ಸಾಧನೆ

ರವಿ ಆರ್ಟ್ಸ್

ಮಲೆನಾಡಿನ ಮಡಿಲಾದ ತೀರ್ಥಹಳ್ಳಿಯಲ್ಲಿ ಅಡಗಿರುವ ಒಂದು ಕುಗ್ರಾಮದಲ್ಲಿ ಕರಿಯಮ್ಮ ಮತ್ತು ಸೀನ ನಾಯ್ಕ ...

ಮಲೆನಾಡಿನ ಮಡಿಲಾದ ತೀರ್ಥಹಳ್ಳಿಯಲ್ಲಿ ಅಡಗಿರುವ ಒಂದು ಕುಗ್ರಾಮದಲ್ಲಿ ಕರಿಯಮ್ಮ ಮತ್ತು ಸೀನ ನಾಯ್ಕ ದಂಪತಿಯ ಏಳು ಮಕ್ಕಳ ಪೈಕಿ ಆರನೆಯವನಾಗಿ ಹುಟ್ಟಿದ ರವಿಗೆ ಬಾಲ್ಯದಲ್ಲೇ ಒಂದು ಅಂತರ್ಮುಖತೆ. ಜಗತ್ತನ್ನು ಬೆರಗಿನಿಂದ ನೋಡುತ್ತಿದ್ದವನಿಗೆ ಕಂಡದ್ದೆಲ್ಲ ಚಿತ್ರವಾಗಿ ಗೋಚರಿಸುತ್ತಿತ್ತು. ಅಲ್ಲದೇ ಅದನ್ನು ಚಿತ್ರವಾಗಿಸುವ ಗೀಳು ಅಂಟಿತು. ಜೊತೆಯಲ್ಲಿದ್ದ ಮಕ್ಕಳು ಕಲ್ಲು-ಮಣ್ಣು ಆಡುತ್ತಿದ್ದರೆ ಈತನಿಗೆ ಆ ಮಣ್ಣಿನ ಮೇಲೆ ಚಿತ್ರ ಮೂಡಿಸುವ ಹುಚ್ಚು. ಶಾಲೆಯಲ್ಲಿ ಸ್ಲೇಟಿನ ಮೇಲೆ ಎಲ್ಲರೂ ಬರೆಯುತ್ತಿದ್ದರೆ ರವಿ ಮಾತ್ರ ಚಿತ್ರ ಬಿಡಿಸುತ್ತಿದ್ದ ಎಂಬುದು ಮಾಸ್ಟರ್‌ನ ಕಂಪ್ಲೇಂಟ್.
ಕಿತ್ತು ತಿನ್ನುತ್ತಿದ್ದ ಬಡತನದಲ್ಲಿದ್ದ ರವಿಯ ಮನೆಯಲ್ಲಿ ಕೂಲಿ ಕೆಲಸವೇ ಪ್ರಧಾನವಾಗಿತ್ತು. ಹೀಗಿರುವಾಗ ರವಿಯಲ್ಲಿ ಅಡಗಿರುವ ಕಲೆಯ ಬಗ್ಗೆ ಆಸಕ್ತಿ ವಹಿಸುವ ಮನಸ್ಸು ಯಾರಲ್ಲೂ ಇರಲಿಲ್ಲ. ಪ್ರತಿಭೆಯನ್ನು ಗಮನಿಸುವ ಪರಿ ರವಿಯ ತಂದೆ-ತಾಯಿಗೆ ತಿಳಿದಿರಲಿಲ್ಲ. ಪಿಯುಸಿ ಮುಗಿದ ನಂತರ ತನ್ನ ಜೀವನ ಕಲೆಗಾಗಿಯೇ ಮುಡಿಪು ಎನ್ನುತ್ತಾ ಕಲಾಪ್ರಪಂಚದಲ್ಲಿ ಏನನ್ನಾದರೂ ಸಾಧಿಸುವ ಹೋರಾಟಕ್ಕೆ ಇಳಿದ ರವಿ, ಮೈಸೂರಿನಲ್ಲಿರುವ ಡಿಎಂಎಸ್ ಲಲಿತಕಲಾ ಕಾಲೇಜಿನಲ್ಲಿ ಬಿಎಫ್‌ಎ ಪದವಿ ಪಡೆದು ನಂತರ ಎಂವಿಎ ಮುಗಿಸಿದರು.
ಮುಂದಿನ ದಿನಗಳಲ್ಲಿ ತಮ್ಮ ಕೈಚಳಕದಿಂದ ರಚಿಸಿದ ಹಲವು ಕಲಾಕೃತಿಗಳು ಸ್ನೇಹಿತರ ಪ್ರೋತ್ಸಾಹದಿಂದ ಅನೇಕ ಕಡೆಗಳಲ್ಲಿ ಪ್ರದರ್ಶನ ಕಂಡು ನೋಡುಗರನ್ನು ನಿಬ್ಬೆರಗಾಗಿಸಿದವು. ಅದಾದ ಕೆಲ ದಿನಗಳ ನಂತರ ಕೊಡಗಿನ ವಿರಾಜಪೇಟೆಯ ಮಹಿಂದ್ರಾ ಹಾಲಿಡೇ ರೆಸಾರ್ಟ್‌ನಲ್ಲಿ ಕಲಾವಿದರಾಗಿ ಸೇರ್ಪಡೆಗೊಂಡು ಅಲ್ಲಿ ಕಲಾ ಗ್ಯಾಲರಿಯನ್ನು ಸ್ಥಾಪಿಸಿದರು. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ರವಿಯವರ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಳ್ಳುವುದಲ್ಲದೆ ತಮ್ಮ ಸಂಗ್ರಹಕ್ಕೆ ಬೇಕೆಂದು ಕೊಂಡುಕೊಳ್ಳುತ್ತಿದ್ದಾರೆ.
ಇದೀಗ ತಮ್ಮ ಕಾರ್ಯಕ್ಷೇತ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸುತ್ತಿರುವ ಕೋಟೆಗದ್ದೆ ರವಿಯವರಿಗೆ ನಿಮ್ಮ ಹಾರೈಕೆ ಸದಾ ಇರಲಿ. ಸಂಪರ್ಕಕ್ಕಾಗಿ ಮೊ. 9980403839.

- ಸಂಧ್ಯಾ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್