ಸಾಧನೆ

ಲಕ್ಷ್ಮಿಗೊಲಿದ ಸರಸ್ವತಿ

ಅವರಿಗೀಗ 68 ವರ್ಷ. ಮಾತು, ನಡೆ, ಉತ್ಸಾಹ ನೋಡಿದರೆ 20 ದಾಟಿದೆ ಎಂದರೂ ನಂಬಲಾರಿರಿ. ಮಾತೃಭಾಷೆ ತಮಿಳು, ಹುಟ್ಟಿದ್ದು, ಶಿಕ್ಷಣ ಬೆಳೆದದ್ದೆಲ್ಲ ದೆಹಲಿ, ಕೆಲಸ ಅಮೆರಿಕದಲ್ಲಿ, ಮದುವೆಯಾದದ್ದು ಕೊಂಕಣಿ ಕನ್ನಡಿಗ ಕೃಷ್ಣದಾಸ್ ಪೈ ಅವರನ್ನು! ಒಟ್ಟಿನಲ್ಲಿ ಈಕೆಯ ಬದುಕೇ ವಿವಿಧ ಸಂಸ್ಕೃತಿಗಳ, ಭಾಷೆಗಳ ಕಲಸು ಮೇಲೋಗರ.
ಇವರು ಲಕ್ಷ್ಮಿ. ಆದರೆ ತಮ್ಮ ಮೇಲಿರುವುದು ಮಾತ್ರ ಸರಸ್ವತಿ ಕಟಾಕ್ಷವೆಂದೇ ಅವರ ನಂಬಿಕೆ.
ಸೈಕಾಲಜಿ ಲೆಕ್ಚರರ್ ಆಗಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾರ್ಯ ನಿರ್ವಹಿಸಿದ ಲಕ್ಷ್ಮೀ ಕೃಷ್ಣದಾಸ್ ಪೈ ಚೆನ್ನಾಗಿ ಪೇಂಟಿಂಗ್ ಮಾಡುತ್ತಾರೆ. ಗಾಯಕಿಯಾಗಿ ಹಿಂದೂಸ್ತಾನಿ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿ ಕೊಡುವ ಅವರು ತಮ್ಮ 53ನೇ ವಯಸ್ಸಿನಲ್ಲಿ ತಾವೇ ಸ್ವತಃ ಪದ್ಯ ಬರೆದು ರಾಗ ಹಾಕಿ ಹಾಡಿದರು. ಈ ಶ್ರಮಕ್ಕೆ ದೊರೆತ ಪ್ರಶಂಸೆಗಳಿಂದ ಪ್ರೇರಿತರಾದ ಲಕ್ಷ್ಮೀ ಮತ್ತೆರಡು ಕವನಗಳನ್ನು ಉರ್ದು ಹಾಗೂ ಕನ್ನಡದಲ್ಲಿ ರಚಿಸಿದರು. ಆದರೆ ಈ ಭಾಷೆಗಳನ್ನು ಓದಿ ಬರೆಯಲು ಅವರಿಗೆ ತಿಳಿದಿರಲಿಲ್ಲವಾದ್ದರಿಂದ ದೇವನಗರಿ ಲಿಪಿಯಲ್ಲಿ ಬರೆದರು.
ಇವರ ಈ ಕವನಗಳನ್ನು ನೋಡಿದ ಕುವೆಂಪು ವಿವಿಯ ಮಾಜಿ ಕುಲಪತಿ ಗಜೇಂದ್ರಗಡ ಅವರು, ಇಷ್ಟೊಂದು ಭಾಷೆಯ ಬಗ್ಗೆ ಅರಿವಿರುವ ನೀವ್ಯಾಕೆ ಬಹುಭಾಷಾ ಕವನದ ಪುಸ್ತಕವನ್ನು ಹೊರತರಬಾರದು ಎಂದು ಕೇಳಿದರಂತೆ. ಆಗಲೇ ಇವರು ಮನಸ್ಸಿನಲ್ಲೇ ಐದು ಭಾಷೆಗಳಲ್ಲಿ ಒಟ್ಟು ನೂರು ಕವನಗಳನ್ನು ಹೊಂದಿದ ಪುಸ್ತಕವೊಂದನ್ನು ಹೊರತರುತ್ತೇನೆಂದು ನಿರ್ಧರಿಸಿದರಂತೆ.
ಈಗ ಇವರ ಪುಸ್ತಕ 'ಫ್ರಂ ಮೈ ಹಾರ್ಟ್‌' ಬಿಡುಗಡೆಯಾಗಿದೆ. 65ರಿಂದ 68ನೇ ವರ್ಷದ ತನಕ ಎಡೆಬಿಡದೆ ಈ ಪುಸ್ತಕಕ್ಕಾಗಿ ಶ್ರಮಿಸಿದ್ದಾರೆ ಲಕ್ಷ್ಮೀ. ಈ ದಿನಗಳಲ್ಲಿ ಪುಸ್ತಕ ಬರೆಯುವ ಸಂಕಲ್ಪಕ್ಕಾಗಿಯೇ ಕನ್ನಡ ಕಲಿತು ಕವನಗಳನ್ನು ರಚಿಸಿದ್ದಾರೆ. ವಯಸ್ಸಿಗೆ ಸೆಡ್ಡು ಹೊಡೆದು ಉರ್ದು, ತಮಿಳು ಲಿಪಿ ಕಲಿತಿದ್ದಾರೆ. ಇಡಿ ಪುಸ್ತಕದ ತುಂಬ ತಮ್ಮದೆ ಕೈಬರಹದಲ್ಲಿ(ಇಂಗ್ಲಿಷ್ ಹೊರತುಪಡಿಸಿ) ಕವನಗಳನ್ನು ಮುದ್ರಿಸಿ ಪ್ರಕಟಿಸಿದ್ದಾರೆ. ಉಳಿದ ಭಾಷೆಗಳ ಕವನಗಳನ್ನು ಓದುಗರ ಸಹಾಯಕ್ಕಾಗಿ ಇಂಗ್ಲಿಷ್‌ನಲ್ಲಿಯೂ ಕೊಡಲಾಗಿದೆ. ಈ 100 ಕವನಗಳು ತನ್ನಿಡೀ ಜೀವನದ ಅನುಭವ ಅನಿಸಿಕೆಗಳ ಪ್ರತಿಬಿಂಬ. ನಾನು ನಡೆದು ಬಂದ ಹಾದಿಗೆ ಚೆಲ್ಲಿದ ಬೆಳಕು ಎನ್ನುತ್ತಾರೆ ಲಕ್ಷ್ಮೀ.  ಇಲ್ಲಿನ ಹಲವು ಕವಿತೆಗಳಲ್ಲಿ ಕೃಷ್ಣನೆಡೆಗಿನ ನಾನಾ ಭಾವಗಳು, ಜೀವನಪ್ರೀತಿ, ನಿರೀಕ್ಷೆ, ಸಂಸಾರ, ರಾಜಕೀಯ, ನೋವುನಲಿವುಗಳನ್ನು ಕಟ್ಟಿಕೊಡಲಾಗಿದೆ. ಇವರ ಪ್ರತಿಭೆ, ಅನುಭವ, ವಾಚನಶೈಲಿ, ಕಠಿಣ ಪರಿಶ್ರಮ ಕೇಳುವವರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಬದುಕಿನಲ್ಲಿ ಉತ್ಸಾಹ ಹೊಮ್ಮಿಸುತ್ತದೆ ಎನ್ನುತ್ತಾರೆ ಮುನ್ನುಡಿ ಬರೆದ ಕನ್ನಡದ ಶಾಯರಿ ಸರದಾರ ಅಸದುಲ್ಲಾ ಬೇಗ್.
ಈ ಬಹುಮುಖ ಪ್ರತಿಭೆಯ ಜೀವನೋತ್ಸಾಹಕ್ಕೊಂದು ಸಲಾಂ ಎನ್ನೋಣವೇ?

- ರೇಶ್ಮಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!