ಅಮೆರಿಕದಲ್ಲಿ ಸಾಲು ಸಾಲು ತಾಂತ್ರಿಕ ವೈಫಲ್ಯ! ಮೈಕ್ರೋಸಾಫ್ಟ್, ವಿಮಾನ ಹಾರಾಟ ಬೆನ್ನಲ್ಲೇ ಕೈಕೊಟ್ಟ ಪ್ರಮುಖ ಬ್ಯಾಂಕ್‌ಗಳು

ಅಮೆರಿಕದಲ್ಲಿ ಸಾಮೂಹಿಕ ವಿಮಾನ ಸ್ಥಗಿತದ ಬೆನ್ನಲ್ಲೇ ಇಂದು ಅಮೆರಿಕದ ಪ್ರಮುಖ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿಯೂ ತಾಂತ್ರಿಕ ದೋಷ ಕಾಣಿಸಿಕೊಂಡು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಆ ಕುರಿತ ವರದಿ ಇಲ್ಲಿದೆ:
US Tech Crisis JP Morgan Chase Bank Outage Disrupts Digital Transactions
ವಿಮಾನ ಹಾರಾಟ ಬೆನ್ನಲ್ಲೇ ಕೈಕೊಟ್ಟ ಪ್ರಮುಖ ಬ್ಯಾಂಕ್‌ಗಳುAI Image
Updated on: 

ವಾಷಿಂಗ್ಟನ್ ಡಿ. ಸಿ. (ಅಮೆರಿಕ): ಕಳೆದ ವಾರವಷ್ಟೇ ಮೈಕ್ರೋಸಾಫ್ಟ್ ಸರ್ವರ್ ಸ್ಥಗಿತ ಮತ್ತು ವಾಯು ಸಂಚಾರ ನಿಯಂತ್ರಣ (FAA) ವ್ಯವಸ್ಥೆಯ ವೈಫಲ್ಯದಿಂದ ಅಮೆರಿಕದಾದ್ಯಂತ ವಿಮಾನಗಳ ಹಾರಾಟ ಸ್ಥಗಿತಗೊಂಡಿತ್ತು. ಇದರ ಬೆನ್ನಲ್ಲೇ, ಅಮೆರಿಕದ ಪ್ರಮುಖ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿಯೂ ತಾಂತ್ರಿಕ ದೋಷ ಕಾಣಿಸಿಕೊಂಡು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಹೌದು, ಅಮೆರಿಕದ ಅತಿದೊಡ್ಡ ಬ್ಯಾಂಕ್ ಆದ ಜೆಪಿಮಾರ್ಗನ್ ಚೇಸ್‌ನ ಆಂತರಿಕ ಸಾಫ್ಟ್‌ವೇರ್ ದೋಷದಿಂದಾಗಿ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಹಣ ವರ್ಗಾವಣೆ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಲಕ್ಷಾಂತರ ಗ್ರಾಹಕರು ಪರದಾಡುವಂತಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸಮಸ್ಯೆಗೆ ನಿಜವಾದ ಕಾರಣವೇನು?

ಜೆಪಿಮಾರ್ಗನ್ ಚೇಸ್ ಬ್ಯಾಂಕ್‌ನ ಆಂತರಿಕ ಹಾರ್ಡ್‌ವೇರ್ ವ್ಯವಸ್ಥೆಯಲ್ಲಿ ಮಾಡಲಾದ ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿದ್ದ ದೋಷವೇ ಈ ಎಲ್ಲಾ ವಿಳಂಬಗಳಿಗೆ ಕಾರಣವಾಗಿದೆ. ಇದು ಯಾವುದೇ ಸೈಬರ್ ದಾಳಿಯಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಇದರಿಂದ ಚೇಸ್ ಬ್ಯಾಂಕ್ ಅತಿ ಹೆಚ್ಚು ಪ್ರಮಾಣದ ವಹಿವಾಟುಗಳನ್ನು ನಿರ್ವಹಿಸುವುದರಿಂದ, ಅಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯು ಬ್ಯಾಂಕ್ ಆಫ್ ಅಮೆರಿಕ, ವೆಲ್ಸ್ ಫಾರ್ಗೋ, ಯು.ಎಸ್. ಬ್ಯಾಂಕ್ ಮತ್ತು ಕ್ಯಾಪಿಟಲ್ ಒನ್ ಗ್ರಾಹಕರ ಅಂತರ-ಬ್ಯಾಂಕ್ ವಹಿವಾಟುಗಳ ಮೇಲೂ ಪರಿಣಾಮ ಬೀರಿದೆ.

ಮುಂದುವರೆದು, ಸಾವಿರಾರು ಗ್ರಾಹಕರಿಗೆ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್ ಲಾಗಿನ್ ಆಗಲು ಸಾಧ್ಯವಾಗಲಿಲ್ಲ. ಖಾತೆಯ ಬ್ಯಾಲೆನ್ಸ್ ಕಾಣಿಸದಿರುವುದು, ವೈರ್ ಟ್ರಾನ್ಸ್‌ಫರ್ ಮತ್ತು ಜನಪ್ರಿಯ ಪಾವತಿ ಜಾಲವಾದ ಝೆಲ್ಲೆ ಮೂಲಕ ಹಣ ವರ್ಗಾವಣೆ ಮಾಡುವಲ್ಲಿ ತೀವ್ರ ವಿಳಂಬ ಕಂಡುಬಂದಿದೆ. ಅದರಲ್ಲೂ, ತಾಂತ್ರಿಕ ತಜ್ಞರ ನಿರಂತರ ಪ್ರಯತ್ನದ ಬಳಿಕ ಸೋಮವಾರ ಸಂಜೆಯ ವೇಳೆಗೆ ಸಾಫ್ಟ್‌ವೇರ್ ದೋಷವನ್ನು ಸರಿಪಡಿಸಿ, ಬ್ಯಾಂಕಿಂಗ್ ಸೇವೆಗಳು ಸಹಜ ಸ್ಥಿತಿಗೆ ಮರಳಿವೆ. ಅದರಂತೆ, ಗ್ರಾಹಕರ ಹಣ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಭರವಸೆ ನೀಡಿದೆ.

US Tech Crisis JP Morgan Chase Bank Outage Disrupts Digital Transactions
ಅಮೆರಿಕದಲ್ಲಿ ವಾಯು ಸಂಚಾರ ವ್ಯವಸ್ಥೆ ಅಸ್ತವ್ಯಸ್ತ: 10,000ಕ್ಕೂ ಹೆಚ್ಚು ವಿಮಾನ ರದ್ದು-ವಿಳಂಬ; ಪ್ರಯಾಣಿಕರ ಪರದಾಟ!

ಅಮೆರಿಕದಲ್ಲಿ ಸಾಲು ಸಾಲು ತಾಂತ್ರಿಕ ವೈಫಲ್ಯಗಳು:

ಕಳೆದ ಕೆಲವು ದಿನಗಳಲ್ಲಿ ಅಮೆರಿಕದ ಪ್ರಮುಖ ಡಿಜಿಟಲ್ ಮೂಲಸೌಕರ್ಯಗಳು ಒಂದರ ಹಿಂದೆ ಒಂದರಂತೆ ಕೈಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ:

  • ಮೈಕ್ರೋಸಾಫ್ಟ್ ಸ್ಥಗಿತ: ಕಳೆದ ವಾರ ಔಟ್‌ಲುಕ್, ಟೀಮ್ಸ್ ಸೇರಿದಂತೆ ಮೈಕ್ರೋಸಾಫ್ಟ್ ಸೇವೆಗಳಲ್ಲಿ ಎರಡು ದಿನಗಳ ಕಾಲ ವ್ಯತ್ಯಯ ಉಂಟಾಗಿತ್ತು.

  • ವಿಮಾನಯಾನ ಸ್ಥಗಿತ: ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಸಂವಹನ ಜಾಲದ ದೋಷದಿಂದ ದೇಶಾದ್ಯಂತ 9,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿ, ಲಕ್ಷಾಂತರ ಪ್ರಯಾಣಿಕರು ಪರದಾಡಿದ್ದರು. ಇದರ ಬೆನ್ನಲ್ಲೇ ಸೋಮವಾರ ಯುನೈಟೆಡ್ ಏರ್‌ಲೈನ್ಸ್‌ನ ತೂಕ ಪರಿಶೀಲನಾ ವ್ಯವಸ್ಥೆಯಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡು ನೂರಾರು ವಿಮಾನಗಳು ವಿಳಂಬವಾದವು.

  • ಬ್ಯಾಂಕಿಂಗ್ ವ್ಯತ್ಯಯ: ಈಗ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ತಾಂತ್ರಿಕ ಅಡಚಣೆ ಕಾಣಿಸಿಕೊಂಡಿರುವುದು ಹಳೆಯ ಸಾಫ್ಟ್‌ವೇರ್ ವ್ಯವಸ್ಥೆಗಳ ಮೇಲಿನ ಅವಲಂಬನೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X