ಸಾಧನೆ

ಸೋಪ್‌ನಲ್ಲೇ ಸೂಪರ್ ಕಲೆ

ಕ್ರಿಯಾಶೀಲ ಕಲಾವಿದನ ಕೈಗೆ ಸಿಕ್ಕ ಪ್ರತಿ ವಸ್ತುವೂ ಕಲಾಕೃತಿಯಾಗಿ ಮೂಡಲು ಸಾಧ್ಯ ಎಂಬುದಕ್ಕೆ ಉದಾಹರಣೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಯಮನಪ್ಪ ಬಸಪ್ಪ ಹೀರಾಳ.
ಕಿತ್ತು ತಿನ್ನುವ ಬಡತನದಲ್ಲೂ ತಲೆ ತಲಾಂತರದಿಂದ ಬಂದ ಪೆಂಡಾಲ್ ಕೆಲಸದೊಂದಿಗೆ ಯಮನಪ್ಪ ಬಿಡುವಿನ ವೇಳೆಯಲ್ಲಿ ಸಾಬೂನಿನಲ್ಲಿ ಕೈಚಳಕ ತೋರಿಸಲಾರಂಭಿಸಿದರು. ಹೈಸ್ಕೂಲಿನ ದಿನಗಳಲ್ಲಿ ಪ್ರವಾಸಕ್ಕೆಂದು ಬೇಲೂರು- ಹಳೆಬೀಡಿಗೆ ಹೋದಾಗ ಅಲ್ಲಿನ ಕಲೆಯ ಸೊಬಗನ್ನು ನೋಡಿ, ನಾನೇಕೆ ಟ್ರೈ ಮಾಡಬಾರದೆಂದು ಕಲ್ಲು ಮತ್ತು ಮೆದು ಮರ ಬಳಸಿ ಮೂರ್ತಿ ಕೆತ್ತತೊಡಗಿದರು. ಮೂರ್ತಿ ಕೆತ್ತನೆ ಎಷ್ಟು ಕಷ್ಟ ಎಂದು ಅರಿವಿಗೆ ಬಂದಾಗ ಸಾಬೂನಿನಲ್ಲಿ ಚಿತ್ರಗಳನ್ನು ಕೆತ್ತಲಾರಂಭಿಸಿದರು. ಗೆಳೆಯರು, ಪರಿಚಿತರು ನೀಡಿದ ಪ್ರೋತ್ಸಾಹದಿಂದ ಅವರು ಕೇಳಿದ ಚಿತ್ರಗಳನ್ನು ಕೆತ್ತಿ ಕೊಟ್ಟರು. ಗಣಪತಿ, ಶಿವ, ರಾಘವೇಂದ್ರ ಸ್ವಾಮಿ, ಕೃಷ್ಣ, ಲಕ್ಷ್ಮೀದೇವಿ, ಏಸು ಕ್ರಿಸ್ತ, ಗಾಂಧೀಜಿ, ಸಾಯಿಬಾಬಾ ಸೇರಿದಂತೆ ಇದುವರೆಗೆ 500ಕ್ಕೂ ಹೆಚ್ಚು ಕಲಾಕೃತಿಗಳನ್ನು ಮಾಡಿದ್ದಾರೆ. ಮದುವೆಗಳಲ್ಲಿ ಸುರಗಿ ಸಾಮಾನಿನಲ್ಲಿ ಇಡಲು ಚೆಂದದ ಕಲಾಕೃತಿ ಮಾಡಿ ಕೊಡಲು ಯಮನಪ್ಪನಿಗೆ ಆರ್ಡರ್ ಬರುತ್ತದೆ. ಒಂದು ಸಾಬೂನಿನಲ್ಲಿ ಚಿತ್ರ ಬಿಡಿಸಲು ಏನಿಲ್ಲವೆಂದರೂ ಹತ್ತು ದಿನಗಳೇ ಬೇಕು. ಸದ್ಯ 50ಕ್ಕೂ ಹೆಚ್ಚು ಕಲಾಕೃತಿಗಳನ್ನು ಗಾಜಿನ ಡಬ್ಬಿಯಲ್ಲಿ ಸಂಗ್ರಹಿಸಿಟ್ಟಿದ್ದು, ಮತ್ತಷ್ಟು ಕಲಾಕೃತಿಗಳನ್ನು ಮಾಡಿ ಅವುಗಳ ಪ್ರದರ್ಶನ ಮಾಡಬೇಕೆನ್ನುವುದು ನನ್ನ ಮಹಾದಾಸೆ ಎನ್ನುತ್ತಾರೆ ಕಲಾವಿದ ಯಮನಪ್ಪ.
ಸಂಘ ಸಂಸ್ಥೆಗಳು, ಸಾರ್ವಜನಿಕರು, ಕಲಾಸಕ್ತರು ನೆರವಿಗೆ ಬಂದಲ್ಲಿ ಯಮನಪ್ಪನ ಕೈಯಲ್ಲಿ ಮತ್ತಷ್ಟು ಕಲಾಕೃತಿಗಳು ಮೂಡುತ್ತವೆ, ಬಡತನಕ್ಕೊಂದು ದಾರಿಯಾಗುತ್ತದೆ. ಸಂಪರ್ಕಕ್ಕೆ ಮೊ. 80503 92034.

= ಪ್ರವೀಣರಾಜು ಸೊನ್ನದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ