ಸಾಧನೆ

ವಿಶೇಷಗಿರಿ

ದಿನಪತ್ರಿಕೆ ಓದುವವರು ಹಲವು ಮಂದಿ ಸಿಗುತ್ತಾರೆ. ಹಾಗೆ ಓದಿದ ಸುದ್ದಿಗಳನ್ನು...

ದಿನಪತ್ರಿಕೆ ಓದುವವರು ಹಲವು ಮಂದಿ ಸಿಗುತ್ತಾರೆ. ಹಾಗೆ ಓದಿದ ಸುದ್ದಿಗಳನ್ನು ಆಸ್ವಾದಿಸಿ ಅಲ್ಲಿಯೇ ಬಿಟ್ಟುಹೋಗುವವರು ಮತ್ತೆ ಕೆಲವರು. ಆದರೆ, ತಾವು ಓದಿದ ಇಂಥ ಅಪರೂಪದ, ಸ್ವಾರಸ್ಯಕರ, ವಿಷಯಗಳನ್ನು ಸಂಗ್ರಹಿಸುವವರು ಮಾತ್ರ ಬಹಳ ಕಡಿಮೆ. ಹೀಗೆ ಸಂಗ್ರಹಿಸಿದ ವಿಶೇಷ ವಿಷಯಗಳನ್ನು ಪ್ರದರ್ಶಿಸುವವರು ಮಾತ್ರ ಬೆರಳೆಣಿಕೆಯ ಮಂದಿ ಎಂದೇ ಹೇಳಬಹುದು.
ಇಂಥ ಬೆರಳೆಣಿಕೆಯ ಜನರಲ್ಲಿ ಮಲೆನಾಡಿನ ಮೂಲೆಯಲ್ಲಿರುವ ಜಯಪುರದ ಶಂ.ನ. ಶೇಷಗಿರಿ ಒಬ್ಬರು. ಹವ್ಯಾಸಿ ಪತ್ರಕರ್ತ, ನುಡಿಚಿತ್ರ ಕಲಾವಿದ. ಹಾಗೆಯೇ ವ್ಯಂಗ್ಯಚಿತ್ರಕಾರರೂ ಹೌದು.

ಕಡತದೊಂದಿಗ ಹಾಜರ್
ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಕಾರ್ಯಕ್ರಮ ನಡೆಯುತ್ತಿದೆ ಎಂದಾದರೆ ಅಲ್ಲಿ ಶಂ.ನ. ತಮ್ಮ ಕಡತಗಳೊಂದಿಗೆ ಹಾಜರ್. ಅಲ್ಲಿಯೇ ಸುತ್ತಮುತ್ತ ತಮ್ಮ ಸಂಗ್ರಹದ ನುಡಿಚಿತ್ರವನ್ನು ಪ್ರದರ್ಶಿಸಿ, ನೋಡುಗನಿಗೆ ವಿಶೇಷ ಮಾಹಿತಿ ಒದಗಿಸುವುದು ಮಾತ್ರವಲ್ಲದೆ ಆ ಪ್ರಸಿದ್ಧ ವ್ಯಕ್ತಿಗಳ ಹಸ್ತಾಕ್ಷರವನ್ನು ಪಡೆಯುವುದೂ ಇವರ ಹವ್ಯಾಸ. ಇವರ ಕಣಜದಲ್ಲಿ 3,500ಕ್ಕೂ ಹೆಚ್ಚು ನುಡಿಚಿತ್ರಗಳನ್ನು ಸಂಗ್ರಹವಿದೆ. ಡಾ. ಅಬ್ದುಲ್ ಕಲಾಂ, ಡಾ. ರಾಜ್‌ಕುಮಾರ್, ಅನಿಲ್ ಕುಂಬ್ಳೆ ಸೇರಿದಂತೆ ನಾಡಿನ ಹೆಸರಾಂತ 40ಕ್ಕೂ ಹೆಚ್ಚು ಮಂದಿಯ ಸಹಿ ಪಡೆದಿರುವ ನುಡಿಚಿತ್ರಗಳಿವೆ.

ಎಲ್ಲಾ ಪತ್ರಿಕೆಗಳೂ ಲಭ್ಯ
ಶೇಷಗಿರಿಯವರಲ್ಲಿ ಸ್ವಾತಂತ್ರ್ಯಾನಂತರ ಇದುವರೆಗೆ ಬಂದ ರಾಜ್ಯಮಟ್ಟದ ಕನ್ನಡದ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ ಹಾಗೂ ಸ್ಥಳೀಯ ಎಲ್ಲಾ ಪತ್ರಿಕೆಗಳೂ ಸೇರಿದಂತೆ ಒಟ್ಟು 1,500 ಪತ್ರಿಕೆಗಳು ಲಭ್ಯ. 'ಅಮರ ಜ್ಯೋತಿ' ಎಂಬ ಹಸ್ತಪ್ರತಿಯ ಪತ್ರಿಕೆಯೂ ಇದರಲ್ಲಿ ಸೇರುತ್ತದೆ. 1947ರಲ್ಲಿ ಪ್ರಕಟವಾಗಿದ್ದ 'ಮಿತ್ರ' ವಾರ್ತಾ ಪತ್ರಿಕೆ ಪ್ರಥಮ ಸಂಗ್ರಹ.
ಚಿಕ್ಕಮಗಳೂರು ಜಿಲ್ಲೆ ಜಯಪುರದ ಪ್ರೌಢಶಾಲೆಯಲ್ಲಿ ಪ್ರಯೋಗಶಾಲೆ ಸಹಾಯಕರಾಗಿ 42 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಂ.ನ. ಅವರಿಗೆ ಮಕ್ಕಳೆಂದರೆ ವಿಶೇಷ ಪ್ರೀತಿ. ಹೀಗಾಗಿ ಮಕ್ಕಳಿಗಾಗಿಯೇ ನುಡಿಚಿತ್ರ, ವ್ಯಂಗ್ಯಚಿತ್ರಗಳನ್ನು ತಯಾರಿಸಿದ್ದಾರೆ. ಇವರ ನುಡಿಚಿತ್ರಕ್ಕೆ ಸ್ಫೂರ್ತಿ ಎನ್.ಆರ್. ಶಿವಪ್ರಕಾಶ್. ಕಲಾಗುರು ಎಂ.ಟಿ.ವಿ. ಆಚಾರ್ಯ, ಸಾಹಿತಿ ಜಿ.ವಿ. ಗಣೇಶಯ್ಯ ಅವರ ಪ್ರೋತ್ಸಾಹದಲ್ಲಿ ಶೇಷಗಿರಿ ಈ ಸಾಧನೆ ಮಾಡಿದರು.

ಬೆಂಕಿ ಪೊಟ್ಟಣ ಸಂಗ್ರಹ
ಬಳಸಿದ ಬೆಂಕಿಕಡ್ಡಿಯೂ ಶೇಷಗಿರಿಯವರಿಗೆ ಸಂಗ್ರಹಯೋಗ್ಯ ವಸ್ತು. ವಿವಿಧ ನಮೂನೆಯ ಸುಮಾರು 1,500 ಮ್ಯಾಚೆಸ್‌ಗಳು ಇವರ ಕಣಜದಲ್ಲಿ ಸಿಗುತ್ತವೆ. ಪಕ್ಷಿ, ಪ್ರಾಣಿ, ದೇವರು, ಕ್ರೀಡೆ, ವಾಹನ, ಹಣ್ಣು, ತರಕಾರಿ, ನಕ್ಷತ್ರ, ನಿಸರ್ಗ ಹೀಗೆ ಇವರ ಸಂಗ್ರದಲ್ಲಿರುವ ಬೆಂಕಿಪೊಟ್ಟಣಗಳು ಒಂದಕ್ಕಿಂತ ಒಂದು ಭಿನ್ನ. ಭಾರತದ ಎಲ್ಲ ಮತ್ತು ವಿಶ್ವದ ಶೇ.90 ರಾಷ್ಟ್ರಗಳ ಅಂಚೆ ಚೀಟಿಗಳನ್ನು ಶೇಷಗಿರಿ ಸಂಗ್ರಹಿಸಿದ್ದಾರೆ.  ಶೇಷಗಿರಿಯವರ ಕಲಾಕ್ಷೇತ್ರದ ಸಾಧನೆಗೆ ಜಿಲ್ಲಾ ಮಟ್ಟ ಹಾಗೂ ಕೊಪ್ಪ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಬೆಂಗಳೂರಿನ ಶೃಂಗೇರಿ ಸಾಂಸ್ಕೃತಿಕ ಸಂಘ, ತೀರ್ಥಹಳ್ಳಿಯ ನಾಗರಿಕ ಸಮಿತಿ ಸೇರಿದಂತೆ ಸ್ಥಳೀಯ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಇಂದಿನ ಮೊಬೈಲ್ ಯುಗದಲ್ಲೂ ಪತ್ರ ಬರವಣಿಗೆಯನ್ನು ನೆಚ್ಚಿಕೊಂಡವರು ಶಂ.ನ.ಶೇ. ನೀವೂ ಒಂದು ಪತ್ರ ಬರೆದು ಅವರ ಕ್ರಿಯಾಶೀಲತೆಯನ್ನು ಅಭಿನಂದಿಸಬಹುದು. ಶಂ.ನ.ಶೇಷಗಿರಿ, ಹವ್ಯಾಸಿ ಪತ್ರಕರ್ತರು, ನರಸಿಂಹಪಾಲು, ಜಯಪುರ, ಕೊಪ್ಪ (ತಾ), ಚಿಕ್ಕಮಗಳೂರು-577123.

- ಸುಧೀಂದ್ರ ಜಮ್ಮಟಿಗೆ
sudheeja@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್