ಸಾಧನೆ

ಜೀವನ ಗಣಿತ ಲೆಕ್ಕಾಚಾರ ನಿವೃತ್ತ ಬ್ಯಾಂಕ್ ಅಧಿಕಾರಿಯ ಸಮಾಜ ಸೇವೆ

ಬ್ಯಾಂಕ್ ಉದ್ಯೋಗವೆಂದರೆ ಇಡೀ ದಿನ ಕೂಡಿ-ಕಳೆಯುವ, ಗುಣಿಸಿ-ಭಾಗಿಸುವ ಸಂಖ್ಯೆಗಳ ಲೆಕ್ಕಾಚಾರ ಎಂದೇ ಅರ್ಥ. ಬ್ಯಾಂಕ್ ಉದ್ಯೋಗಿಗಳು ದಿನದ ಎಂಟು ತಾಸೂ ಇದೇ ಲೆಕ್ಕಾಚಾರದಲ್ಲಿ ಕಳೆಯುತ್ತಾರೆ. ಒಬ್ಬ ಬ್ಯಾಂಕ್ ಉದ್ಯೋಗಿ ಜೀವನದ 35-40 ವರ್ಷ ಇದೇ ಲೆಕ್ಕಾಚಾರ ಮಾಡುತ್ತಿರುತ್ತಾನೆ. ಈ ಲೆಕ್ಕಾಚಾರ ಇಷ್ಟಕ್ಕೇ ನಿಲ್ಲುವುದಿಲ್ಲ. ನಿವೃತ್ತಿ ಜೀವನದಲ್ಲೂ ಮತ್ತೆ ಅದೇ ಗ್ರ್ಯಾಚ್ಯುಟಿ, ಪಿಎಫ್, ಡಿವಿಡೆಂಡ್, ಬಡ್ಡಿ... ಲೆಕ್ಕಾಚಾರ. ಸಮಾಜಸೇವೆ, ಅದರಲ್ಲೂ ಮಕ್ಕಳಿಗೆ, ಶಿಕ್ಷಕರಿಗೆ ಪಾಠ ಹೇಳುವುದೆಲ್ಲ ದೂರದ ಮಾತು ಬಿಡಿ.
ಆದರೆ ಇದಕ್ಕೆಲ್ಲ ಹೊರತಾದ ಅಪರೂಪದ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ. ಅವರೇ ಎ.ಎನ್. ಮಧುಸೂದನ ರಾವ್. ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದ ಇವರದು ಕೃಷಿ ಕುಟುಂಬ. ಇವರ ಹೆತ್ತವರು ಕಾರಣಾಂತರಗಳಿಂದ ಹಳ್ಳಿ ಬಿಟ್ಟು ಮೈಸೂರು ಸೇರಿದರು. ಮಧುಸೂದನರಾವ್ ಅವರಿಗೆ ಮೊದಲಿನಿಂದಲೂ ಶಿಕ್ಷಕರಾಗಬೇಕೆಂಬ ಬಯಕೆಯಿತ್ತು. ಆಗ ಅವರ ಆಸೆ ಕೈಗೂಡಿರಲಿಲ್ಲ. ಬ್ಯಾಂಕ್ ಉದ್ಯೋಗಕ್ಕೆ ಸೇರಿಕೊಂಡರು. ಮೈಸೂರಿನಲ್ಲಿದ್ದಾಗ ಸುಮಾರು ಆರು ವರ್ಷ ನೂರಾರು ಮಕ್ಕಳಿಗೆ ಮನೆಪಾಠ ಹೇಳಿದ್ದರು. ಬೆಂಗಳೂರಿನ ವಿಜಯಾ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ, ಕಳೆದ ವರ್ಷ ನಿವೃತ್ತರಾಗಿದ್ದಾರೆ.
ನನಗಾಗಿ, ನನ್ನ ಕುಟುಂಬಕ್ಕಾಗಿ ಇನ್ನೂ ಹೆಚ್ಚು ಹೆಚ್ಚು ಗಳಿಸಬೇಕು, ಹೆಚ್ಚು ಹೆಚ್ಚು ಕೂಡಿಡಬೇಕು ಎಂಬ ಕನವರಿಕೆಯಲ್ಲಿರುವವರೇ ಹೆಚ್ಚು ಜನರಿರುವಾಗ, 'ನಲವತ್ತು ವರ್ಷ ನನಗಾಗಿ, ನನ್ನ ಕುಟುಂಬಕ್ಕಾಗಿ ದುಡಿದೆ. ಆದರೆ ಸಮಾಜಕ್ಕೆ ನಾನೇನು ಮಾಡಿದೆ?' ಎಂಬ ಪ್ರಶ್ನೆಗೆ ರಾವ್ ಉತ್ತರ ಕಂಡುಕೊಂಡಿದ್ದು, ಮಕ್ಕಳಿಗೆ-ಶಿಕ್ಷಕರಿಗೆ ಜೀವನಪಾಠ ಹೇಳುವ ಮೂಲಕ, ಜೀವನ ಮೌಲ್ಯಗಳ ಬಗ್ಗೆ ತಿಳಿಹೇಳುವ ಮೂಲಕ.
ಈ ಪಾಠ ಹೇಳುವ ಯೋಚನೆ ಬಂದಾಗ ಇವರೇ ಒಂದು ಯೋಜನೆಯನ್ನು ಸಿದ್ಧಪಡಿಸಿಕೊಂಡರು. ಯಾರ ಸಹಾಯವನ್ನೂ ನಿರೀಕ್ಷಿಸದೆ, ಪ್ರೌಢಶಾಲೆ, ಕಾಲೇಜುಗಳಿಗೆ (ಸರ್ಕಾರಿ ಹಾಗೂ ಖಾಸಗಿ) ವಿಶೇಷವಾಗಿ ಹಳ್ಳಿಯ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಪಾಠದ ಜೊತೆಗೆ ಜೀವನ ಮೌಲ್ಯಗಳ ಬಗ್ಗೆ ಪಾಠವನ್ನು ಹೇಗೆ ಹೇಳಬೇಕೆಂಬುದರ ಬಗ್ಗೆ ಶಿಕ್ಷಕರಿಗೆ ಒಂದು ಗಂಟೆಗಳ ಕಾಲ ಪಾಠ ಮಾಡುತ್ತಾ ಬಂದರು.
ಇನ್ನು ಮಕ್ಕಳಿಗೆ ಅದರಲ್ಲೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೂವರೆ ಗಂಟೆ ಕಾಲ ಜೀವನ ಮೌಲ್ಯಗಳ ಬಗ್ಗೆ, ಪರೀಕ್ಷೆಗಳನ್ನು ಎದುರಿಸುವುದರ ಬಗ್ಗೆ, ಪೂರ್ವ ತಯಾರಿ ಹೇಗಿರಬೇಕೆಂಬುದರ ಬಗ್ಗೆ, ಭವಿಷ್ಯದ ಜೀವನವನ್ನು ಹೇಗೆ ನಿರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ, ಉನ್ನತ ಶಿಕ್ಷಣಕ್ಕೆ, ಭವಿಷ್ಯದ ಉದ್ಯಮಗಳಿಗೆ ಬ್ಯಾಂಕ್‌ಗಳಿಂದ ಸಿಗುವ ಸಾಲ, ಸೌಲಭ್ಯಗಳ ಬಗ್ಗೆ ಪಾಠ ಹೇಳಲು ಪ್ರಾರಂಭಿಸಿದರು.
ತಮ್ಮ ಸ್ವಂತ ಜಿಲ್ಲೆ ಶಿವಮೊಗ್ಗದಿಂದಲೇ ಪ್ರಾರಂಭಿಸಿದ ಈ ಅಭಿಯಾನ ಈಗಾಗಲೇ 4900ಕ್ಕೂ ಹೆಚ್ಚು ಮಕ್ಕಳಿಗೆ, 540ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿ ಇನ್ನೂ ಮುಂದುವರಿಯುತ್ತಲೇ ಇದೆ. ಇದುವರೆಗೆ 45 ಶಾಲೆಗಳಿಗೆ ಭೇಟಿ ನೀಡಿದ್ದಾರೆ. ರಾಜ್ಯದ ಶಿಕ್ಷಣ ಇಲಾಖೆ ಇವರ ಸೇವೆಯನ್ನು ಪ್ರೋತ್ಸಾಹಿಸಿದೆ. ಶಿವಮೊಗ್ಗ ಜಿಲ್ಲೆಯ ಡಿಡಿಪಿಐ ತಮ್ಮ ಎಲ್ಲ ಏಳೂ ಕ್ಷೇತ್ರದ ಅಧಿಕಾರಿಗಳಿಗೆ ಇವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು ಆದೇಶ ನೀಡಿದ್ದಾರೆ.
ದತ್ತು
ಇವರು ಗ್ರಾಮಾಂತರ ಪ್ರದೇಶದ ಹದಿನೈದಕ್ಕೂ ಹೆಚ್ಚು ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣದ ಸಂಪೂರ್ಣ ಹೊಣೆ ಹೊತ್ತಿದ್ದಾರೆ. ಜೀವನದ ನಲವತ್ತು ವರ್ಷಗಳನ್ನು ಬ್ಯಾಂಕ್ ಉದ್ಯೋಗದಲ್ಲಿ ಕಳೆದು, ನಿವೃತ್ತಿಯ ನಂತರ ಮಕ್ಕಳಿಗೆ, ಶಿಕ್ಷಕರಿಗೆ ಜೀವನಮೌಲ್ಯಗಳ ಬಗ್ಗೆ ಪಾಠ ಮಾಡುತ್ತಿರುವ ಇವರು ನಮಗೆಲ್ಲ ಮಾದರಿ. ಇಂತಹ ಅಪರೂಪದ ವ್ಯಕಿ ್ತ(ಮೊ: 9742889024) ನಮ್ಮ ನಡುವಿದ್ದಾರೆ ಎಂಬುದೇ ನಮಗೆಲ್ಲ ಹೆಮ್ಮೆಯ ವಿಷಯ.

-ಶಶಿರೇಖಾ ಹೆಗಡೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ