ಅಸ್ಥಿಪಂಜರ ಅಂದ್ರೆ ಬಹುತೇಕರಿಗೆ ಭಯ. ಆದರೆ, ಮೆಡಿಕಲ್ ವಿದ್ಯಾರ್ಥಿಗಳಿಗೆ- ವೈದ್ಯರಿಗೆ ಇದು ಹೆದರಿಕೆಯ ವಿಚಾರ ಅಲ್ಲವೇ ಅಲ್ಲ. ಹಾಗೆಯೇ ಅಮೆರಿಕದ ಈ ಸುಸಾನ್ ಎಂಬವಳಿಗೆ ಕೂಡ.
ಈಕೆ 30 ವರುಷಗಳಿಂದ ಮೆಡಿಕಲ್ ಇಲ್ಲುಸ್ಟೇಶನ್ ಸಿದ್ಧಪಡಿಸುತ್ತಿದ್ದಾಳೆ. ವೈದ್ಯ ಜಗತ್ತಿನ ಎಲ್ಲ ಚಿತ್ರಗಳೂ ಈಕೆಯೊಳಗೆ ಗೂಡು ಕಟ್ಟಿಕೊಂಡಿವೆ. ನವೆಂಬರ್ 1ರ ಕಳೆದ ವರುಷದಿಂದ ಈಕೆ ವಿಶ್ವ ಪ್ರಯಾಣ ಶುರುಹಚ್ಚಿಕೊಂಡಿದ್ದಾಳೆ. ಅಂದಹಾಗೆ, ಈಕೆಗೆ ಸಹಪ್ರಯಾಣಿಕ ಆಗಿರುವುದು ಅಸ್ಥಿಪಂಜರ! ನ.1 'ವಿಶ್ವ ಸತ್ತವರ ದಿನ'. ಈ ನೆನಪಿಗೆ ತಾನು ಹೋದಲ್ಲೆಲ್ಲ ಮೂಳೆ ಮನುಷ್ಯನನ್ನು ಕರೆದೊಯ್ಯುತ್ತಿದ್ದಾಳೆ. ಜನರಲ್ಲಿ ಅಸ್ಥಿಪಂಜರದ ಬಗ್ಗೆಯಿರುವ ಭಯವನ್ನು ಹೋಗಲಾಡಿಸುವ ಉದ್ದೇಶ ಈಕೆಯದಂತೆ. ಈಗಾಗಲೇ ಈಕೆ ವೆನಿಸ್, ಪ್ಯಾರಿಸ್, ರೋಮ್, ನ್ಯೂಯಾರ್ಕ್ ಮುಂತಾದ ಸಿಟಿಗಳ ಐತಿಹಾಸಿಕ ಸ್ಮಾರಕಗಳೆದುರು ಈ ಮೂಳೆ ಮಾನವನೊಂದಿಗೆ ಫೋಟೋ ತೆಗೆಸಿಕೊಂಡಿದ್ದಾಳೆ. ಅಂದಹಾಗೆ, ಈ ಮೂಳೆಮಾನವ ನಿಜವಾದುದ್ದೇನಲ್ಲ. ಪ್ಲಾಸ್ಟಿಕ್‌ನಿರ್ಮಿತವಾದುದು.