ಸಾಧನೆ

ಪ್ರಥಮಂ ವಂದೇ

ತೊಂದರೆ, ಕಾಯಿಲೆ ಯಾವುದೇ ಇರಲಿ, ಅದು ಎಷ್ಟೇ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಮೊದಲು ರೋಗಿಗೆ ಬೇಕಾಗಿರುವುದು ಪ್ರಥಮ ಚಿಕಿತ್ಸೆ.

ಗಾಯ: ಶರೀರದ ಯಾವುದೇ ಭಾಗದಲ್ಲಿ ರಕ್ತ ಸೋರುವ ಗಾಯಗಳಾಗಿದ್ದರೆ ಮೊದಲು ಶುಭ್ರವಾದ ಬಟ್ಟೆ/ಹತ್ತಿಯನ್ನು ಗಾಯದ ಮೇಲೆ ಹಾಕಿ, ಸುಮಾರು 20 ನಿಮಿಷ ಒತ್ತಿ ಹಿಡಿಯಬೇಕು. ಐಸ್ ಚೂರನ್ನೂ ಇಡಬಹುದು. ನಂತರ ವೈದ್ಯರಲ್ಲಿಗೆ ಕರೆದೊಯ್ಯಲೇಬೇಕು.

ಮೂರ್ಛೆ: ವ್ಯಕ್ತಿಯನ್ನು ಅಂಗಾತ ಮಲಗಿಸಿ. ಗಾಳಿಯಾಡುವಂತೆ ನೋಡಿಕೊಳ್ಳಿ. ಈರುಳ್ಳಿಯನ್ನು ಅರ್ಧ ಭಾಗ ಮಾಡಿ ಮೂಗಿನ ಬಳಿ ಹಿಡಿಯಿರಿ. ಮುಖದ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿ. ಆದರೆ ಒದ್ದೆ ಮಾಡಬೇಡಿ.

ಎದೆನೋವು : ಇದು ಹೃದಯಾಘಾತವಲ್ಲದೆಯೂ ಇರಬಹುದು. ವ್ಯಕ್ತಿಯನ್ನು ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಮಲಗಿಸಿ. ಕೆಲವು ಸಾಂತ್ವನದ ಮಾತುಗಳನ್ನಾಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಮೂಗಿನಲ್ಲಿ ರಕ್ತ: ಮೂಗಿನ ಒಂದು ಹೊರಳೆಯನ್ನು ಮುಚ್ಚಿ ಮತ್ತೊಂದ ರಿಂದ ಉಸಿರು ತೆಗೆದುಕೊಳ್ಳಿ. ರಕ್ತ ಸೋರುವುದು ನಿಲ್ಲುತ್ತದೆ. ಆದರೆ ಕಿವಿಯಲ್ಲಿ ರಕ್ತ ಸೋರುತ್ತಿದ್ದರೆ ಪ್ರಥಮ ಚಿಕಿತ್ಸೆ ಮಾಡಬೇಡಿ. ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ.

ಬಿಸಿಲಿನಿಂದ ಮೂರ್ಛೆ: ತಂಪಾದ ನೆರಳಿರುವ ಜಾಗದಲ್ಲಿ ಮಲಗಿಸಿ, ಹಣೆಯ ಮೇಲೆ ಒದ್ದೆಬಟ್ಟೆ ಹಾಕಿ. ಆದಷ್ಟು ಶೀಘ್ರ ಆಸ್ಪತ್ರೆಗೆ ಕರೆದೊಯ್ಯಿರಿ.

ಜ್ವರ: ಪನ್ನೀರು ಇಲ್ಲವೇ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಹೊಟ್ಟೆ ಹಾಗೂ ಹಣೆಯ ಮೇಲೆ ಹಾಕಿ. ನಂತರ ವೈದ್ಯರನ್ನು ಸಂಪರ್ಕಿಸಿ.

ಕಣ್ಣಲ್ಲಿ ಕಸ: ಕಣ್ಣನ್ನು ಮುಚ್ಚಿ ಮೃದುವಾದ ಬಟ್ಟೆಯಿಂದ ಕಸ ದೂರಮಾಡಿ ಅಥವಾ ತಣ್ಣೀರಿನಲ್ಲಿ ಕಣ್ಣು ಪಿಳುಕಿಸಿ.

ಶಾಕ್: ತಕ್ಷಣ ಒಣ ಮರದ ತುಂಡಿನಿಂದ ಅಥವಾ ರಬ್ಬರ್‌ನಿಂದ ಮೇನ್‌ಸ್ವಿಚ್ ಆಫ್ ಮಾಡಿ. ವ್ಯಕ್ತಿಯನ್ನು ದೂರ ಕರೆತನ್ನಿ. ಸುಟ್ಟಗಾಯಗಳಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಸುಟ್ಟರೆ: ಸಣ್ಣಪುಟ್ಟ ಸುಟ್ಟುಗಾಯಗಳಾದರೆ ನಲ್ಲಿ ಕೆಳಗೆ ಸುಟ್ಟ ಭಾಗವನ್ನು ಹಿಡಿಯಿರಿ. ದೊಡ್ಡ ಗಾಯವಾದರೆ ತಕ್ಷಣ ಆಸ್ಪತ್ರೆಗೆ ಸಾಗಿಸಿ. ಯಾವುದೇ ಕಾರಣಕ್ಕೂ ಬಟ್ಟೆ ಕಟ್ಟಬೇಡಿ.

ಫಿಟ್ಸ್: ಚಿಕ್ಕ ಬಟ್ಟೆಯನ್ನು ಸುತ್ತಿದ ಚಮಚವನ್ನು ವ್ಯಕ್ತಿಯ ಬಾಯಲ್ಲಿಡಿ. ನಾಲಿಗೆ ಕಚ್ಚಿಕೊಳ್ಳದಂತೆ ನೋಡಿಕೊಳ್ಳಿ. ಒಂದು ಬಾರಿ ಕೆನ್ನೆಗೆ ಹೊಡೆದು ಸಹ ಮಾಮೂಲಿ ಸ್ಥಿತಿಗೆ ತರಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ