ಹಾರ್ಮುಜ್ ಜಲಸಂಧಿ ಬಳಿ ಹಡಗುಗಳ ಮೇಲೆ ದಾಳಿ: ಇಬ್ಬರು ಭಾರತೀಯರು ಸಾವು, ಒಬ್ಬರು ನಾಪತ್ತೆ; ಹೊಣೆ ಹೊತ್ತ ಇರಾನ್

ಭಾರತದ ಕಾಂಡ್ಲಾ ಬಂದರಿಗೆ ಹೊರಟ್ಟಿದ್ದ ಥಾಯ್ ಕಂಪನಿಯ ಪ್ರಮುಖ ಶಿಪ್ಪಿಂಗ್ ಕಂಪನಿ PCL ಒಡೆತನದ ಮಯೂರಿ ನಾರೀ ಎಂಬ ಹಡಗು ಯುಎಇಯ ಖಲೀಫಾ ಬಂದರನ್ನು ತೊರೆದು ಹಾರ್ಮುಜ್ ಜಲಸಂಧಿ ಬಳಿ ಸಾಗುವಾಗ ದಾಳಿಗೆ ಒಳಗಾಗಿದೆ.
Black Smoke, Fire On Thai Cargo Ship
ಥಾಯ್ ಕಾರ್ಗೋ ಹಡಗಿನಲ್ಲಿ ಬೆಂಕಿ, ಕಪ್ಪು ಹೊಗೆ ಬರುತ್ತಿರುವ ಚಿತ್ರ
Updated on

ಯುಎಇ: ಯುನೈಟೆಡ್ ಅರಬ್ ಎಮಿರೈಟ್ಸ್ ಬಂದರಿನಿಂದ ಹೊರಟ ಥಾಯ್-ಧ್ವಜದ ಕಾರ್ಗೋ ಹಡುಗಿನ ಮೇಲೆ ಬುಧವಾರ ಹಾರ್ಮುಜ್ ಜಲಸಂಧಿ ಬಳಿ ಇರಾನ್ ದಾಳಿ ನಡೆಸಿಿದೆ. ಈ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಮತ್ತೊಬ್ಬರು ಕಾಣೆಯಾಗಿದ್ದಾರೆ. ಆದರೆ ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದೆ ಎಂದು ರಾಯಲ್ ಥಾಯ್ ನೌಕಾಪಡೆ ತಿಳಿಸಿದೆ.

ಭಾರತದ ಕಾಂಡ್ಲಾ ಬಂದರಿಗೆ ಹೊರಟ್ಟಿದ್ದ ಥಾಯ್ ಕಂಪನಿಯ ಪ್ರಮುಖ ಶಿಪ್ಪಿಂಗ್ ಕಂಪನಿ PCL ಒಡೆತನದ ಮಯೂರಿ ನಾರೀ ಎಂಬ ಹಡಗು ಯುಎಇಯ ಖಲೀಫಾ ಬಂದರನ್ನು ತೊರೆದು ಹಾರ್ಮುಜ್ ಜಲಸಂಧಿ ಬಳಿ ಸಾಗುವಾಗ ದಾಳಿಗೆ ಒಳಗಾಗಿದೆ. ಇರಾನ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ರಾಯಲ್ ಥಾಯ್ ನೌಕಾಪಡೆಯು ಬಿಡುಗಡೆ ಮಾಡಿದ ಫೋಟೋಗಳಲ್ಲಿ ಹಡಗಿನಿಂದ ದಟ್ಟವಾದ ಕಪ್ಪು ಹೊಗೆ ಬರುತ್ತಿರುವುದನ್ನು ತೋರಿಸುತ್ತವೆ. ಹಡಗು ಸುತ್ತಮುತ್ತಲಿನ ನೀರಿನಲ್ಲಿ life rafts (ಜೀವ ರಕ್ಷಕ ಸಾಧನಗಳು) ಗೋಚರಿಸುತ್ತವೆ.

Black Smoke, Fire On Thai Cargo Ship
ಮಧ್ಯಪ್ರಾಚ್ಯ ಸಂಘರ್ಷ: ತೀವ್ರಗೊಂಡ ಇಂಧನ ಬಿಕ್ಕಟ್ಟು, ಅಮೆರಿಕ ದೂಷಿಸಿದ ಇರಾನ್!

ದಾಳಿಗೆ ನಿರ್ದಿಷ್ಟ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರಾಯಲ್ ಥಾಯ್ ನೌಕಾಪಡೆ ಹೇಳಿದೆ. ಈ ಮಧ್ಯೆ ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ. ಒಮಾನಿ ನೌಕಾಪಡೆಯು 20 ನಾವಿಕರನ್ನು ರಕ್ಷಿಸಿದ್ದು, ಉಳಿದ ಮೂವರು ಸಿಬ್ಬಂದಿ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com