ಬೆಂಗಳೂರು: ದೇಶದಲ್ಲಿನ ಐಐಟಿಗಳ ಪ್ರವೇಶಕ್ಕಾಗಿ ನಡೆಸುವ ಜಂಟಿ ಪ್ರವೇಶ ಪರೀಕ್ಷೆ(ಜೆಇಇ-ಅಡ್ವಾನ್ಸ್) ಫಲಿತಾಂಶ ಬುಧವಾರ ಸಂಜೆ ಪ್ರಕಟವಾಗಿದ್ದು, ಬೆಂಗಳೂರಿನ ಅಮಿತ್ ಎಸ್.ದೇಶಪಾಂಡೆ ರಾಷ್ಟ್ರೀಯ ಮಟ್ಟದಲ್ಲಿ 122ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಎಂಜಿನಿಯರಿಂಗ್‌ನಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದ ಅಮಿತ್ ಎಫ್ ಐಐಟಿ ಜೆಇಇ ಕೋಚಿಂಗ್ ಸೆಂಟರ್ ವಿದ್ಯಾರ್ಥಿಯಾಗಿದ್ದು, ಅವರ ತಾಯಿ ಸಂಧ್ಯಾ ದೇಶಪಾಂಡೆ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಆತ 100ರೊಳಗಿನ ರ್ಯಾಂಕ್ ಬರುವ ನಿರೀಕ್ಷೆ ಹೊಂದಿದ್ದ. ಆದರೆ 122 ಬಂದಿದೆ ಎಂದಿದ್ದಾರೆ. ಅಲ್ಲದೆ ಅಮಿತ್ ಮುಂದೇ ಏನು ಮಾಡಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದಿದ್ದಾರೆ.
ಜೆಇಇ ಪ್ರವೇಶ ಪರೀಕ್ಷೆಯು ಮೇ 24ರಂದು ನಡೆದಿತ್ತು. 1.5 ಲಕ್ಷ ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 26 ಸಾವಿರ ವಿದ್ಯಾರ್ಥಿಗಳು ಜೆಇಇ-ಆಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಂಡಿದ್ದರು.
ಭಾರತದಲ್ಲಿರುವ ಒಟ್ಟು 16 ಐಐಟಿಗಳಲ್ಲಿರುವ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆ ಇದಾಗಿದೆ.