ಸಾಧನೆ

ಯೋಗದ ಸತ್ಯ

ಯುವಜನತೆಗೆ ಯೋಗ ಎಂದರೆ ಅದೆಂಥದೋ ಅಲರ್ಜಿ. ಹಂಗ್ಯಾವನ್ ಮೈ ಮುರಿತಾನೆ ಗುರು ಎನ್ನುವವರೇ ಎಲ್ಲ. ಸಿಕ್ಸ್‌ಪ್ಯಾಕ್ ಹೆಸರಲ್ಲಿ ದುಬಾರಿ ಹಣ ತೆತ್ತಾದರೂ ಜಿಮ್‌ನಲ್ಲಿ ತಾಸುಗಟ್ಟಲೆ ಕಸರತ್ತು ಮಾಡುತ್ತಾರೆಯೇ ಹೊರತು ಯೋಗದ ಮೊರೆ ಹೋಗೋದಿಲ್ಲ. ಈ ಮಾತಿಗೆ ಸಂಪೂರ್ಣ ವಿರೋಧಾಭಾಸವಾಗಿ ಕಾಣುತ್ತಾರೆ ಎನ್.ಕೆ. ಸತೀಶ್.
ಗುಲ್ಬರ್ಗ ಜಿಲ್ಲೆಯ ಕಾಳನೂರಿನ ಸತೀಶ್ ಅನನ್ಯ ಯೋಗಸಾಧಕ. 2006ರಲ್ಲಿ ತಮಿಳುನಾಡಿನಲ್ಲಿ ಶ್ರೀ ಜಯೇಂದ್ರ ಸ್ವಾಮೀಜಿಯವರ ಯೋಗ ಕೇಂದ್ರ ಆಯೋಜಿಸಿದ್ದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ, ಹರಿದ್ವಾರದಲ್ಲಿ ಭಾರತೀಯ ಯೋಗ ಸಂಸ್ಥೆ ನಡೆಸಿದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಭಾರತದಿಂದ ಆಯ್ಕೆಯಾದ ಒಟ್ಟು 36 ಸದಸ್ಯರಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಸತೀಶ್. ಗೆದ್ದದ್ದೂ ಅವರೇ!
ಕೈ ತಪ್ಪಿದ ಜಾಗತಿಕ ಸ್ಪರ್ಧೆ
2007-08ರಲ್ಲಿ ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾಗಿ ಪತ್ರ ಬಂದಾಗ ಇವರಿಗೆ ತುಂಬಾ ಖುಷಿಯಾಗಿತ್ತಂತೆ. ಆದರೆ ಆ ಸ್ಪರ್ಧೆಯಲ್ಲಿ ಇವರಿಗೆ ಭಾಗವಹಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಮನೆಯ ಬಡತನ ಹಾಗೂ ನಮ್ಮ ಸರ್ಕಾರಗಳ ಕುರುಡುತನ.
ಹಾಗಂತ ಸತೀಶ್ ಎದೆಗುಂದಲಿಲ್ಲ. ಇದುವರೆಗೂ ಇವರು ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ಒಂದು ಬಾರಿ ಪ್ರಥಮ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಐದು ಬಾರಿ ಪ್ರಥಮ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಬರೋಬ್ಬರಿ ನಾಲ್ಕು ಬಾರಿ ಪ್ರಥಮ ಸ್ಥಾನ ಗಳಿಸಿ ಸಾಧನೆ ಮೆರೆದಿದ್ದಾರೆ. ಯೋಗದ 347 ಭಂಗಿಗಳನ್ನು ಮಾಡುವ ಇವರು ಇದುವರೆಗೆ 300ಕ್ಕೂ ಅಧಿಕ ಜನರಿಗೆ ಯೋಗ ಕಲಿಸಿದ್ದಾರೆ.
ಈ ಯೋಗ ಪ್ರವೀಣನಿಗೆ ನಿಮ್ಮದೊಂದು ಹಾರೈಕೆ ಇರಲಿ. ಸಂಪರ್ಕ- 8867551113.

=  ಬಿ. ಸೋಮಶೇಖರ್ ಸುರಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು