ಸಾಧನೆ

ಅಬ್ಬಬ್ಬಾ ಅಜ್ಜಿ

ಹಲವರು ಅರವತ್ತು ವರ್ಷ ವಯಸ್ಸಾಗುತ್ತಿದ್ದಂತೆ ಮಂಡಿ ನೋವು, ಸೊಂಟನೋವು ಎಂದುಕೊಳ್ಳುತ್ತಾ ಡಾಕ್ಟರ್ ಬಳಿ ಓಡುತ್ತಾರೆ...

ಹಲವರು ಅರವತ್ತು ವರ್ಷ ವಯಸ್ಸಾಗುತ್ತಿದ್ದಂತೆ ಮಂಡಿ ನೋವು, ಸೊಂಟನೋವು ಎಂದುಕೊಳ್ಳುತ್ತಾ ಡಾಕ್ಟರ್ ಬಳಿ ಓಡುತ್ತಾರೆ. ಆದರೆ ಜರ್ಮನಿಯ ಜೊಹನ್ನಾ ಕ್ವಾಸನ್ನು ನೋಡಿದರೆ ವಯಸ್ಸಾದವರು ಮಾತ್ರವಲ್ಲ, ಹದಿ ಹರೆಯದವರೂ ಕರುಬುವುದು ಖಂಡಿತ. ಮಡೋನ್ನಾ ಕೂಡ ನಾಚಿಕೊಳ್ಳುವ ಅಂಗಸೌಷ್ಠವ ಈಕೆಯದು. ಅಂದ ಹಾಗೆ ಈಕೆಯ ವಯಸ್ಸೆಷ್ಟು ಗೊತ್ತೇ? ಬರೋಬ್ಬರಿ 88 ವರ್ಷ!
ಈ ಇಳಿ ವಯಸ್ಸಿನಲ್ಲೂ ಈಕೆ ಮಾಡುವ ಜಿಮ್ನಾಸ್ಟಿಕ್ ಅನ್ನು ನೋಡಿದರೆ ಯಾರಾದರೂ ನಿಬ್ಬೆರಗಾಗುತ್ತಾರೆ. ಜರ್ಮನಿಯಲ್ಲಿ ನಡೆದ ಕಾಟ್ಬಸ್ ವರ್ಡ್ ಕಪ್ -2012ರಲ್ಲಿ ಜೊಹನ್ನಾ ತನ್ನ ಕಸರತ್ತನ್ನು ತೋರಿಸುತ್ತಿದ್ದಾಗ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳು ಮುಗಿಲು ಮುಟ್ಟಿದ್ದವಂತೆ. ನೆಲದ ಮೇಲೆ ಹಾಗೂ ಸಮನಾಂತರ ಬಾರ್‌ಗಳ ಮೇಲೆ ಈಕೆಯ ಪ್ರತಿ ಭಂಗಿಗಳನ್ನು ನೋಡುತ್ತಿದ್ದ ಯುವ ಜಿಮ್ನಾಸ್ಟಿಕ್‌ಗಳಂತೂ ಅತ್ಯಾಶ್ಚರ್ಯಗೊಂಡರಂತೆ. ಯೂ ಟ್ಯೂಬ್‌ನಲ್ಲಿ 3 ಮಿಲಿಯನ್‌ಗಿಂತ ಅಧಿಕ ಜನ ಈಕೆಯ ಜಿಮ್ನಾಸ್ಟಿಕ್ ಅನ್ನು ವೀಕ್ಷಣೆ ಮಾಡಿ ಸಂತಸ ಪಟ್ಟಿದ್ದಾರೆ.  ಅಂದ ಹಾಗೆ ಈ ಅಲ್ಟ್ರಾ ಫ್ಲೆಕ್ಸಿಬಲ್ ಮಹಿಳೆ ಜಿಮ್ನಾಸ್ಟಿಕ್ ಪ್ರಾರಂಭಿಸಿದ್ದು ತನ್ನ 30ನೇ ವಯಸ್ಸಿನಲ್ಲಿ. ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಈಕೆ, ಅನೇಕ ಯುವ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಹೃದಯ ಗೆದ್ದಿದ್ದಾಳೆ. ಕಲಾತ್ಮಕ ಜಿಮ್ನಾಸ್ಟಿಕ್‌ನಲ್ಲಿ ಈಕೆ ಹಲವು ಬಾರಿ ಸೀನಿಯರ್ ಚಾಂಪಿಯನ್ ಆಗಿದ್ದಾಳೆ. ತನ್ನ ವಯಸ್ಸಿನ ಕಾಲುಭಾಗ ವಯಸ್ಸಿನವರು ಅಂದರೆ 20 ವರ್ಷ ವಯಸ್ಸಿನವರು ಮಾಡುವ ಜಿಮ್ನಾಸ್ಟಿಕ್ ರೊಟೀನ್ ವಿತ್ ಬ್ಯಾಲೆನ್ಸ್, ಸ್ಟ್ರೆಂತ್, ಫ್ಲೆಕ್ಸಿಬಿಲಿಟಿ ಎಲ್ಲವೂ ಬಿಳಿ ಗುಂಗುರು ಕೂದಲಿನ ಈ ಅಜ್ಜಿಗೆ ಬಲು ಸಲೀಸು. ಕಳೆದ 30 ವರ್ಷಗಳಲ್ಲಿ ಜೊಹನ್ನಾ, ಒಂದಲ್ಲ, ಎರಡಲ್ಲ, ಬರೋಬ್ಬರಿ 11 ಪ್ರಮುಖ ವರ್ಲ್ಡ್ ಚಾಂಪಿಯನ್‌ಶಿಪ್ ಅನ್ನು ತನ್ನದಾಗಿಸಿಕೊಂಡಿದ್ದಾಳೆ.
ಜಿಮ್ನಾಸ್ಟಿಕ್ ತರಬೇತು ನೀಡಿದ ಜರ್ರಾಡರ್ ಕ್ವಾಸ್ ಅನ್ನು 1963ರಲ್ಲಿ ಮದುವೆ ಮಾಡಿಕೊಂಡ ಈಕೆಗೆ 3 ಹೆಣ್ಣು ಮಕ್ಕಳಿದ್ದಾರೆ. ದಿನಾಲೂ ಮಾಡುವ ಕಟ್ಟುನಿಟ್ಟಿನ ವ್ಯಾಯಾಮ, ಓಟ ಹಾಗೂ ಯೋಗವೇ ಈಕೆಯ ದೇಹಸಿರಿಯ ಒಳಗುಟ್ಟಂತೆ.


ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ನನ್ನ ಹೆಸರು ಸೇರ್ಪಡೆಯಾಗಿರುವುದಕ್ಕೆ ಬಲು ಹೆಮ್ಮೆ ಎನ್ನಿಸುತ್ತದೆ. ಈ ವಿಶ್ವ ದಾಖಲೆಯು, ಏನಾದರೂ ಹೊಸದನ್ನು ಸಾಧಿಸಲು ಈಗಲೂ ಕಾಲ ಮಿಂಚಿಲ್ಲ ಎಂಬುದಾಗಿ ಇತರರಿಗೆ ಸ್ಫೂರ್ತಿ ನೀಡುತ್ತದೆ.
- ಜೊಹನ್ನಾ ಕ್ವಾಸ್

ವಿದ್ಯಾ ವಿ. ಹಾಲಭಾವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್