯಕರು, ಭಾರತವು ಸ್ವತಂತ್ರವಾಗಿ ಮತ್ತು ತನ್ನದೇ ಆದ ಹಿತಾಸಕ್ತಿಗಳನ್ನು ಆಧರಿಸಿ ಕಾರ್ಯನಿರ್ವಹಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಪಾಕಿಸ್ತಾನದ ನಾಯಕತ್ವವು ವೈಯಕ್ತಿಕ ರಾಜತಾಂತ್ರಿಕತೆಯ ಮೇಲೆ ಹೆಚ್ಚು ಗಮನಹರಿಸಿತು ಮತ್ತು ಟ್ರಂಪ್‌ನಂತಹ ನಾಯಕರೊಂದಿಗೆ ನಿಕಟ ಸಂಬಂಧ ಬೆಳೆಸಲು ಪ್ರಯತ್ನಿಸಿತು. ಇದುವೇ ಅಂತಿಮವಾಗಿ ಪಾಕಿಸ್ತಾನಕ್ಕೆ ಕಡಿಮೆ ಅನುಕೂಲಕರ ಫಲಿತಾಂಶಕ್ಕೆ ಕಾರಣವಾಯಿತು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com