ಸಾಧನೆ

ಕೃಷ್ಣನ ಕಲೆ ಬಲೆ

ಇವರ ಕುಂಚದಲ್ಲಿ ಅರಳಿದ ಕಲಾಕೃತಿಗಳಿಗೆ ಬಹುಬೇಡಿಕೆ. ತಮ್ಮ ಮನೆಯನ್ನೇ ಕಲಾ ಗ್ಯಾಲರಿಯನ್ನಾಗಿಸಿರುವ ಇವರು ಕೃಷ್ಣಕುಮಾರ್ ಜಾನವಾಳೆ. ಇವರ ಕೈಲಿ ಅರಳಿದ ಚಿತ್ರಗಳು ಮನೆಯ ಗೋಡೆಗಳ ಮೇಲೆ ಇತಿಹಾಸ, ರಾಮಾಯಣ, ಮಹಾಭಾರತವನ್ನು ಕೆದಕುತ್ತಾ ಕುಳಿತಿವೆ.
ಮೂಲತಃ ಕನ್ನಡ ನಾಡಿನ ಕಿರೀಟಪ್ರಾಯದಂತಿರುವ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೋಳಸಮುದ್ರ ಗ್ರಾಮಕ್ಕೆ ಸೇರಿದವರು ಕೃಷ್ಣ. ಬಡ ಕುಂಟುಂಬದಲ್ಲಿ ಹುಟ್ಟಿದ ಇವರು, ಚಿತ್ರಕಲೆಯಲ್ಲಿ ಪಳಗಿ, ಊರಿನ ಜನರ ಮತ್ತು ಗಣ್ಯ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸುವುದರ ಮೂಲಕ ಈ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ. ಗಡಿನಾಡ ಪ್ರದೇಶ ಹೋಳ ಸಮುದ್ರ, ಬೀದರ್ ಮತ್ತು ಮಹಾರಾಷ್ಟ್ರದ ಲಾಥೋರ್‌ನಲ್ಲಿ ಚಿತ್ರಕಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಸ್ವಗ್ರಾಮದಲ್ಲಿ ಚಿತ್ರರಚಿಸುವಿಕೆಯಲ್ಲಿ ನಿರತರಾಗಿದ್ದಾರೆ. ಇವರು ಹೆಚ್ಚಾಗಿ ಪೌರಾಣಿಕ ಹಾಗೂ ಧಾರ್ಮಿಕ ವಿಷಯಗಳ ಕುರಿತ ಕಲಾಕೃತಿಗಳನ್ನು ಬಿಡಿಸಿದ್ದಾರೆ.  ಇವರ ಕೈಯಿಂದ ರೂಪತಾಳಿದ ಕಲಾಕೃತಿಗಳು ಗ್ರಾಮೀಣ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ಪ್ರಖ್ಯಾತಿ ಗಳಿಸಿವೆ. ಹಲವು ಚಿತ್ರಗಳು ಕ್ಯಾಲೆಂಡರ್‌ಗಳಾಗಿ ಮಾರ್ಪಾಡಾಗಿವೆ. ಇವರು ತೈಲವರ್ಣ, ಜಲವರ್ಣ, ಪೋಸ್ಟರ್ ಕಲರ್ ಹೀಗೆ ಎಲ್ಲಾ ವಿಧಗಳಲ್ಲಿ ಚಿತ್ರ ಬಿಡಿಸುತ್ತಾರೆ. ಭಾಲ್ಕಿಯ ಡಾ.ಚೆನ್ನಬಸವ ಪಟ್ಟದ್ದೇವರ, ಗುರುಪಾದಪ್ಪ ನಾಗಮಾರಪಲ್ಲಿ ಮತ್ತು ಈಶ್ವರ ಖಂಡ್ರೆ ಚಿತ್ರ ಬಿಡಿಸಿ ಅವರ ಪ್ರೀತಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಲಿಯೋನಾರ್ಡೋ ಡಾ ವಿಂಚಿ, ಮೈಕಲೆಂಜಲೋ ಮತ್ತು ರಂಬಾರ್ಟ್‌ರವರ ಜೀವನ ಚರಿತ್ರೆ ಓದಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಕೆಲವೇ ಕೆಲವು ನಿಮಿಷಗಳಲ್ಲಿ ನಿಮ್ಮ ಚಿತ್ರವನ್ನು ಬಿಡಿಸಿ ನಿಮ್ಮೆದುರಿಗಿಡುವ ಚಾಕಚಕ್ಯತೆಯೂ ಅವರಲ್ಲಿದೆ. ಸತತ ಮೂರು ದಶಕಗಳಿಂದ ಈ ಕಾಯಕದಲ್ಲಿ ತೊಡಗಿದ್ದಾರೆ. ಕಲೆ ಯಾರ ಸೊತ್ತಲ್ಲ. ಅದು ಯಾರಿಗೆ ಬೇಕಾದರೂ ಒಲಿಯಬಹುದು ಎಂಬುದಕ್ಕೆ ಬಡತನದಲ್ಲಿ ಹುಟ್ಟಿ ಬೆಳೆದ ಕೃಷ್ಣಕುಮಾರ ವಿ. ಜಾನವಾಳೆ ನಿದರ್ಶನ.
ಪ್ರಶಸ್ತಿಗಳು...
ರಾಷ್ಟ್ರೀಯ ಕಲಾ ಮೇಳ ಮುಂಬೈ, ಪುಣೆ, ದೆಹಲಿಯಲ್ಲಿ ನಡೆದ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ, ತಿಲಕ ಭವನದ ಪ್ರಶಸ್ತಿಗಳು, ಏಡ್ಸ್ ವಿಷಯದ ಮೇಲಿನ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಕ್ರಿಯೇಟಿವಿಟಿ ಅವಾರ್ಡ್ ಇವರ ಮುಡಿಗೇರಿವೆ. ಅಲ್ಲದೆ ಸಾಂಗಲಿಯ ನಾಂದೇಡ್ ಮರಾಠವಾಡ ಪ್ರಶಸ್ತಿ ಹಾಗೂ ಜೆಜೆ ಕಾಲೇಜಿನ ವಾರ್ಷಿಕ ಸಮ್ಮೇಳನದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

= ಅವಿನಾಶ್ ಎಸ್. ಬೆಡಕಪಳ್ಳಿ
ಪತ್ರಿಕೋದ್ಯಮ ವಿದ್ಯಾರ್ಥಿ, ಗುಲ್ಬರ್ಗ ವಿವಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!