ಅನು ಕಲೆಗೆ ವಿಕಲಚೇತನವೇ ನಿಬ್ಬೆರಗಾಯಿತು! 
ಸಾಧನೆ

ಅನು ಕಲೆಗೆ ವಿಕಲಚೇತನವೇ ನಿಬ್ಬೆರಗಾಯಿತು!

ದೈಹಿಕ ವಿಕಲಚೇತನಕ್ಕೆ ಸವಾಲೆಸೆದು ಸಹಜ ಬದುಕಿನತ್ತ ಸಾಗಿ ಸಾಹಸ ಮಾಡುತ್ತಿರುವವರೆಂದರೆ ಚಿತ್ರ ಕಲಾವಿದೆ ಅನುಜೈನ್. ಇವರು ಗುರಿ ಸಾಧಿಸುವ ಛಲವಿದ್ದರೆ ದೈಹಿಕ ನ್ಯೂನತೆಗಳು ನಗಣ್ಯ ಎಂದು ಕೊಂಡವರು...

ಬೆಂಗಳೂರು: ದೈಹಿಕ ವಿಕಲಚೇತನಕ್ಕೆ ಸವಾಲೆಸೆದು ಸಹಜ ಬದುಕಿನತ್ತ ಸಾಗಿ ಸಾಹಸ ಮಾಡುತ್ತಿರುವವರೆಂದರೆ ಚಿತ್ರ ಕಲಾವಿದೆ ಅನುಜೈನ್. ಇವರು ಗುರಿ ಸಾಧಿಸುವ ಛಲವಿದ್ದರೆ ದೈಹಿಕ ನ್ಯೂನತೆಗಳು ನಗಣ್ಯ ಎಂದು ಕೊಂಡವರು.

ಕಾಲಿನ ಸಂಪೂರ್ಣ ಸ್ವಾಧrನ ಕಳೆದುಕೊಂಡಿರುವ ಅನು ತಮ್ಮ ಎರಡು ಮೊಣಕೈ ಜೋಡಿಸಿ ಕುಂಚ ಹಿಡಿದು ಚಿತ್ರ ಬಿಡಿಸುವ ರೀತಿಯನ್ನು ನೋಡಿದರೆ ಬರೀ ಸಾಮಾನ್ಯ ಜನತೆ ಮಾತ್ರವಲ್ಲ, ಕಲಾವಿದರಿಗೂ ಅಚ್ಚರಿ ಆಗುತ್ತದೆ. ಇವರ ಕೌಶಲ ನೋಡಿ ವಿಕಲಚೇತನವೇ ನಾಚುತ್ತದೆ. ಅನುಜೈನ್ ಮೂಲತಃ ಪಶ್ಚಿಮ ಬಂಗಾಳದವರು, 33 ವರ್ಷದ ಅನು ಕಳೆದ 20ವರ್ಷಗಳಿಂದ ಚಿತ್ರಕಲೆಯನ್ನು ಹವ್ಯಾಸ ಹಾಗೂ ವೃತ್ತಿಯಾಗಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನೂರಾರು ಮಕ್ಕಳಿಗೆ ಕಲೆಯನ್ನು ಧಾರೆಯೆರೆದಿದ್ದಾರೆ. ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ಚಿತ್ರಕಲೆಯನ್ನು ಪ್ರದರ್ಶಿಸಿದ್ದರು. ಚಂಡೀಘಡದ ಪ್ರಾಚೀನ ಕಲಾಕೇಂದ್ರದಿಂದ ಅವರಿಗೆ ಪುರಸ್ಕಾರ ದೊರೆತಿದೆ. ಇದುವರೆಗೆ ಕಢಕ್ ಪುರದಲ್ಲಿ ತರಬೇತಿ ನೀಡುತ್ತಿದ್ದು, ಇನ್ನು ಇವರು ಬೆಂಗಳೂರಿನಲ್ಲಿಯೇ ನೆಲೆಸಲಿದ್ದು ಇಲ್ಲಿಯೂ ತರಬೇತಿಯನ್ನು ನೀಡುವ ಅಭಿಲಾಷೆ ಹೊಂದಿದ್ದಾರೆ. ಭಾರತೀಯ ವಿದ್ಯಾಭವನ ಹಾಗೂ ಇನ್ಫೋಸಿಸ್ ಫೌಂಡೇಶನ್ ಇಂತಹ ಕಲಾವಿದರನ್ನು ಗುರುತಿಸಿ ಪೊ್ರೀತ್ಸಾಹಿಸುವ ದೃಷ್ಟಿಯಲ್ಲಿ ಚಿತ್ರಕಲಾ ಪ್ರದರ್ಶನವನ್ನು ಭಾರತೀಯ ವಿದ್ಯಾಭವನದಲ್ಲಿ ಜ.17ರಿಂದ 23ರವರೆಗೆ ಹಮ್ಮಿಕೊಂಡಿದೆ.

ಚಿತ್ರದ ವಿಶೇಷತೆಗಳೇನು?: ಎಕ್ಸ್-ರೇ ಪೇಂಟಿಂಗ್ ಎನ್ನುವುದು ನೂತನವಾಗಿದೆ. ಇದರಲ್ಲಿ ಎಕ್ಸ್ ರೇ ಪ್ಲೇಟ್‍ನ ಮೇಲೆ ಗ್ಲಾಸ್ ಆಕ್ರಿಲಿಕ್ ಪೇಂಟಿಂಗ್ ಮಾಡಲಾಗುತ್ತದೆ. ಬಾಂದಿನಿ, ಜಲವರ್ಣ, ಫೈಬರ್ ಗ್ಲಾಸ್, ಆಕ್ರಿಲಿಕ್, ಆಯಿಲ್ ಪೇಸ್ಟಲ್, ಪೆನ್ಸಿಲ್ ಇದ್ದಿಲುಗಳನ್ನು ಬಳಸಿ ಚಿತ್ರರಚನೆ ಜತೆಗೆ ಸೂಜಿಕಲೆ, ಫೋಟೊಗ್ರಫಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಮಣ್ಣಿನ ಆಕರ್ಷಕ ಕುಡಿಕೆ, ಹೂವಿನ ಕುಂಡ, ಗೃಹಾಲಂಕಾರ ವಸ್ತುಗಳನ್ನೂ ಕೂಡ ಮಾಡುತ್ತಾರೆ. ಭಾರತೀಯ ವಿದ್ಯಾಭವನದ ಹನುಮಂತರಾವ್ ಆಟ್ರ್ಸ್ ಗ್ಯಾಲರಿಯಲ್ಲಿ ಜ.23ರವರೆಗೂ ಬೆಳಗ್ಗೆ 10.30ರಿಂದ ಸಂಜೆ 6.30. ರವರೆಗೆ ಪ್ರದರ್ಶನ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT