'ಮೊಜ್ತಾಬಾ ಖಮೇನಿ ಕಥೆ ಶೇ 90ರಷ್ಟು ಮುಗಿದಿದೆ': ಇರಾನ್ ಮೇಲೆ ಅಮೆರಿಕದ ಮತ್ತೊಂದು ದಾಳಿಯ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್!

ಫೆಬ್ರುವರಿ 28 ರಿಂದ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಏಕೆಂದರೆ, ಅವರು ಯುಎಸ್ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದರು ಮತ್ತು ಅವರ ತಂದೆಯೂ ಸಾವಿಗೀಡಾಗಿದ್ದರು.
Iran's supreme leader Mojtaba Khamenei (L) and US President Donal Trump
ಮೊಜ್ತಾಬಾ ಖಮೇನಿ - ಡೊನಾಲ್ಡ್ ಟ್ರಂಪ್online desk
Updated on

ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಈಗಾಗಲೇ ಮಿಲಿಟರಿ ಸಾಮರ್ಥ್ಯ ಮತ್ತು ಅದರ ಉನ್ನತ ಕಮಾಂಡರ್‌ಗಳನ್ನು ಕಳೆದುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಳೆದ ವಾರ ತಮ್ಮ ತಂದೆ ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಕೂಡ 'ಶೇ 90ರಷ್ಟು ಮುಗಿದಿದೆ' ಎಂದು ಅವರು ಹೇಳಿದ್ದಾರೆ.

'ಅವರ ಬಳಿ ನೌಕಾಪಡೆಯಾಗಲಿ, ವಾಯುಪಡೆಯಾಗಲಿ ಇಲ್ಲ; ಅವೆಲ್ಲವೂ ಇಲ್ಲವಾಗಿವೆ. ಅವರ ವಿಮಾನ-ನಿರೋಧಕ ವ್ಯವಸ್ಥೆ ನಾಶವಾಗಿದೆ. ಅವರ ನಾಯಕರೆಲ್ಲರೂ ಹತರಾಗಿದ್ದಾರೆ. ಅವರ ಉನ್ನತ ಮಟ್ಟದ ನಾಯಕರೂ ಹತರಾಗಿದ್ದಾರೆ' ಎಂದು ಟ್ರಂಪ್ ಫಾಕ್ಸ್ ನ್ಯೂಸ್‌ನೊಂದಿಗಿನ ಸಂದರ್ಶನವೊಂದರಲ್ಲಿ ಹೇಳಿದರು.

'ಯುದ್ಧದ ಸಮಯದಲ್ಲಿ ಇರಾನ್‌ನ ಅನೇಕ ಉನ್ನತ ನಾಯಕರು ಹತರಾಗಿದ್ದಾರೆ ಎಂದು ಟ್ರಂಪ್ ಪ್ರತಿಪಾದಿಸಿದರು. 'ಅವರು ಇಲ್ಲವಾಗಿದ್ದಾರೆ. ಖೊಮೇನಿ ಇಲ್ಲವಾಗಿದ್ದಾರೆ' ಎಂದು ಅವರು ಹೇಳಿದರು. ಖಮೇನಿ (Khamenei) ಬದಲಿಗೆ 1989ರಲ್ಲಿ ನಿಧನರಾದ ಇರಾನ್‌ನ ದಿವಂಗತ ಕ್ರಾಂತಿಕಾರಿ ನಾಯಕ ಖೊಮೇನಿ ಅವರ ಹೆಸರನ್ನು ಬಳಸಿದರು.

'ಅಯತೊಲ್ಲಾ ಅಲಿ ಖಮೇನಿ ಅವರ ಮಗನ ಕಥೆ ಶೇ 90ರಷ್ಟು ಮುಗಿದಿದೆ' ಎಂದು ಅವರು ಹೇಳಿದರು.

ಫೆಬ್ರುವರಿ 28 ರಿಂದ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಏಕೆಂದರೆ, ಅವರು ಯುಎಸ್ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದರು ಮತ್ತು ಅವರ ತಂದೆಯೂ ಸಾವಿಗೀಡಾಗಿದ್ದರು. ಅವರ ನಿರಂತರ ಅನುಪಸ್ಥಿತಿಯು ಅವರ ಆರೋಗ್ಯ ಮತ್ತು ಎಲ್ಲಿದ್ದಾರೆ ಎಂಬುದರ ಕುರಿತು ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿದೆ.

Iran's supreme leader Mojtaba Khamenei (L) and US President Donal Trump
ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ; ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ

ದೀರ್ಘಕಾಲದ ಕದನ ವಿರಾಮದ ನಂತರ ಅಮೆರಿಕ ಮತ್ತು ಇರಾನ್ ಮತ್ತೆ ಪರಸ್ಪರರ ಮೇಲೆ ದಾಳಿ ನಡೆಸಲು ಆರಂಭಿಸಿದ್ದ ಸಂದರ್ಭದಲ್ಲಿ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಇರಾನ್‌ನ ನೆಲೆಗಳ ಮೇಲೆ ಹಲವಾರು ಸುತ್ತಿನ ದಾಳಿಗಳನ್ನು ನಡೆಸಲು ಆದೇಶಿಸಿದ್ದರಿಂದ, ಕಳೆದ ವಾರ ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಇರಾನ್, ಬಹ್ರೇನ್ ಮತ್ತು ಹಾರ್ಮುಜ್ ಜಲಸಂಧಿ ಮೂಲಕ ಪ್ರಯಾಣಿಸುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸಂಬಂಧಿಸಿದ ಎರಡು ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯಲ್ಲಿ ಭಾರತೀಯ ಮೂಲದ ಒಬ್ಬ ನಾವಿಕ ಸಾವಿಗೀಡಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಇರಾನ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಮಿರೇಟ್ಸ್ ಬೆದರಿಕೆ ಹಾಕಿದ್ದು, ಇದು ಅಬುಧಾಬಿ ಮತ್ತು ದುಬೈಯನ್ನು ಟೆಹ್ರಾನ್‌ನೊಂದಿಗಿನ ಸಂಘರ್ಷಕ್ಕೆ ಮತ್ತೆ ಎಳೆದುತರುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com