ಸಾಧನೆ

ಶೂಟರ್ ಸುನಿಲ್

ಭಾರತೀಯ ಶೂಟರ್ಸ್ ಎಂದರೆ ಥಟ್ಟನೆ ನೆನಪಾಗೋ ಹೆಸರುಗಳೆಂದರೆ ಅಭಿನವ್ ಬಿಂದ್ರಾ, ರಾಜವರ್ಧನ್ ಸಿಂಗ್ ...

ಭಾರತೀಯ ಶೂಟರ್ಸ್ ಎಂದರೆ ಥಟ್ಟನೆ ನೆನಪಾಗೋ ಹೆಸರುಗಳೆಂದರೆ ಅಭಿನವ್ ಬಿಂದ್ರಾ, ರಾಜವರ್ಧನ್ ಸಿಂಗ್ ರಾಥೋಡ್ ಮತ್ತು ಗಗನ್ ನಾರಂಗ್ ಮಾತ್ರ. ನಮ್ಮಲ್ಲಿ ಗಲ್ಲಿಗಲ್ಲಿಗೂ ಕ್ರಿಕೆಟರ್ಸ್ ಸಿಗುತ್ತಾರೆ. ಆದರೆ ಶೂಟರ್ ಸಿಗುವುದು ತುಂಬಾ ವಿರಳ. ಇಂಥ ವಿರಳತೆಯಲ್ಲೂ ಸರಳವಾಗಿ ಸಿಗುತ್ತಾರೆ 23 ವರ್ಷದ ಸುನಿಲ್ ರಾಥೋಡ್. ಬರಿ ಕ್ರಿಕೆಟ್ಟಿಗೆ ತಲೆ ಕೆಡಿಸಿಕೊಂಡಿರುವ ಭಾರತದಲ್ಲಿ ಸುನಿಲ್‌ನಂಥ ಆಸಕ್ತಿಯುಳ್ಳವರು ಅಪರೂಪ.
ಗುಲ್ಬರ್ಗ ಜಿಲ್ಲೆಯ ಕಮಲಾಪುರದ ಸುನಿಲ್‌ಗೆ ಶೂಟಿಂಗ್ ಎಂದರೆ ಎಲ್ಲಿಲ್ಲದ ಆಸಕ್ತಿ. ಎನ್‌ಸಿಸಿಯ ಶಿಬಿರಾರ್ಥಿಯಾಗಿರುವ ಸುನಿಲ್ 2010ರಲ್ಲಿ ಭೂಪಾಲ್‌ನಲ್ಲಿ ನಡೆದ ಇಂಟರ್ ಡೈರೆಕ್ಟರೇಟ್ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಭಾಗವಹಿಸಿದ 10 ಜನರಲ್ಲಿ ಇವರೂ ಒಬ್ಬರು. 2011ರಲ್ಲೂ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಶೂಟಿಂಗ್‌ನಲ್ಲೂ ಭಾಗವಹಿಸಿದ ಕೀರ್ತಿ ಇವರದು. ರಾಷ್ಟ್ರಮಟ್ಟದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಕ್ಕಾಗಿ 2011ರಲ್ಲಿ ಕರ್ನಾಟಕ ಸರ್ಕಾರ ಸುನಿಲ್‌ರನ್ನು ಸನ್ಮಾನಿಸಿದೆ.
ಕರಾಟೆಯಲ್ಲೂ ಕರಾಮತ್ತು
ಕರಾಟೆಯಲ್ಲೂ ತಮ್ಮ ಛಾಪು ಮೂಡಿಸಿರುವ ಸುನಿಲ್, ಭಾರತೀಯ ಕರಾಟೆ 25 ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಗುಲ್ಬರ್ಗದ ಕಡಗಂಚಿ ಮಠ ಆಯೋಜಿಸಿದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಶಾಲಾ ದಿನಗಳಿಂದಲೂ ಸುನಿಲ್‌ಗೆ ಕ್ರೀಡೆಯೆಂದರೆ ಸೆಳೆತ. ಶಾಲೆಯಲ್ಲಿದ್ದಾಗ ರನ್ನಿಂಗ್, ಜಾವಲಿನ್ ಎಸೆತ, ಚಕ್ರ ಎಸೆತದಲ್ಲಿ ಹಲವು ಬಹುಮಾನ ಪಡೆದಿದ್ದಾರೆ. ಇವರ ಈ ಬಹುಮುಖಿ ಸಾಧನೆಯನ್ನು ಗುರುತಿಸಿ ಗುಲ್ಬರ್ಗ ಜಿಲ್ಲಾಡಳಿತ ಸನ್ಮಾನಿಸಿದ್ದಲ್ಲದೆ, ಗುಲ್ಬರ್ಗದ ಮೊದಲ ಪ್ಯಾರಾಸೈಲಿಂಗ್ ಕೂಟದಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ಆಕಾಶದಲ್ಲಿ ಹಾರಾಡುವ ಅವಕಾಶವನ್ನೂ ಕಲ್ಪಿಸಿತ್ತು.
ಪ್ರತಿವರ್ಷ ಸುನಿಲ್ ತಮ್ಮ ಹುಟ್ಟುಹಬ್ಬದಂದು ರಕ್ತದಾನ ಮಾಡಿ ಮಾನವೀಯತೆ ಮೆರೆಯುತ್ತಾರೆ. ಈ ಆಲ್‌ರೌಂಡರ್‌ಗೆ ನಿಮ್ಮದೊಂದು ಶುಭಾಶಯ ಇರಲಿ. ಮೊ. 7760204927.


- ಬಿ. ಸೋಮಶೇಖರ್ ಸುರಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!