

ಪರಿಸರದ ಬಗ್ಗೆ ಕಾಳಜಿ ಎಲ್ಲರಿಗೂ ಇರುತ್ತದೆ. ಹಾಗಂತ ಬೀದಿಗಿಳಿದು ಮರ ಹಿಡಿದು ಅಪ್ಪಿಕೋ ಚಳುವಳಿಯನ್ನೋ, ಸಮುದ್ರ ಸೇರುವ ನೀರಿಗೆ ಅಡ್ಡ ಅಣೆಕಟ್ಟನ್ನೋ ಕಟ್ಟುತ್ತಾ ಕೂರಲು ಎಲ್ಲರಿಂದಾಗುವುದಿಲ್ಲ. ಆದರೆ ಎಲ್ಲರಿಂದಲೂ ಆಗಬಹುದಾದ ಅಳಿಲುಸೇವೆ ಎನಿಸಿದರೂ ದೊಡ್ಡದೇನೋ ಬದಲಾವಣೆಗೆ ಕಾರಣವಾಗುವ ಕಾರ್ಯಗಳು ಹಲವಿವೆ. ಇಷ್ಟಾದರೂ ಮಾಡಿದರೆ ನಿಮ್ಮ ಪರಿಸರ ಪ್ರೀತಿಗೊಂದು ಸಾರ್ಥಕ್ಯ ಸಿಗುತ್ತದೆ.
- ದೇಶದ ಪ್ರತಿ ಮನೆಯಲ್ಲೂ ಇರುವ ಇನ್‌ಕ್ಯಾಂಡಿಸೆಂಟ್ ಬಲ್ಬ್‌ಗಳನ್ನು ತೆಗೆದು ಫ್ಲೂರೋಸೆಂಟ್ ಬಲ್ಬ್ ಹಾಕಿದ್ದೇ ಆದಲ್ಲಿ ರಸ್ತೆಯಿಂದ ಒಂದು ಮಿಲಿಯನ್ ಕಾರುಗಳನ್ನು ತೆಗೆದರೆ ಅದೆಷ್ಟು ಮಾಲಿನ್ಯವನ್ನು ತಪ್ಪಿಸಬಹುದೋ ಅಷ್ಟೇ ಮಾಲಿನ್ಯ ತಪ್ಪಿಸಿದಂತಾಗುತ್ತದೆ.
- ನಿಮ್ಮ ಕಂಪ್ಯೂಟರ್‌ನ್ನು ರಾತ್ರಿಯಿಡಿ ಸ್ಲೀಪ್ ಮೋಡ್‌ನಲ್ಲಿಡುವ ಬದಲು ಶಟ್ ಡೌನ್ ಮಾಡಿದರೆ 40 ವ್ಯಾಟ್ ಅವರ್ಸ್‌ನಷ್ಟು ವಿದ್ಯುತ್ ನಷ್ಟವಾಗುವುದನ್ನು ತಡೆಯಬಹುದು.
- ಓವನ್ ಅನ್ನು ಬಳಸುವಾಗ ಮಾತ್ರ ಆನ್ ಮಾಡಿ. ಆಹಾರ ಬೆಂದಿದೆಯೇ ಎಂದು ನೋಡಲು ಪದೇ ಪದೇ ಬಾಗಿಲು ತೆರೆಯಬೇಡಿ.
- ಗಾಜು ಮಣ್ಣಿನಲ್ಲಿ ಕರಗಲು ಸಾವಿರಾರು ವರ್ಷಗಳು ಬೇಕು. ಹೀಗಾಗಿ ಗಾಜನ್ನು ರಿಸೈಕಲ್‌ಗೆ ಕಳಿಸಿ.
- ನಿಮ್ಮ ಮಗು ಶೌಚಾಲಯ ಬಳಸುವುದನ್ನು ಕಲಿಯುವ ಹೊತ್ತಿಗೆ ಏನಿಲ್ಲವೆಂದರೂ 5000ದಿಂದ 8000 ಡೈಪರ್ಸ್ ಬಳಸಿರುತ್ತೀರಿ. ಪ್ರತಿ ಮನೆಯಿಂದ ಅಷ್ಟೊಂದು ಮಟ್ಟದ ವೇಸ್ಟ್ ಭೂಮಿಯನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ ಡೈಪರ್ಸ್ ಬದಲಿಗೆ ಹತ್ತಿ ಬಟ್ಟೆ ಬಳಸಿ.
- ಮಾಂಸಾಹಾರವನ್ನು ಕಡಿಮೆಗೊಳಿಸಿ. ಸಾಧ್ಯವಾದರೆ ತ್ಯಜಿಸಿ. ಪ್ರಾಣಿಪಕ್ಷಿಗಳಿಲ್ಲದೆ ಪರಿಸರ ಸಮತೋಲನ ಕಳೆದುಕೊಳ್ಳುತ್ತದೆ.
- ಆಫೀಸ್‌ನಲ್ಲಿ ಪ್ರಿಂಟರ್ ಮೋಡ್ ಅನ್ನು ಹಾಳೆಯ ಎರಡೂ ಭಾಗವೂ ಬಳಕೆಗೆ ಬರುವಂತೆ ಸೆಟ್ ಮಾಡಿ. ಮತ್ತು ಬಳಸಿದ ಪೇಪರ್ ಅನ್ನು ರಿಸೈಕಲ್ ಬಿನ್‌ಗೆ ಹಾಕಲು ಮರೆಯದಿರಿ.
- ವಾಷಿಂಗ್ ಮಶೀನ್‌ಲಿ ಸಾಧ್ಯವಾದಷ್ಟು ಕೋಲ್ಡ್ ಮೋಡನ್ನೇ ಬಳಸಿ. ಇದರಿಂದ ಅದೆಷ್ಟೋ ಶಕ್ತಿಯ ಉಳಿತಾಯವಾಗುತ್ತದೆ.
- ಕೇವಲ ಭಾನುವಾರವೊಂದರ ಪೇಪರ್‌ಗಳನ್ನು ರಿಸೈಕಲ್ ಮಾಡುವುದರಿಂದ 5 ಲಕ್ಷದಷ್ಟು ಮರಗಳ ಕುತ್ತಿಗೆಗೆ ಕೊಡಲಿ ಏಟು ಬೀಳುವುದನ್ನು ತಡೆಯಬಹುದು. ಅಂದ ಮೇಲೆ ದಿನಪತ್ರಿಕೆಗಳನ್ನು ರಿಸೈಕಲ್‌ಗೆ ಹಾಕುವುದು ನಮ್ಮ ಜವಾಬ್ದಾರಿ ತಾನೇ?
- ಪಾತ್ರೆ ತಿಕ್ಕುವಾಗ, ಬ್ರಶ್ ಮಾಡುವಾಗ ನಲ್ಲಿ ಆನ್ ಮಾಡಿಡುವ ದುರಭ್ಯಾಸ ಬಿಡಿ. ಜೊತೆಗೆ ಮನೆಯ ನಲ್ಲಿಗಳಲ್ಲಿ ಹನಿ ಹನಿ ನೀರು ಸೋರುತ್ತಿದ್ದರೆ ತಕ್ಷಣ ಸರಿಪಡಿಸಿ.
- ಶೇ.90 ನೀರಿನ ಪ್ಲಾಸ್ಟಿಕ್‌ಗಳು ರಿಸೈಕಲ್ ಆಗದೇ ಭೂಮಿಯೊಡಲು ಸೇರುತ್ತಿವೆ. ಇವು ಮಣ್ಣಿನಲ್ಲಿ ಕರಗುವುದಿಲ್ಲ. ಹಾಗಾಗಿ ಹೊರಗೆ ಹೋಗುವಾಗ ನಿಮ್ಮದೇ ನೀರಿನ ಬಾಟಲ್‌ನಲ್ಲಿ ನೀರು ತೆಗೆದುಕೊಂಡು ಹೋಗಿ.
- ತಲೆಸ್ನಾನದ ಸಮಯವನ್ನು ಯಾವಾಗಲೂ ತೆಗೆದುಕೊಳ್ಳುವುದಕ್ಕಿಂತ ಎರಡೇ ಎರಡು ನಿಮಿಷ ಕಡಿಮೆಗೊಳಿಸಿ. ಇದರಿಂದ ಹತ್ತು ಗ್ಯಾಲನ್‌ನಷ್ಟು ನೀರು ಉಳಿತಾಯವಾಗುತ್ತದೆ. ಪ್ರತಿ ಮನುಷ್ಯನೂ ಹೀಗೆ ಮಾಡುವುದರಿಂದ ಅದೆಷ್ಟು ನೀರು ಉಳಿತಾಯವಾಗುತ್ತದೆ ಎಂಬುದು ಕಲ್ಪನೆಗೂ ಮೀರಿದ್ದು.
- ಪ್ರತಿ ವರ್ಷ ಪ್ರತಿಯೊಬ್ಬರು ಒಂದೇ ಗಿಡ ನೆಟ್ಟರೂ ಸಾಕು, ನಿಮ್ಮ ಕೆಲಸ ಅದೆಂಥ ಅದ್ಭುತವಾದದ್ದು ಎಂಬುದು ನಿಮ್ಮ ಊಹೆಗೂ ನಿಲುಕದ್ದು.
- ರೂಂನಿಂದ ಹೊರಹೋಗುವ ಮುನ್ನ ಫ್ಯಾನ್ ಹಾಗೂ ಬಲ್ಬ್ ಆರಿಸಲು ಮರೆಯದಿರಿ. <
- much ಮುನಿಯಮ್ಮ