ಸಾಧನೆ

ಎಸ್ಸಿಎಸ್ಸೆಸ್ ಸರ್!

ನಿವೃತ್ತಿ ಸಂದರ್ಭದಲ್ಲಿ ಬಂದ ಇಡಿಗಂಟಿದೆ. ಅದೇ ಜೀವನಕ್ಕೆ ಆಧಾರ. ಈ ಹಣವನ್ನು ಸುರಕ್ಷಿತವಾಗಿ ಇಡುವುದು ಎಲ್ಲಿ? ಬ್ಯಾಂಕ್ಗಳು ಸಾಮಾನ್ಯ ಗ್ರಾಹಕರಿಗೆ ನೀಡುವುದಕ್ಕಿಂತ ಶೇ 0.5ರಷ್ಟು ಹೆಚ್ಚು ಬಡ್ಡಿಯನ್ನು ಕೊಡುತ್ತವೆ ಖರೆ. ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ ಬಡ್ಡಿದರ ನಿರಂತರವಾಗಿ ಏರಿಳಿತವಾಗುತ್ತಿದೆ. ಹೀಗಾಗಿ ಠೇವಣಿ ನವೀಕರಿಸಿದಾಗಲೆಲ್ಲ ನಿಗದಿತ ಮೊತ್ತದ ಗಳಿಕೆ ನಿರೀಕ್ಷಿಸುವುದು ಅಸಾಧ್ಯ. ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್) ಖಾತೆಯಲ್ಲಿ ಹಣ ಹೂಡಿದರೆ ಈ ಚಿಂತೆ ಇಲ್ಲ.
ಇದು ಪಿಂಚಣಿದಾರರನ್ನೇ ಗಮನದಲ್ಲಿಟ್ಟುಕೊಂಡು ರೂಪಿಸಿದ ಯೋಜನೆ. 60 ವರ್ಷ ಮೇಲ್ಪಟ್ಟ ಯಾರಾದರೂ ಖಾತೆ ತೆರೆಯಬಹುದು. 55ರಿಂದ 60 ವರ್ಷದೊಳಗಿರುವ, ಸ್ವಯಂ ನಿವೃತ್ತಿ ಅಥವಾ ವಿಶೇಷ ಸ್ವಯಂ ನಿವೃತ್ತಿ ಹೊಂದಿರುವವರು ಕೂಡ ಖಾತೆ ತೆರೆಯಬಹುದು. ನಿವೃತ್ತ ಯೋಧರಿಗೆ ವಯೋವುತಿ ಇಲ್ಲ. ಹೂಡಿಕೆ ಕನಿಷ್ಠ ಮಿತಿ ರು. 1000 ಮತ್ತು ಗರಿಷ್ಠ ಮಿತಿ ರು. 15 ಲಕ್ಷ. ಅವಧಿ ಐದು ವರ್ಷ. ಮೂರು ವರ್ಷದ ಬಳಿಕ ಅವಧಿಗೆ ಮುನ್ನವೇ ಠೇವಣಿ ವಾಪಸ್ ಪಡೆಯಬಹುದು. ಎರಡು ವರ್ಷಕ್ಕಿಂತ ಮೊದಲು ಠೇವಣಿ ಹಿಂಪಡೆದರೆ ಠೇವಣಿ ಮೊತ್ತದ ಮೇಲೆ ಶೇ 1.5 ಮತ್ತು ಎರಡು ವರ್ಷದ ನಂತರವಾದರೆ ಶೇ 1ರಷ್ಟು ದಂಡ ವಿಧಿಸಲಾಗುತ್ತದೆ. ಬಡ್ಡಿದರ ವಾರ್ಷಿಕ ಶೇ 9.20.
ಬಡ್ಡಿಯನ್ನು ತ್ರೈಮಾಸಿಕವಾಗಿ ಲೆಕ್ಕಹಾಕಿ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ. ಇದಕ್ಕಾಗಿ ಅದೇ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬೇಕಾದದ್ದು ಅಗತ್ಯ. ಬಡ್ಡಿಯಿಂದ ಬರುವ ಅಷ್ಟೂ ಹಣ ನಿಮಗೆ ಅಗತ್ಯವಿಲ್ಲ ಎಂದಾದರೆ ಆರ್.ಡಿ ಖಾತೆ ತೆರೆಯಬಹುದು. ಹೀಗೆ ಮಾಡಿದರೆ ಠೇವಣಿ ಮತ್ತು ಆರ್.ಡಿ ಸೇರಿ ಅಂದಾಜು ವಾರ್ಷಿಕ ಶೇ 10.5ರಷ್ಟು ಬಡ್ಡಿ ಪಡೆಯಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ