ಸಿಇಒ ಹನಿಟ್ರ್ಯಾಪ್ ಕೇಸ್: Nvidia ಷೇರು ಮೌಲ್ಯ ಭಾರಿ ಕುಸಿತ, ನೂರಾರು ಬಿಲಿಯನ್ ಡಾಲರ್ ನಷ್ಟ, 2ನೇ ಸ್ಥಾನಕ್ಕೂ ಕುತ್ತು!

ಮಂಗಳವಾರ ಕಂಪನಿಯ ಷೇರುಗಳು ಶೇ.6.3ರಷ್ಟು ಕುಸಿದು 167.35 ಡಾಲರ್‌ಗೆ ತಲುಪಿವೆ. ಇದರೊಂದಿಗೆ ವಿಶ್ವದ 2ನೇ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿ ಎಂಬ ಸ್ಥಾನವನ್ನು ಕಳೆದುಕೊಂಡು 3ನೇ ಸ್ಥಾನಕ್ಕೆ ಕುಸಿದಿದೆ.
Nvidia falls more than 6 percent
ಎನ್ ವಿಡಿಯೋ ಷೇರು ಮೌಲ್ಯ ಕುಸಿತ
Updated on: 

ನ್ಯೂಯಾರ್ಕ್: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ಎನ್‌ವಿಡಿಯಾ (Nvidia) ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ.

ಮಂಗಳವಾರ ಕಂಪನಿಯ ಷೇರುಗಳು ಶೇ.6.3ರಷ್ಟು ಕುಸಿದು 167.35 ಡಾಲರ್‌ಗೆ ತಲುಪಿವೆ. ಇದರೊಂದಿಗೆ ವಿಶ್ವದ ಎರಡನೇ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿ ಎಂಬ ಸ್ಥಾನವನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದೆ.

ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜೆನ್ಸನ್ ಹುವಾಂಗ್ ಅವರ ಸುತ್ತ ಕೇಳಿಬಂದಿರುವ ವಿವಾದ ಮತ್ತು ಗೂಢಚರ್ಯೆ ಆರೋಪಗಳ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಗಿದೆ.

ಕಳೆದ ಕೆಲವು ದಿನಗಳಿಂದ ಎನ್‌ವಿಡಿಯಾ ಷೇರುಗಳ ಮಾರಾಟ ಹೆಚ್ಚಾಗಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಭಾರಿ ಹೊಡೆತ ಬಿದ್ದಿದೆ.

Nvidia falls more than 6 percent
'ಗೂಢಚಾರಿಕೆ' ಜೊತೆಗೆ Nvidia CEO ಸಂಬಂಧದಿಂದ ಚೀನಾಕ್ಕೆ 7 ಬಿಲಿಯನ್ ಡಾಲರ್ ಮೌಲ್ಯದ ಚಿಪ್ ಖರೀದಿಗೆ ನೆರವು: ವರದಿ

₹400 ಬಿಲಿಯನ್ ಡಾಲರ್‌ಗೂ ಹೆಚ್ಚು ಮಾರುಕಟ್ಟೆ ಮೌಲ್ಯ ನಷ್ಟ

ಜೆನ್ಸನ್ ಹುವಾಂಗ್ ಕುರಿತ ವಿವಾದ ಬಹಿರಂಗವಾದ ಬಳಿಕ ಎನ್‌ವಿಡಿಯಾ ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ 400 ಬಿಲಿಯನ್ ಡಾಲರ್‌ಗೂ ಹೆಚ್ಚು ಕುಸಿತವಾಗಿದೆ ಎಂದು ವರದಿಯಾಗಿದೆ.

ಇದರ ಪರಿಣಾಮವಾಗಿ ವಿಶ್ವದ ಅತಿದೊಡ್ಡ ಕಂಪನಿಗಳ ಪಟ್ಟಿಯಲ್ಲಿ ಎನ್‌ವಿಡಿಯಾ ಮೂರನೇ ಸ್ಥಾನಕ್ಕೆ ಇಳಿದಿದೆ. ಆಪಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಇದೀಗ ಎನ್‌ವಿಡಿಯಾಕ್ಕಿಂತ ಮುಂದಿವೆ.

ಒಂದು ಕಾಲದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದ್ದ ಎನ್‌ವಿಡಿಯಾ, ಇದೀಗ ತನ್ನ ಮುಖ್ಯಸ್ಥರ ಸುತ್ತಲಿನ ವಿವಾದದಿಂದ ತೀವ್ರ ಸಂಕಷ್ಟ ಎದುರಿಸುತ್ತಿದೆ.

ಚೀನಾ ಗೂಢಚಾರಿಣಿ ಜೊತೆ ಸಂಬಂಧದ ಆರೋಪ

ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಹುವಾಂಗ್ ವಿದೇಶಿ ಗುಪ್ತಚರ ಸಂಸ್ಥೆಯ ಗುರಿಯಾಗಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಈ ಕುರಿತು ಪ್ರತಿಕ್ರಿಯಿಸಿದ್ದು, ಎಫ್‌ಬಿಐ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಆದರೆ, ಹುವಾಂಗ್ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಟ್ರಂಪ್, "ಆ ಮಹಿಳೆ ಗೂಢಚಾರಿಣಿ ಎಂಬುದು ಅವರಿಗೆ ಖಂಡಿತವಾಗಿಯೂ ತಿಳಿದಿರಲಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

ಈ ಬೆಳವಣಿಗೆಯಿಂದ ಎನ್‌ವಿಡಿಯಾ ಕಂಪನಿಯ ಗೌರವ, ಷೇರು ಮೌಲ್ಯ ಮತ್ತು ಭವಿಷ್ಯದ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

Nvidia falls more than 6 percent
ಚೀನಾ 'Spy' ಜೊತೆ Nvidia ಸಿಇಒ ಜೆನ್ಸನ್ ಹುವಾಂಗ್‌ ಪ್ರೀತಿ: FBI ತನಿಖೆ ನಡೆಯುತ್ತಿದೆ ಎಂದ ಟ್ರಂಪ್; ಷೇರು ಮೌಲ್ಯ ಕುಸಿತ..!

ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

ಸುಮಾರು 4 ಟ್ರಿಲಿಯನ್ ಡಾಲರ್‌ಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಎನ್‌ವಿಡಿಯಾ, ಎಐ ಉದ್ಯಮಕ್ಕೆ ಅಗತ್ಯವಿರುವ ಚಿಪ್‌ಗಳನ್ನು ಪೂರೈಸುವ ಪ್ರಮುಖ ಕಂಪನಿಯಾಗಿದೆ. ಜಗತ್ತಿನಾದ್ಯಂತ ಹಲವು ಎಐ ಕಂಪನಿಗಳು ಇದರ ತಂತ್ರಜ್ಞಾನವನ್ನು ಅವಲಂಬಿಸಿವೆ.

ಹೀಗಾಗಿ ಸಿಇಒ ಸುತ್ತಲಿನ ವಿವಾದವನ್ನು ಕಂಪನಿಯ ನಿರ್ದೇಶಕ ಮಂಡಳಿ, ಷೇರುದಾರರು ಮತ್ತು ಅಮೆರಿಕದ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

ಕಂಪನಿಯ ಮುಂದಿನ ನಾಯಕತ್ವ ಯಾರು ವಹಿಸಿಕೊಳ್ಳಬಹುದು, ಈ ವಿವಾದದಿಂದ ವ್ಯವಹಾರದ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬ ಪ್ರಶ್ನೆಗಳೂ ಎದುರಾಗಿವೆ.

ಸೋಮವಾರವೇ ಎನ್‌ವಿಡಿಯಾ ಷೇರುಗಳು ಶೇ.4ಕ್ಕೂ ಹೆಚ್ಚು ಕುಸಿದಿದ್ದವು. ಮಂಗಳವಾರವೂ ಕುಸಿತ ಮುಂದುವರಿದಿದ್ದು, ಹೂಡಿಕೆದಾರರ ಆತಂಕ ಮತ್ತಷ್ಟು ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X