ಸಾಧನೆ

ಸಂಧ್ಯಾನಂದ

ಅಲ್ಲಿ ಒಂದು ಗುಂಪು ದಿನಪತ್ರಿಕೆ ಓದುತ್ತಾ ಕುಳಿತಿದೆ. ಪತ್ರಿಕೆಯನ್ನು ಓದಿ ಮುಗಿಸಿದವರು, ಅಲ್ಲಿನ ಸುದ್ದಿಗಳ ವಿಶ್ಲೇಷಣೆಯ ಬೆನ್ನೇರಿದ್ದಾರೆ. ಮತ್ತೊಂದು ಗುಂಪು ಗತಕಾಲದ ಬಗೆಗೆ ಮಾತನಾಡುತ್ತಾ ಕುಳಿತಿದೆ. ಇನ್ನೂ ಕೆಲವರಿಂದ ದೇವರ ಭಜನೆ. ಮತ್ತೆ ಕೆಲವು ಮಂದಿ ತಂಪಾದ ವಾತಾವರಣದಲ್ಲಿ ವಿಹರಿಸುತ್ತಿದ್ದಾರೆ.
ಇದು ಧಾರವಾಡ- ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಕಾಣಸಿಗುವ ಶ್ರೀ ಕೃಷ್ಣಧಾಮ ಆನಂದಾಶ್ರಮದ ದೃಶ್ಯ. ಆ ವೃದ್ಧಾಶ್ರಮದಲ್ಲಿ ಜಡತ್ವಗಳೇ ಕಾಣುವುದಿಲ್ಲ. ಸೋಮಾರಿತನ ಇಲ್ಲಿನ ಯಾರಲ್ಲೂ ಇಣುಕುವುದಿಲ್ಲ.
ನಿಸರ್ಗದ ಮಡಿಲಲ್ಲಿ ಸಲಕಿನಕೊಪ್ಪದಲ್ಲಿ ತಲೆಯೆತ್ತಿರುವ ಈ ವೃದ್ಧಾಶ್ರಮ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನು ಹೊಂದಿದ್ದು ಬದುಕಿನ ಮುಸ್ಸಂಜೆಗೊಂದಿಷ್ಟು ನೆಮ್ಮದಿಯ ಧಾರೆ ಎರೆಯುತ್ತಿದೆ. 2004ರಲ್ಲಿ ಸ್ಥಾಪನೆಯಾದ ಇದು ಸುರೇಶ  ಕುಲಕರ್ಣಿ ಅವರ ಕನಸಿನ ಕೂಸು.
3 ಎಕರೆ ಪ್ರದೇಶದಲ್ಲಿ ತನ್ನ 25 ಕೊಠಡಿಗಳ ಬಾಹುವನ್ನು ಚಾಚಿ ಕುಳಿತಿರುವ ಈ ಆಶ್ರಮ, ಧಾರವಾಡದಿಂದ 8 ಕಿ.ಮೀ. ದೂರದಲ್ಲಿದೆ. ಸರ್ಕಾರದ ಅಥವಾ ಇತರೆ ಸಂಘಸಂಸ್ಥೆಗಳ ಸಹಾಯಧನವಿಲ್ಲದೆ ಕುಟುಂಬ ಸದಸ್ಯರ ನೆರವಿನಿಂದ ನಡೆಯುತ್ತಿರುವ ಆನಂದಾಶ್ರಮದಲ್ಲಿ 65 ವರ್ಷದಿಂದ ಹಿಡಿದು 90 ವರ್ಷದ 48 ಅನುಭವದ ಕಣಜಗಳು ತಮ್ಮ ಜೀವನದ ಸಂಧ್ಯಾಕಾಲವನ್ನು ಖುಷಿಯಾಗಿ ಕಳೆಯುತ್ತಿದ್ದಾರೆ.
ಇಲ್ಲಿರುವ ವೃದ್ಧರೂ ಆಶ್ರಮದ ಆಡಳಿತ, ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಯಾರಿಗಾಗಿ ಒಂದು ಸಂಸ್ಥೆ ನಡೆಯುತ್ತಿದೆಯೋ ಅವರ ತೃಪ್ತಿಗಿಂತ ಹೆಚ್ಚಿನದ್ದೇನು ಬೇಕು ಹೇಳಿ?
ಬೆಳಗಿನ ಪ್ರಾರ್ಥನೆಯೊಂದಿಗೆ ಶುರುವಾಗುವ ದಿನ ಸಂಜೆಯ ಸತ್ಸಂಗದೊಂದಿಗೆ ಅರ್ಥಪೂರ್ಣವಾಗಿ ಮುಗಿಯುತ್ತದೆ. ಆಶ್ರಮದಲ್ಲಿ ಪುಟ್ಟ ಗ್ರಂಥಾಲಯವೂ ಉಂಟು. ಜೊತೆಗೆ ವೃದ್ಧರೇ ವಿವಿಧ ಗುಂಪುಗಳಾಗಿ ಒಂದೊಂದು ಗುಂಪಿನವರೂ ಒಂದೊಂದು ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇದರಿಂದ ಕೇವಲ ಮನರಂಜನೆಯಲ್ಲದೆ ಅದರಲ್ಲಿ ತೊಡಗಿಕೊಳ್ಳುವ ಸಂತೋಷವೂ ಅವರದು.
ಆಗಾಗ ಖ್ಯಾತ ಸಂಗೀತಗಾರರು ಇಲ್ಲಿಗೆ ಬಂದು ಕಾರ್ಯಕ್ರಮ ನೀಡುತ್ತಾರೆ. ಇದು ಇಲ್ಲಿನ ವೈಶಿಷ್ಟ್ಯ. ರುಚಿ-ಶುಚಿಯಾದ ಆಹಾರ, ಮನೆಯ ವಾತಾವರಣ, ಸಮಾನವಯಸ್ಕರೊಡನೆ ಒಡನಾಟ ಇಲ್ಲಿಯ ವೃದ್ಧರನ್ನು ಚಿರಯುವಕರನ್ನಾಗಿಸಿದೆ. ವರ್ಷಕ್ಕೊಂದು ಬಾರಿ ಯಾತ್ರೆಗೂ ಕರೆದುಕೊಂಡು ಹೋಗಿ ಬರುವ ಸಂಪ್ರದಾಯವಿದೆ.
ವೃದ್ಧರಿಗಾಗಿಯೇ ವಿಶೇಷ ಬಸ್ಸನ್ನು ಖರೀದಿಸುವ ಅಭಿಲಾಷೆ ಆಶ್ರಮದ ಕಾರ್ಯದರ್ಶಿ ನವೀನ್ ಕುಲಕರ್ಣಿ ಅವರದು. ವೈದ್ಯಕೀಯ ಚಿಕಿತ್ಸೆಗಾಗಿ ಸದಾಕಾಲ ನಗರದ ಪ್ರತಿಷ್ಠಿತ ಆಸ್ಪತ್ರೆಯೊಡನೆ ಸಂಪರ್ಕದಲ್ಲಿರುವ ಈ ಆಶ್ರಮದಲ್ಲಿ ಸುಮಾರು 15 ಕೆಲಸಗಾರರು ವೃದ್ಧರಿಗೆ ಮಕ್ಕಳ- ಮೊಮ್ಮಕ್ಕಳ ಪ್ರೀತಿಯನ್ನು ಕೊಡುತ್ತಿದ್ದಾರೆ.


= ವಾಣಿ ಸೊನ್ನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!