ಸಾಧನೆ

ದಂತೋಕ್ತಿ

ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಎಲ್ಲ ಕಾಲದಲ್ಲೂ ಬೇಕಾಗುವ ಅಂಗ ಹಲ್ಲು. ಮಾತನಾಡಲು, ಜೀರ್ಣಕ್ರಿಯೆಗೆ ಸಹಕರಿಸುವಲ್ಲಿ ...

ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಎಲ್ಲ ಕಾಲದಲ್ಲೂ ಬೇಕಾಗುವ ಅಂಗ ಹಲ್ಲು. ಮಾತನಾಡಲು, ಜೀರ್ಣಕ್ರಿಯೆಗೆ ಸಹಕರಿಸುವಲ್ಲಿ ಹಲ್ಲುಗಳದು ಪ್ರಮುಖ ಪಾತ್ರ. ಹಾಲು ಹಲ್ಲು ಬಿದ್ದು ಹುಟ್ಟಿದ ಮೇಲೆ ಮತ್ತೆ ಮುರಿದುಕೊಂಡರೆ ಅವೆಂದಿಗೂ ಬರುವುದಿಲ್ಲ. ಕೃತಕ ಹಲ್ಲುಗಳಲ್ಲಿ ನೈಸರ್ಗಿಕತನ ಇರುವುದಿಲ್ಲ. ಆದ್ದರಿಂದ ಇರುವ ಹಲ್ಲುಗಳನ್ನು ಉಳಿಸಿಕೊಳ್ಳುವುದು ಮುಖ್ಯ. ಅದರಲ್ಲೂ ಹಿರಿಯ ನಾಗರಿಕರಿಗೆ ದಂತರಕ್ಷಣೆ ಒಂದು ಸವಾಲೇ ಸರಿ. ವಯೋಸಹಜ ಬದಲಾವಣೆಗಳು ಒಂದೊಂದೇ ಹಲ್ಲನ್ನು ತೆಗೆದುಕೊಳ್ಳುತ್ತಾ ಬರುತ್ತವೆ. ಜೊತೆಗೆ ವಯಸ್ಸಾದಂತೆ ಅಟಕಾಯಿಸಿಕೊಳ್ಳುವ ಬಿಪಿ, ಶುಗರ್ ಕೂಡಾ ದಂತ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತವೆ.
ವೃದ್ಧರ ದಂತರಕ್ಷಣೆ ಎಲ್ಲ ವಯೋವಾನದವರಂತಲ್ಲದೆ ಪ್ರತ್ಯೇಕ ಆರೈಕೆ ಅವಶ್ಯಕವಾಗಿದೆ. ಹೇಗೂ ಉದುರುವ ಹಲ್ಲು, ಚಿಕಿತ್ಸೆ ಅನವಶ್ಯಕ ಎಂದು ಭಾವಿಸಬೇಡಿ. ಗಮನ ನೀಡಿದರೆ ಸಮಸ್ಯೆಗಳನ್ನೂ ಮುಂದೂಡಬಹುದು, ಕೊನೆವರೆಗೂ.
ಸಾಮಾನ್ಯವಾಗಿ ವೃದ್ಧರನ್ನು ಕಾಡುವ ದಂತಸಮಸ್ಯೆಗಳು
=      ವಯೋಸಹಜ ಬಳಕೆಯಿಂದ ಸವೆದ ಹಲ್ಲು.
=      ಹಲ್ಲುಗಳ ನಡುವೆ ಮೂಳೆಸವೆತದಿಂದ ಉಂಟಾಗುವ ಜಾಗ.
=      ಹಲ್ಲುಗಳ ಸವಕಳಿಯಿಂದ ಆಗುವ ಹುಳುಕು.
=      ದುರ್ವಾಸನೆ, ಬೇರು ಹುಳುಕು.
=      ವಸಡಿನ ಇಳಿಮುಖ, ಕ್ಷೀಣಿಸುವ ವಸಡಿನ ಆಕಾರ.
=      ವಸಡಿನ ಬಾವು, ಊತ.
=      ಮುರಿದ, ಚೂಪಾದ ಹಲ್ಲುಗಳು.
=      ವಸಡಿನಲ್ಲಿ ರಕ್ತಸ್ರಾವ, ಸಡಿಲಗೊಂಡ ಹಲ್ಲಿಗಳು.
=      ಕೊಳೆಯ ಜಮಾವಣೆ. ಬಾಯಿ ಕ್ಯಾನ್ಸರ್ ಸಾಧ್ಯತೆ.
=      ಮಧುಮೇಹ, ಬಿಪಿಯಿದ್ದಾಗ ಕಾಡುವ ದಂತ ಸಮಸ್ಯೆಗಳು.
=      ಸಿಗರೇಟು, ಮದ್ಯಪಾನ, ಜರ್ದಾ ಸೇವನೆಯಿಂದ ಸವೆದ ಹಲ್ಲುಗಳು.
ಏನು ಪರಿಹಾರ?
=      ಸವೆದ ಹಲ್ಲುಗಳಿಗೆ ಸೂಕ್ತ ಕ್ಯಾಪ್, ಕ್ರೌನ್ ಹಾಕಿಸಿ.
=      ಹಲ್ಲುಗಳಿಲ್ಲದಿದ್ದಾಗ ಕೃತಕ ದಂತಪಂಕ್ತಿ ಮಾಡಿಸಿ. ಚೂಪಾದ ಹಲ್ಲುಗಳನ್ನು ರೌಂಡ್ ಮಾಡಿಸಿ.
=  ದಂತ ಮತ್ತು ವಸಡು ರೋಗಕ್ಕೆ ಕಾರಣವಾದ ಅಂಶಗಳನ್ನು ವೈದ್ಯರ ಸಹಾಯದಿಂದ ಗುರುತಿಸಿ ಚಿಕಿತ್ಸೆ ಪಡೆದುಕೊಳ್ಳಿ.
=  ಮಧುಮೇಹಕ್ಕೆ ಸೂಕ್ತ ಚಿಕಿತ್ಸೆ ಪಡೆದು ನಿಯಂತ್ರಣದಲ್ಲಿಟ್ಟುಕೊಳ್ಳಿ.
=  ಹುಳುಕಾದ ಹಲ್ಲುಗಳಿಗೆ ರೂಟ್‌ಕೆನಾಲ್ ಮಾಡಿಸಿ.
=  ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿಂದ ದೂರವಿರುವುದು.
ಕಡ್ಡಾಯವಾಗಿ ಮಾಡಬೇಕಾದುದು
=      ಪ್ರತಿದಿನ ಹಲ್ಲಿನ, ಬಾಯಿಯ ಸ್ವಚ್ಛತೆ ಕಾಪಾಡುವುದು.
=      3- 4 ತಿಂಗಳಿಗೊಮ್ಮೆ ದಂತವೈದ್ಯರಿಂದ ಪರೀಕ್ಷೆ, ಸೂಕ್ತ ಸಲಹೆ, ಚಿಕಿತ್ಸೆ.
=      ಫ್ಲೋರೈಡ್ ನೀರಿನ ಸೇವನೆ ಬೇಡ. ಬಾಯಿಯ ಜೊಲ್ಲು ಸ್ರವಿಕೆ ಕಡಿಮೆಯಾಗದಂತೆ ಎಚ್ಚರ. ಪದೇ ಪದೆ ನೀರು ಕುಡಿಯುತ್ತಿರಿ.
=      ಕಡ್ಡಿ, ಪಿನ್ನು ಬಾಯಿಗೆ ಹಾಕಿ ಶುಚಿಗೊಳಿಸಬೇಡಿ.
=      ದಂತ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಸರಿಪಡಿಸುವುದು.
=      ಕ್ಯಾನ್ಸರ್ ಅಂಶ ಆಗದಂತಿರಲು ಆಗಾಗ ಬಾಯಲ್ಲಿ ಬಿಳಿಕಲೆ, ಮಚ್ಚೆ, ಬಾಯಿಉರಿ, ಬಾಯಿಹುಣ್ಣು ದೀರ್ಘಕಾಲೀನ ಆಗುತ್ತಿದೆಯೇ ಸ್ವಯಂ ಪರೀಕ್ಷಿಸಿಕೊಳ್ಳಿ.




ಡಾ.ಕೆ.ವಿ. ಸಂತೋಷ್‌ಕುಮಾರ್ ಹೊಳಲ್ಕೆರೆ



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್