ಸಾಧನೆ

ರಿಬೇಟ್...ರಿಬೇಟ್...

ಹಿರಿಯರು ಗೌರವದಿಂದ ಜೀವನ ನಡೆಸುವುದು ಸಾಧ್ಯವಾಗುವಂತೆ ನೋಡಿಕೊಳ್ಳಲು ಕುಟುಂಬಗಳು, ಸಮುದಾಯಗಳು, ಸಮಾಜ ಮತ್ತು ಸರಕಾರಗಳ ನಡುವೆ ಒಂದು ಸೃಜನಾತ್ಮಕ ಜಾಗೃತಿ ಮೂಡಿಸುವುದು ಮತ್ತು ಹಿರಿಯರ ಬದುಕಿನ ಸಂಜೆಯಲ್ಲಿ ಅವರ ಜೀವನದ ಭಾಗವಾಗಿರುವಂತೆ ನೋಡಿಕೊಳ್ಳುವಲ್ಲಿ ಹಿರಿಯ ನಾಗರಿಕರ ವೇದಿಕೆ ಸಿಬಿಆರ್ ನೆಟ್‌ವರ್ಕ್ (ಸೌತ್ ಏಷಿಯಾ) ಸತತ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಹಿರಿಯ ನಾಗರಿಕರನ್ನು ಸಮಾಜದ ಸಕ್ರಿಯ ಪಾಲುದಾರರಾಗಬೇಕು. ಅದ ಕ್ಕಾಗಿ ವೇದಿಕೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ವೇದಿಕೆಯು ಭಾರತ ಸರ್ಕಾರದ ಅನೇಕ ಯೋಜನೆಗಳು, ಸವಲತ್ತುಗಳು, ಅದು ಅನುಷ್ಠಾನಗೊಳಿಸುವ ಇಲಾಖೆ, ಅದರ ಪ್ರಯೋಜನಗಳು ಹಾಗೂ ರಿಯಾಯಿತಿಗಳು, ಪಡೆಯಲು ಇರಬೇಕಾದ ಅರ್ಹತೆ, ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಹಿರಿಯ ನಾಗರಿಕರಿಗೆ ತಿಳಿಯಪಡಿಸುತ್ತಿದೆ.
ಅವುಗಳಲ್ಲಿ ಕೆಲವು:ಆದಾಯ ತೆರಿಗೆ ಯೋಜನೆ
ವಿತ್ತ ಸಚಿವಾಲಯದಿಂದ ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ತೆರಿಗೆ ವಿನಾಯಿತಿ ಮಿತಿ 2.50 ಲಕ್ಷ ರು.ಗಳಿಗೆ ಏರಿಕೆಯಾಗುತ್ತದೆ. ವಿಶೇಷ ಹಿರಿಯ ನಾಗರಿಕರಿಗೆ ಅಂದರೆ 80 ವರ್ಷ ಮೇಲ್ಪಟ್ಟವರಿಗೆ ಈ ಮಿತಿ ಇನ್ನೂ 2,50,000 ರು.ಗಳಿಗೆ ಅಂದರೆ 5 ಲಕ್ಷ ರು.ಗಳಿಗೆ ಏರಿಕೆಯಾಗುತ್ತದೆ. ಅರ್ಹರು ಪ್ರದೇಶ ಆದಾಯ ತೆರಿಗೆ ಅಧಿಕಾರಿ/ನಿಮ್ಮ ಲೆಕ್ಕಪತ್ರ ಪರಿಶೋಧಕರನ್ನು ಸಂಪರ್ಕಿಸಬಹುದು.
ಪ್ರಯಾಣ ರಿಯಾಯಿತಿ
ರೈಲು ಹಾಗೂ ವಿಮಾನಗಳಲ್ಲಿ ರಿಯಾಯಿತಿ ಸೌಲಭ್ಯ ಯೋಜನೆ. ಇದನ್ನು ಭಾರತ ಸರ್ಕಾರ ಅನುಷ್ಠಾನಗೊಳಿಸುತ್ತದೆ. ಕನಿಷ್ಠ 60 ವರ್ಷ ಹಾಗೂ ಮೇಲ್ಪಟ್ಟ ಪುರುಷ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಶೇ. 40ರಷ್ಟು ರಿಯಾಯಿತಿ, 58 ವರ್ಷ ಹಾಗೂ ಮೇಲ್ಪಟ್ಟ ಮಹಿಳಾ ಹಿರಿಯ ನಾಗರಿಕರಿಗೆ ಎಲ್ಲ ಟ್ರೈನುಗಳಲ್ಲಿ, ಎಲ್ಲ ವರ್ಗಗಳಲ್ಲಿ ಶೇ. 50ರಷ್ಟು ರಿಯಾಯಿತಿಯಿದೆ. ಇದನ್ನು ರೈಲ್ವೆ ಟಿಕೆಟ್ ಕಾದಿರಿಸುವ ಸ್ಥಳಗಳಲ್ಲಿ ವಿಚಾರಿಸಬಹುದು. ವಿಮಾನ ಪ್ರಯಾಣದಲ್ಲೂ ಕೆಲ ಸೌಲಭ್ಯಗಳಿವೆ ಇವುಗಳನ್ನು ಏರ್ ಇಂಡಿಯಾ, ಜೆಟ್ ಏರ್‌ವೇಸ್ ಮತ್ತು ಇತರ ವಿಮಾನ ಸಂಸ್ಥೆಗಳ ಕಾರ್ಯಾಲಯಗಳಲ್ಲಿ ವಿಚಾರಿಸಬೇಕು.
ಸಮಗ್ರ ಯೊಜನೆ
ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರದ ಸಮಗ್ರ ಯೋಜನೆಯಿದೆ. ಇದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜಾರಿಗೊಳಿಸುತ್ತದೆ. ವಿವರಗಳಿಗಾಗಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಜಿಲ್ಲಾ ಕಲ್ಯಾಣ ಅಧಿಕಾರಿಯವರನ್ನು ಸಂಪರ್ಕಿಸಬಹುದು.
ಉಳಿತಾಯ ಯೋಜನೆಗಳು
ವರಿಷ್ಠರ ಉಳಿತಾಯ. ಇದನ್ನು ಅಂಚೆ ಇಲಾಖೆ ಅನುಷ್ಠಾನಗೊಳಿಸುತ್ತದೆ. 60 ವರ್ಷ ಹಾಗೂ ಮೇಲ್ಪಟ್ಟವರು ಇದರ ಫಲಾನುಭವಿಗಳು. ಈ ಸೌಲಭ್ಯ ಪಡೆಯಲು ಪ್ರದೇಶ ಅಂಚೆ ಕಾರ್ಯಾಲಯಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳನ್ನು ಸಂಪರ್ಕಿಸಬಹುದು.
ವಿಮೆ ವರಿಷ್ಠರ ಮೆಡಿಕ್ಲೇಮ್
ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಮಿತಿಗಳು ಭಿನ್ನವಾಗಿದ್ದು ಇತರ ಷರತ್ತುಗಳು ಅನ್ವಯಿಸುತ್ತವೆ. ಆದ್ದರಿಂದ ವಿಮೆ ಕಂಪನಿಗಳ ಏಜೆಂಟರು ಅಥವಾ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ