

ಎಂಜಿನಿಯರೊಬ್ಬರು ಸೂಟು, ಬೂಟು ಹಾಕ್ಕೊಂಡು ಅದುವರೆಗೂ ಬರುತ್ತಿದ್ದವರು ಏಕಾಏಕಿ ಖಾದಿ ಬಟ್ಟೆ- ಲುಂಗಿ- ಬನಿಯನ್ ಹಾಕ್ಕೊಂಡು ಬಂದಿದ್ದನ್ನು ನೋಡಿದ ಗ್ರಾಮಸ್ಥರು ಅಕ್ಷರಶಃ ಹುಚ್ಚನಾಗಿರಬೇಕು ಎಂದು ಜರಿದರು. ಆದರೆ, ಈಗ ಹಾಗೆ ಜರಿದವರೇ ಮೂಗಿಗೆ ಬೆರಳಿಟ್ಟಿದ್ದಾರೆ... ಬಿಕನಳ್ಳಿಯ ಜಯಂತನಾಥ ಕೃಷಿಯಲ್ಲೂ ಕ್ಲಿಕ್ಕಾಗಿದ್ದಾರೆ...
ಇವರು ಮಲೇಷ್ಯಾದಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದೋರು. ಆದರೆ, ಹುಟ್ಟೂರಿನಲ್ಲಿ ಈಗ ವರದ್ದು ನೇಗಿಲಯೋಗಿಯ ಕಾಯಕ!
ಇದು ಕೊಪ್ಪಳ ತಾಲೂಕಿನ ಬಿಕನಳ್ಳಿಯ ಜಯಂತನಾಥ ಅವರ ರಿಯಲ್ ಸ್ಟೋರಿ. ಇವರು ಬೆಂಗಳೂರಿನ ರೇಲ್ವೆ ನಿಲ್ದಾಣ ಹಾಗೂ ಮೆಜೆಸ್ಟಿಕ್ ಮಧ್ಯದ ಒಳ ಸೇತುವೆ ನಿರ್ಮಾಣದ ಪ್ರಮುಖ ರೂವಾರಿಗಳಲ್ಲೊಬ್ಬರು. ಮಲೇಷ್ಯಾದ 'ಆರ್ ಆ್ಯಂಡ್ ಎಂ' ಕಂಪನಿಯಲ್ಲಿ ಇವರಿಗಿದ್ದಿದ್ದು ಅತ್ಯುನ್ನತ ಹುದ್ದೆ. ನಂತರ ದೇಶಿಯವಾಗಿಯೇ ಅಲ್ಲಿ, ಇಲ್ಲಿ ಸೇವೆ ಸಲ್ಲಿಸಿದರು. ಆದರೆ, ಇದ್ಯಾವುದರಿಂದಲೂ ಸಂತೃಪ್ತಿ ಸಿಗುತ್ತಿಲ್ಲ ಎಂದು ವೃತ್ತಿಯನ್ನೇ ಧಿಕ್ಕರಿಸಿ 2007ರಲ್ಲಿ ಹುಟ್ಟೂರಿಗೆ ಬಂದರು.
ನೈಸರ್ಗಿಕ ಕೃಷಿ
ಎಂಜಿನಿಯರೊಬ್ಬರು ಸೂಟು, ಬೂಟು ಹಾಕ್ಕೊಂಡು ಅದುವರೆಗೂ ಬರುತ್ತಿದ್ದವರು ಏಕಾಏಕಿ ಖಾದಿ ಬಟ್ಟೆ- ಲುಂಗಿ- ಬನಿಯನ್ ಹಾಕ್ಕೊಂಡು ಬಂದಿದ್ದನ್ನು ನೋಡಿದ ಗ್ರಾಮಸ್ಥರು ಅಕ್ಷರಶಃ ಹುಚ್ಚನಾಗಿರಬೇಕು ಎಂದು ಜರಿದರು. ಜಯಂತನಾಥ ಅವರು ಸಗಣಿ ಬಳಿಯುವುದು, ಹೊಲಕ್ಕೆ ಎತ್ತು ಹಿಡಿದುಕೊಂಡು ಹೋಗುವುದನ್ನು ಕಂಡು ಗ್ರಾಮಸ್ಥರು ಅಲ್ಲಿ ಏನೋ ಆಗಿರಬೇಕು. ಅದಕ್ಕೆ ಬಂದಿದ್ದಾರೆ ಎಂದೆಲ್ಲಾ ಜರಿದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅವರು ಕೃಷಿ ಮಾಡಲು ಶುರು ಮಾಡಿದರು. ಅದರಲ್ಲೂ ನೈಸರ್ಗಿಕ ಕೃಷಿಯ ಮೂಲಕ ದೇಸಿ ತಳಿ ಉಳಿಸುವುದು, ಅದನ್ನೇ ಬೆಳೆಯುವುದರ ಮೂಲಕ ಬೆರಗಾಗುವಂತೆ ಕೃಷಿಯಲ್ಲಿ ಸಾಧನೆಗೈದರು. ಆದರೆ, ಕೃಷಿಯಿಂದ ಲಾಭದ ನಿರೀಕ್ಷೆ ಅವರಿಗಿಲ್ಲ. ಕೇವಲ ಆತ್ಮತೃಪ್ತಿಗಾಗಿ ಅಷ್ಟೇ. ನನಗೆ ಒತ್ತಡದ ಬದುಕಿಗಿಂತ ಆರೋಗ್ಯ ಮುಖ್ಯ ಅಂತಾರವರು.
ಇವರದ್ದು ಪಕ್ಕ ನೈಸರ್ಗಿಕ ಕೃಷಿ. ರಾಸಾಯನಿಕ ಗೊಬ್ಬರವನ್ನು ಕಣ್ಣಲ್ಲೂ ನೋಡರಲ್ಲ ಜಯಂತ್. ಹೀಗಾಗಿ, ಬರವಿದ್ದರೂ ಹೊಲದಲ್ಲಿ ಫಸಲು ಸಮೃದ್ಧ. ಕಬ್ಬು, ಪಪ್ಪಾಯಿ, ಜೋಳ, ಸಜ್ಜೆ, ಔಡಲ, ಸಾಸಿವೆ, ಬೇವು, ನಿಂಬೆ ಬೆಳೆಯುತ್ತಿದ್ದಾರೆ. ಇದ್ದ ಅಲ್ಪ ನೀರಿನಲ್ಲೇ ಹನಿ ನೀರಾವರಿ ಅಳವಡಿಸಿದ್ದಾರೆ. ಮಾರಾಟದ ದೃಷ್ಟಿ ಇಟ್ಟುಕೊಳ್ಳದೆ, ನೈಸರ್ಗಿಕ ಕೃಷಿಯ ಅಭಿವೃದ್ಧಿಗೆ ಇಷ್ಟೆಲ್ಲ ಶ್ರಮವಷ್ಟೇ.
ಲಾಭ ಬೇಡವೇ ಬೇಡ
'ನಾನು ಲಾಭಾಂಶವನ್ನು ನೆಚ್ಚಿಕೊಂಡಿಲ್ಲ ಮತ್ತು ಅದರ ಬಗ್ಗೆ ನಂಬಿಕೆಯೂ ಇಲ್ಲ. ಆದರೆ, ಸಮೃದ್ಧಿಯಿಂದ ಬದುಕುತ್ತಿದ್ದೇನೆ. ಸ್ವಾವಲಂಬಿಯಾಗಿದ್ದೇನೆ. ಮಾರುಕಟ್ಟೆಯಿಂದ ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ಈಗ ಬೆಲ್ಲ ಮತ್ತು ಕೆಲ ಸಾಂಬಾರ್ ಪದಾರ್ಥವನ್ನು ಮಾತ್ರ ಮಾರುಕಟ್ಟೆಯಿಂದ ತರುತ್ತೇನೆ. ಇದಕ್ಕಾಗಿ ನಾನು ಅತಿ ಕಡಿಮೆ ವೆಚ್ಚ ಮಾಡುತ್ತೇನೆ. ಮಳೆಯಾಶ್ರಿತ 10 ಎಕರೆ ಹಾಗೂ ನೀರಾವರಿ 6 ಎಕರೆ ಭೂಮಿ ಇದೆ' ಎನ್ನುತ್ತಾರೆ ಜಯಂತ್.
ಆರೋಗ್ಯಪೂರ್ಣ ಮಗು
'ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆರು ವರ್ಷದ ಮಗನಿಗೆ ಆರೋಗ್ಯ ಕೆಟ್ಟಾಗ ಇದುವರೆಗೆ ಅವರು ವೆಚ್ಚ ಮಾಡಿದ್ದು ಕೇವಲ ರು. 238 ಮಾತ್ರ. ಇನ್ನು ಇವನಿಗಿಂತ ಚಿಕ್ಕವನಿಗೆ ಒಂದು ರುಪಾಯಿ ಮೆಡಿಕಲ್ಗಾಗಿ ಖರ್ಚು ಮಾಡಿಯೇ ಇಲ್ಲ. ಆದರೆ, ಈಗಿರುವ ಸ್ಥಿತಿಯಲ್ಲಿ ಆದಾ ಯದ ಬಹುತೇಕ ಭಾಗವನ್ನು ಮೆಡಿಕಲ್ ಖರ್ಚಿಗಾಗಿ ಇಡುತ್ತಾರೆ. ನೈಸರ್ಗಿಕ ಬದುಕು ಸಾಗಿಸಿದರೇ ಅದು ಇರು ವುದಿಲ್ಲ ಮತ್ತು ಆರೋಗ್ಯವಂತರಾಗಿತ್ತೇವೆ' ಎನ್ನುತ್ತಾರೆ.
-ಸೋಮರಡ್ಡಿ ಅಳವಂಡಿ