ದಿ ಎಕನಾಮಿಕ್ ಇಂಟೆಲಿಜೆನ್ಸ್ ಯುನಿಟ್ (ಇಐಯು), 'ಪ್ರಿವೆಂಟೀವ್ ಕೇರ್ ಆಂಡ್ ಹೆಲ್ತಿ ಏಜಿಂಗ್ ಗ್ಲೋಬಲ್ ಪರ್ಸ್ಪೆಕ್ಟಿವ್' ಎಂಬ ವರದಿಯನ್ನು ಅಂತಾರಾಷ್ಟ್ರೀಯ ಹಿರಿಯರ ದಿನದ ಅಂಗವಾಗಿ ಬಿಡುಗಡೆಗೊಳಿಸಿದೆ. ಈ ವರದಿ 8 ದೇಶಗಳಲ್ಲಿನ ವಯೋವೃದ್ಧರ ಆರೋಗ್ಯ ಆರೈಕೆಯತ್ತ ದೃಷ್ಟಿ ಹಾಯಿಸಿದೆ. ಭಾರತ, ಬ್ರೆಜಿಲ್, ಚೀನಾ, ಜಪಾನ್, ರಷ್ಯಾ, ದಕ್ಷಿಣ ಆಫ್ರಿಕ, ಇಂಗ್ಲೆಂಡ್ ಮತ್ತು ಅಮೆರಿಕಗಳನ್ನು ಒಳಗೊಂಡಿದೆ.
ಭಾರತದಲ್ಲಿನ ಹಿರಿಯರ ಆರೋಗ್ಯ ಆರೈಕೆ ಕುರಿತು ವರದಿ ಬೆಳಕು ಚೆಲ್ಲುತ್ತದೆ. 2050ರ ವೇಳೆಗೆ ಭಾರತದಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ 323 ದಶಲಕ್ಷ ಜನರಿರುತ್ತಾರೆ ಎಂದು ಅಂದಾಜಿಸಿದೆ. ಭಾರತದಲ್ಲಿ ಆರೋಗ್ಯ ಮೂಲಸೌಕರ್ಯ, ಹಿರಿಯರ ಆರೈಕೆಗೆ ತಕ್ಕಷ್ಟು ಸೌಲಭ್ಯಗಳು ಇಲ್ಲ ಎಂದು ವರದಿ ಹೇಳುತ್ತದೆ.
ಮುಂದಿನ 40 ವರ್ಷಗಳಲ್ಲಿ ಭಾರತ ಅತಿ ಹೆಚ್ಚು ಹಿರಿಯರನ್ನು ಹೊಂದಿರುವ ವಿಶ್ವದ ದ್ವಿತೀಯ ರಾಷ್ಟ್ರವಾಗಲಿದೆ. ಹಿರಿಯರ ಸಂಖ್ಯೆ ಈಗಿನ ಪ್ರಮಾಣಕ್ಕಿಂತ 3-4 ಪಟ್ಟು ಹೆಚ್ಚಾಗಲಿದೆ. ಆದಾಗ್ಯೂ, ಮಕ್ಕಳು ಮತ್ತು ನವಜಾತ ಶಿಶುಗಳ ಆರೈಕೆಗೆ ಹಾಗೂ ಹಿರಿಯರ ಆರೈಕೆಗೆ ಸೂಕ್ತ ಆರೋಗ್ಯ ಮೂಲಸೌಕರ್ಯ ಹೊಂದಿಲ್ಲ ಎಂದು ವರದಿ ಹೇಳುತ್ತದೆ.
ಅಮೆರಿಕ, 1999ನ್ನು ಅಂತಾರಾಷ್ಟ್ರೀಯ ಹಿರಿಯರ ದಿನ ಎಂದು ಘೋಷಿಸಿತ್ತು ಮತ್ತು ಅಕ್ಟೋಬರ್ 1ನ್ನು ಅಂತಾರಾಷ್ಟ್ರೀಯ ಹಿರಿಯರ ದಿನವನ್ನಾಗಿ ಆಚರಿಸುತ್ತಿದೆ. ಹಿರಿಯರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರ ಆರೋಗ್ಯ ಸಮಸ್ಯೆಗಳತ್ತ ದೃಷ್ಟಿ ಹಾಯಿಸುವ ಉದ್ದೇಶಕ್ಕಾಗಿ ಈ ದಿನ ಮೀಸಲು. ಭಾರತದಲ್ಲಿ ತಜ್ಞರು, ಕೆಲ ಎನ್ಜಿಒಗಳು ಹಿರಿಯರ ಬಗ್ಗೆ ನಾನಾ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಹಿರಿಯರ ಸಮಾಜದ ಕಾರ್ಯದರ್ಶಿ ಡಾ. ಒ.ಪಿ. ಶರ್ಮಾ, ನ್ಯುಮೋನಿಕ್ ಕಾಯಿಲೆಗಳು ವಿಶ್ವದಾದ್ಯಂತ ವಯಸ್ಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಜಗತ್ತಿನಲ್ಲಿ ನ್ಯುಮೋನಿಯಾ ಸಾವಿಗೆ ಕಾರಣವಾಗುತ್ತಿದೆ. ಆಂಟಿಬಯೋಟಿಕ್ ಮತ್ತು ನಿಗಾ ಘಟಕಗಳ ನಡುವೆಯೂ ಇದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇದು ವಯಸ್ಕರಲ್ಲಿ ಹೆಚ್ಚಿನ ಗಂಭೀರ ಸಮಸ್ಯೆಯಾಗಿದೆ. ಧೂಮಪಾನ, ಮಾಲಿನ್ಯ ಮತ್ತು ಮದ್ಯಪಾನ ಈ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದಿದ್ದಾರೆ.
ಈ ಕಾಯಿಲೆಗಳು ಸ್ಟ್ರೆಪೊಕ್ಕಸ್ಸ ನ್ಯುಮೋನಿಯಾದಿಂದ ಹರಡುವ ಸರಣಿ ಕಾಯಿಲೆ. ಕಿವಿಯ ನಡು ಪೊರೆಯ ಊರಿಯೂತ, ನ್ಯುಮೋನಿಯಾ ಬ್ಯಾಕ್ಟೀರಿಯಾ ಮತ್ತು ಮೆಂಜೈಟಿಸ್ಗಳಿಗೆ ಕಾರಣವಾಗುತ್ತದೆ. ನ್ಯುಮೋನಿಯಾ ಕಾಯಿಲೆ 50 ವರ್ಷ ಮೇಲ್ಪಟ್ಟವರಲ್ಲಿ 2.9ಪಟ್ಟು ಹೆಚ್ಚಿದೆ.
ಯಾರು ಸಂಕಷ್ಟದಲ್ಲಿದ್ದಾರೆ?
ಇದು ಪ್ರಮುಖ ಪ್ರಶ್ನೆ. ಮಕ್ಕಳು ಮತ್ತು ಹಿರಿಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಯುವ ಜನರು ಕೂಡ ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಮಧುಮೇಹ, ಕ್ಯಾನ್ಸರ್ಗಳಿಂದ ಬಳಲುತ್ತಿದ್ದಾರೆ. ಐವತ್ತು ವರ್ಷಗಳ ನಂತರವೂ ಆರೋಗ್ಯಯುತವಾಗಿರಲು ವ್ಯಾಕ್ಸಿನ್ ಮಹತ್ವದ ಪಾತ್ರ ವಹಿಸುತ್ತದೆ. ಮುಂಚಿತವಾಗಿ ಒಂದು ಹನಿ ತೆಗೆದುಕೊಳ್ಳುವುದು ಜೀವನ ಪರ್ಯಂತ ಆರೋಗ್ಯಯುತವಾಗಿರಲು ಸಹಕಾರಿ.
ನ್ಯುಮೋನಿಯಲ್ ಕಾಯಿಲೆ
ಇದು ರೋಗಗಳ ಸಮೂಹವಾಗಿದ್ದು ಸ್ಟ್ರೆಪ್ಟೊಕೊಕಸ್ ನ್ಯುಮೋನಿಯಾ ಬ್ಯಾಕ್ಟೀರಿಯಾದಿಂದ ಹಬ್ಬುತ್ತದೆ. ವಯಸ್ಕರಲ್ಲಿ ನ್ಯುಮೊಕೊಕ್ಕಲ್ನ ಸಾಮಾನ್ಯ ರೂಪವೆಂದರೆ ಕಿವಿಯ ನಡು ಪೊರೆಯ ಊರಿಯೂತ. ನ್ಯುಮೋನಿಯಾ ಬ್ಯಾಕ್ಟೀರಿಯಾ ಮತ್ತು ಮೆಂಜೈಟಿಸ್ಗಳು ಇತರೆ ರೂಪ. ಎಲ್ಲ ವಯೋವಾನದವರು ಈ ಕಾಯಿಲೆಯಿಂದ ಬಳಲುತ್ತಾರಾದರೂ ವೃದ್ಧರು ಈ ಸಮಸ್ಯೆಯಿಂದ ಬಳಲುವುದು ಹೆಚ್ಚು. ವಿಶ್ವಾದ್ಯಂತ ಪ್ರತಿವರ್ಷ ಈ ಕಾಯಿಲೆಯಿಂದ 16 ಲಕ್ಷ ಮಂದಿ ಸಾಯುತ್ತಾರೆ. ಆರೋಗ್ಯ ಡಯಟ್, ವ್ಯಾಯಾಮ ಮತ್ತು ವ್ಯಾಕ್ಸಿನೇಷನ್ಗಳ ಮೂಲಕ ಇದನ್ನು ನಿಯಂತ್ರಿಸಬಹುದು.