ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ವ್ಯಾಪಾರ ಒಪ್ಪಂದದಲ್ಲಿ ಪಾಕಿಸ್ತಾನಕ್ಕೆ ಸದ್ದಿಲ್ಲದೆ 'ಶಾಕ್' ನೀಡಿದ ಅಮೆರಿಕಾ !

ಈ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಾಗಿ ತೋರಿಸಲಾಗಿದೆ. ಆ ಮೂಲಕ ಪಾಕಿಸ್ತಾನಕ್ಕೆ ಸದ್ದಿಲ್ಲದೆ ತಿರುಗೇಟು ನೀಡಿದ್ದು, ಇದು ಭಾರತದ ರಾಜಕೀಯ ನಕ್ಷೆಗೆ ಅಮೆರಿಕದ ಸಮ್ಮತಿಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.
ಯುಎಸ್ ಬಿಡುಗಡೆ ಮಾಡಿರುವ ಭಾರತದ ನಕ್ಷೆ
ಯುಎಸ್ ಬಿಡುಗಡೆ ಮಾಡಿರುವ ಭಾರತದ ನಕ್ಷೆ
Updated on

ನವದೆಹಲಿ: ಭಾರತ-ಅಮೆರಿಕ ನಡುವಣ ದ್ವಿಪಕ್ಷೀಯ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ವಿಶ್ವದ ದೊಡ್ಡಣ್ಣ ಅಮೆರಿಕ ಬಿಡುಗಡೆ ಮಾಡಿರುವ ನಕ್ಷೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ವ್ಯಾಪಾರ ಒಪ್ಪಂದ ಸಂಬಂಧ 'ಯುನೈಟೆಡ್ ಸ್ಟೇಟ್ಸ್ ಆಫ್ ಟ್ರೇಡ್ ರೆಪ್ರೆಸೆಂಟೇಟಿವ್' ಬಿಡುಗಡೆ ಮಾಡಿರುವ ಭಾರತದ ಭೂಪಟದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಬಿಂಬಿಸಿದೆ. ಈ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಾಗಿ ತೋರಿಸಲಾಗಿದೆ. ಆ ಮೂಲಕ ಪಾಕಿಸ್ತಾನಕ್ಕೆ ಸದ್ದಿಲ್ಲದೆ ತಿರುಗೇಟು ನೀಡಿದ್ದು, ಇದು ಭಾರತದ ರಾಜಕೀಯ ನಕ್ಷೆಗೆ ಅಮೆರಿಕದ ಸಮ್ಮತಿಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಘೋಷಿಸಲಾಯಿತು. ಇದರೊಂದಿಗೆ, ಅಮೆರಿಕ ಭಾರತದ ಅಧಿಕೃತ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಅದು ಪ್ರಮುಖ ಸಂದೇಶ ನೀಡಿದೆ. ಈ ನಕ್ಷೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಸೇರಿದಂತೆ ಎಲ್ಲಾ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವಾಗಿ ತೋರಿಸಿದೆ.

ಇತ್ತೀಚೆಗಿನ ವರ್ಷಗಳಲ್ಲಿ ವಿಶೇಷವಾಗಿಯೂ ಪಾಕ್ ಮೇಲೆ ಭಾರತದ 'ಆಪರೇಷನ್ ಸಿಂಧೂರ' ಮಿಲಿಟರಿ ಕಾರ್ಯಾಚರಣೆಯ ಬಳಿಕ ಅಮೆರಿಕದೊಂದಿಗೆ ಪಾಕಿಸ್ತಾನ ಉತ್ತಮ ಬಾಂಧವ್ಯ ಕಾಪಾಡಿಕೊಂಡಿತ್ತು.

ಯುಎಸ್ ಬಿಡುಗಡೆ ಮಾಡಿರುವ ಭಾರತದ ನಕ್ಷೆ
ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದ ಶ್ಲಾಘಿಸಿದ ಪಿಯೂಷ್ ಗೋಯಲ್; ಭಾರತದ ಉಜ್ವಲ ಭವಿಷ್ಯಕ್ಕೆ ಇದು ಶುಭ ಸೂಚನೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com