ಭಾರೀ ನಷ್ಟದ ಹೊರತಾಗಿಯೂ ಅಮೆರಿಕ ಜೊತೆಗಿನ ಶಾಂತಿ ಒಪ್ಪಂದ ತನ್ನ ದಿಗ್ವಿಜಯವೆಂದು ಇರಾನ್ ಹೇಳುತ್ತಿರುವುದೇಕೆ?

ಈ ಮಧ್ಯೆ, ತನ್ನ ವಿರುದ್ಧ ಜಂಟಿಯಾಗಿ ಯುದ್ಧ ಮಾಡಿದ ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾಗಿವೆ ಎಂದು ಇರಾನ್ ನಂಬಿದ್ದು, ಇತ್ತೀಚಿನ ಶಾಂತಿ ಒಪ್ಪಂದವನ್ನು ತನ್ನ ದಿಗ್ವಿಜಯ ಎಂದು ಬಣ್ಣಿಸಿದೆ.
Donald Trump- Iran's Supreme leader
ಡೊನಾಲ್ಡ್ ಟ್ರಂಪ್- ಇರಾನ್ ನ ಸರ್ವೋಚ್ಛ ನಾಯಕ online desk
Updated on

ಟೆಹ್ರಾನ್: ಅಮೆರಿಕ-ಇರಾನ್ ನಡುವಣ 107 ದಿನಗಳ ಯುದ್ಧ ಕೊನೆಗೂ ಅಂತ್ಯವಾಗುವ ಕಾಲ ಸನ್ನಿಹಿತವಾಗಿದ್ದು, ಉಭಯ ದೇಶಗಳು ಜಿನೀವಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಾಗಿವೆ.

ಈ ಮಧ್ಯೆ, ತನ್ನ ವಿರುದ್ಧ ಜಂಟಿಯಾಗಿ ಯುದ್ಧ ಮಾಡಿದ ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾಗಿವೆ ಎಂದು ಇರಾನ್ ನಂಬಿದ್ದು, ಇತ್ತೀಚಿನ ಶಾಂತಿ ಒಪ್ಪಂದವನ್ನು ತನ್ನ ದಿಗ್ವಿಜಯ ಎಂದು ಬಣ್ಣಿಸಿದೆ.

ಇತ್ತೀಚಿನ ಸಂಘರ್ಷದ ನಂತರ ತಾನು ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿರುವುದಾಗಿ ಹೇಳಿಕೊಂಡ ಟೆಹ್ರಾನ್, ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾಗುವ ಮೊದಲಿಗಿಂತ ಈಗ ತನ್ನ ಮೇಲಿನ ವಿಶ್ವಾಸ ಹೆಚ್ಚಿದೆ ಎಂದಿದೆ.

ಟೆಹ್ರಾನ್ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಎರಡೂ ಇರಾನ್ ಶರಣಾಗಬೇಕು. ಇಸ್ಲಾಮಿಕ್ ಗಣರಾಜ್ಯವನ್ನು ನಾಶಪಡಿಸಬೇಕು. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸಬೇಕು ಮತ್ತು ಲೆಬನಾನಿನ ಉಗ್ರಗಾಮಿ ಸಂಘಟನೆ ಹೆಜ್ಬೊಲ್ಲಾ ಜೊತೆಗಿನ ಸಂಬಂಧವನ್ನು ದುರ್ಬಲಗೊಳಿಸಬೇಕು ಎಂದು ಬಯಸಿದ್ದವು. ಆದರೆ ಅದು ಯಾವುದೂ ಸಾಧ್ಯವಾಗಲಿಲ್ಲ ಎಂದು ಇರಾನ್ ಹೇಳುತ್ತಿದೆ.

Donald Trump- Iran's Supreme leader
'ಈಗ ಹಾರ್ಮುಜ್ ಅನ್ನು ಯಾವಾಗ ಬೇಕಾದರೂ ಬಂದ್ ಮಾಡುವ ಅಧಿಕಾರ ಇರಾನ್ ಹೊಂದಿದೆ; ಇದು ಅಮೆರಿಕಕ್ಕೆ ಮಾರಕ'

ಬದಲಾಗಿ, ಸರ್ಕಾರ ಅಧಿಕಾರದಲ್ಲಿದೆ, ಮಾತುಕತೆಗಳು ಮುಂದುವರೆದಿವೆ ಮತ್ತು ನಿರ್ಬಂಧಗಳನ್ನು ಸಡಿಲಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.

"ಅಮೆರಿಕ ದೊಡ್ಡ ತಪ್ಪು ಮಾಡಿದೆ. ಅದು ನಿದ್ರಿಸುತ್ತಿರುವ ಡ್ರ್ಯಾಗನ್ ಅನ್ನು ಎಚ್ಚರಿಸಿದೆ. ನಮಗೆ ಭಾರೀ ನಷ್ಟವಾಗಿದೆ ನಿಜ. ಆದರೆ ನಾವು ಹಿಂದೆ ಬಳಸಲು ಹಿಂಜರಿಯುತ್ತಿದ್ದ ಸಾಮರ್ಥ್ಯಗಳನ್ನು ಈಗ ಸಕ್ರಿಯಗೊಳಿಸಿದ್ದೇವೆ" ಎಂದು ಆಡಳಿತದ ಒಳಗಿನ ಮೂಲಗಳು ಫೈನಾನ್ಷಿಯಲ್ ಟೈಮ್ಸ್(FT) ಗೆ ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.

ಅಮೆರಿಕ ಜೊತೆ ಶಾಂತಿ ಒಪ್ಪಂದ ಘೋಷಣೆಯಾಗುತ್ತಿದ್ದಂತೆ ಸರ್ಕಾರಿ ಟಿವಿ ಮಾಧ್ಯಮ ವಿಜಯೋತ್ಸವದ ಸಂಗೀತವನ್ನು ನುಡಿಸಿತು. ಸರ್ಕಾರವು ತನ್ನ ಅತಿದೊಡ್ಡ ಬಿಕ್ಕಟ್ಟಿನಿಂದ ಬದುಕುಳಿದಿದೆ ಮತ್ತು ಈಗ ಮತ್ತಷ್ಟು ಬಲಿಷ್ಠವಾಗಿ ಹೊರಬಂದಿದೆ ಎಂದು ಹೇಳಿದೆ.

ವರದಿಯಲ್ಲಿ ಉಲ್ಲೇಖಿಸಲಾದ ಪಾಶ್ಚಿಮಾತ್ಯ ರಾಜತಾಂತ್ರಿಕರೊಬ್ಬರು, ಈ ಸಂಘರ್ಷವು ಸರ್ಕಾರದ ದೀರ್ಘಕಾಲದ ಸಿದ್ಧಾಂತ ಮತ್ತು ಸಿದ್ಧತೆಗಳಿಗೆ ನಿಜವಾಗಿಯೂ ಹೊಂದಿಕೊಂಡಿದೆ ಎಂದು ಹೇಳಿದರು.

"ಯುದ್ಧವು ಅವರ ಸಿದ್ಧಾಂತಕ್ಕೆ ಮತ್ತು ಅವರು ದಶಕಗಳಿಂದ ತಯಾರಿ ನಡೆಸುತ್ತಿದ್ದ ವಿಷಯಗಳಿಗೆ ಸಂಪೂರ್ಣವಾಗಿ ಹೊಂದಿಕೊಂಡಿತು. ಅದು ಅವರನ್ನು ಮತ್ತಷ್ಟು ಬಲಪಡಿಸಿತು" ಎಂದು ಅವರು ಹೇಳಿದರು. ಅಲ್ಲದೆ ನಾಯಕತ್ವದಲ್ಲಿನ ಬದಲಾವಣೆಯನ್ನು ಸಹ ಇರಾನ್ ಯಶಸ್ವಿಯಾಗಿ ನಿಭಾಯಿಸಿತು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com