ಸಾಧನೆ

ಹಾವಿಗೊಂದು ಮುತ್ತು

ಈ ಬೇಸಿಗೆ ಮನುಷ್ಯನನ್ನೇ ಬೇಯಿಸಿ ಬಿಡುತ್ತಿದೆ. ಇನ್ನು ಫ್ಯಾನು, ಎಸಿಯ ಸಹವಾಸವೇ ಇಲ್ಲದ ಜೀವಿಗಳನ್ನು ಸುಮ್ಮನೆ ...

ಈ ಬೇಸಿಗೆ ಮನುಷ್ಯನನ್ನೇ ಬೇಯಿಸಿ ಬಿಡುತ್ತಿದೆ. ಇನ್ನು ಫ್ಯಾನು, ಎಸಿಯ ಸಹವಾಸವೇ ಇಲ್ಲದ ಜೀವಿಗಳನ್ನು ಸುಮ್ಮನೆ ಬಿಡುತ್ತದಾ? ಅದರಲ್ಲೂ ಇಂಥ ಸೆಕೆಯಲ್ಲಿ ಹಾವುಗಳು ಹುತ್ತದಲ್ಲಿ ಮುದುಡಿ ಮಲಗುವುದೇ ಇಲ್ಲ. ಹೊರಗೆ ಹೊರಟೇಬಿಡುತ್ತವೆ. ಅವುಗಳನ್ನು ಈ ಮಾನವ ಸುಮ್ಮನೆ ಬಿಟ್ಟಾನಾ? ಬೆತ್ತ, ಬಡಿಗೆಗಳಿಂದ ಕೊಲ್ಲಲು ಮುಂದಾಗುತ್ತಾನೆ.
ಆದರೆ, ಗೋಕಾಕ ತಾಲೂಕಿನ ಕೊಣ್ಣೂರಲ್ಲೊಬ್ಬ ಇದ್ದಾನೆ. ಲಕ್ಷ್ಮಣ ಮಿಶಾಳೆ (ಮೊ. 9739191381). ಹಾವೆಂದರೆ ಈತನಿಗೆ ಬಲುಪ್ರೀತಿ. ಮುತ್ತಿಕ್ಕುವಷ್ಟು ಪ್ರೇಮ. ಉರಗದೊಂದಿಗೆ ಆಡುವಷ್ಟು ಸಲುಗೆ. ಜನರಿಂದ ಈ ಹಾವುಗಳನ್ನು ರಕ್ಷಿಸಿ, ಫೋಟೋ ತೆಗೆಸಿಕೊಳ್ಳುವುದಿಲ್ಲ. ಹಾವಿನ ಬಗ್ಗೆ ಜಾಗೃತಿ ಮೂಡಿಸುತ್ತಾನೆ. ಇಲ್ಲಿಯ ತನಕ 1500ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಗುಡ್ಡಗಾಡಿಗೆ ಬಿಟ್ಟಿರುವ ಲಕ್ಷ್ಮಣ, 50ಕ್ಕೂ ಹೆಚ್ಚು ಸಲ ಹಾವಿನ ಅರಿವಿನ ಬಗ್ಗೆ ಕಾರ್ಯಕ್ರಮ ನೀಡಿದ್ದಾನೆ. ಯಾವ ಹಾವು ವಿಷಕಾರಿಯಾಗಿರುತ್ತೆ? ಯಾವುದರಲ್ಲಿ ವಿಷವಿರುವುದಿಲ್ಲ? ಎಂಬುದನ್ನು ಸಾಮಾನ್ಯರಿಗೂ ಬಿಡಿಸಿ ಹೇಳುತ್ತಾನೆ. ಹಾವುಗಳ ಬಗೆಗಿನ ಮೂಢನಂಬಿಕೆಗಳನ್ನು ದೂರ ಮಾಡುವುದಷ್ಟೇ ಈತನ ಡ್ಯೂಟಿ.
ಲಕ್ಷ್ಮಣ ಉವಾಚ
ಹಾವು ಹಾಲು ಕುಡಿಯುವುದಿಲ್ಲ. ಅವಕ್ಕೆ ಕೂದಲಿರುವುದಿಲ್ಲ. ಹಾವು ದ್ವೇಷದ ಜೀವಿಯಲ್ಲ. ಅದಕ್ಕೆ ಕಿವಿ ಇರುವುದಿಲ್ಲ. ನಾಗರಮಣಿಯೂ ಇರುವುದಿಲ್ಲ. ಅವು ಮಾಂಸಾಹಾರಿ. ಹಾವು ಮೂರ್ನಾಲ್ಕು ತಿಂಗಳಿಗೊಮ್ಮೆ ಆಹಾರ ಸೇವಿಸುತ್ತವೆ. ಹಾವುಗಳಿಗೆ ಮಾನವರು, ವಸ್ತುಗಳಾಗಲಿ ಅಕ್ರಮಣಕಾರಿಯಾಗಿ ಕಾಣುತ್ತವೆ. ಆದ್ದರಿಂದ ಅವು ಕಚ್ಚಲಿಕ್ಕೆ ಮುಂದಾಗುತ್ತವೆ. ಹಾವು ಜಗತ್ತಿನ ಅತಿ ಮುಗ್ಧಜೀವಿ- ಹೀಗೆ ಒಂದಲ್ಲ, ಎರಡಲ್ಲ... ಹಾವಿನ ಬಗ್ಗೆ ಹತ್ತು ಹಲವು ಮಾಹಿತಿ ತೆಗೆಯುತ್ತಾನೆ ಲಕ್ಷ್ಮಣ್.
ಯಾವುದರಲ್ಲಿದೆ ವಿಷ?
ಎಲ್ಲ ಹಾವುಗಳೂ ವಿಷಜೀವಿಗಳಲ್ಲ. ಕಾಳಿಂಗಸರ್ಪ, ನಾಗರಹಾವು, ಮಂಡಲ, ಕಾಮಿನ ಕ್ರಿಯೆಟ, ಸಮುದ್ರದಲ್ಲಿರುವ ಹಾವುಗಳು- ಇವುಗಳಲ್ಲಷ್ಟೇ ವಿಷವಿರುತ್ತದೆ. ಕೆರೆ ಹಾವು, ಹೆಬ್ಬಾವು, ಆಭರಣ ಹಾವು, ಗೋಡೆ ಹತ್ತುವ ಹಾವು, ನೀರೊಳಗಿನ ಹಾವು, ಮನಮುಕ, ಹಸಿರು ಹಾವು- ಇವುಗಳಲ್ಲಿ ವಿಷವಿರುವುದಿಲ್ಲ. ಇನ್ನು ಚಿಣಗಿ ಹಾವು, ಹಾರಣಟೋಳ ಹಾವುಗಳಲ್ಲಿ ಅಲ್ಪ ಪ್ರಮಾಣದ ವಿಷವಿರುತ್ತದೆ.
ಕಚ್ಚದ ಕೂಡಲೇ...
ಹಾವು ಕಚ್ಚಿದ ತಕ್ಷಣ ಕಚ್ಚಿದ ಜಾಗದಿಂದ ಮೇಲಿನ ಭಾಗದ ಒಂದು ಗೇಣು ಬಿಟ್ಟು ಬಿಗಿಯಾಗಿ ಹಗ್ಗ ಅಥವಾ ವಸ್ತುವಿನಿಂದ ಕಟ್ಟಬೇಕು. ರಕ್ತಚಲನೆಯನ್ನು ತಡೆಯಬೇಕು. ನಂತರ ಕಚ್ಚಿದ ಜಾಗದಲ್ಲಿ '೤' ಚಿಹ್ನೆ ಮಾಡಿ ರಕ್ತವನ್ನು ಹೊರಹಾಕಬೇಕು. ನಂತರ ಆಸ್ಪತ್ರೆಗೆ ಹೋಗಿ ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆಯಬೇಕು. ಇದು ವಿಷಕಾರಿ ಹಾವುಗಳು ಕಚ್ಚಿದಾಗ ಮಾತ್ರ. ಇನ್ನು ವಿಷವಿಲ್ಲದ ಕೆರೆಹಾವು, ಆಭರಣ ಹಾವು, ಗೋಡೆಹತ್ತುವ ಹಾವು ಕಚ್ಚಿದರೆ ಭಯ ಪಡೆದೆ ಟಿ.ಟಿ. ಇಂಜೆಕ್ಷನ್ ಪಡೆದರೆ ಸಾಕು.



- ಸಾಧಿಕ್ ಎಂ. ಹಲ್ಯಾಳ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು