ಆಕ್ಸ್ ಫರ್ಡ್ ವಿಶ್ವಕೋಶದಲ್ಲಿ ಬೆಂಗಳೂರಿನ 23 ವರ್ಷದ ಯುವಕನ ಕಲೆ 
ಸಾಧನೆ

ಆಕ್ಸ್ ಫರ್ಡ್ ವಿಶ್ವಕೋಶದಲ್ಲಿ ಬೆಂಗಳೂರಿನ 23 ವರ್ಷದ ಯುವಕನ ಕಲೆ

ಬೆಂಗಳುರಿನ 23 ವರ್ಷದ ಯುವ ಕಲಾವಿದ ಆಂಡ್ರ್ಯೂ ಪೌಲ್ ನ ಕಲೆ ದಕ್ಷಿಣ ಏಶ್ಯಾದಲ್ಲಿ ಬೈಬಲ್ ಹಾಗೂ ಕಲೆಗೆ ಸಂಬಂಧಿಸಿದ ಆಕ್ಸ್ ಫರ್ಡ್ ನ ವಿಶ್ವಕೋಶದಲ್ಲಿ ಸ್ಥಾನ ಪಡೆದಿದೆ.

ಬೆಂಗಳೂರು: ಬೆಂಗಳೂರಿನ 23 ವರ್ಷದ ಯುವ ಕಲಾವಿದ ಆಂಡ್ರ್ಯೂ ಪೌಲ್ ನ ಕಲೆ ದಕ್ಷಿಣ ಏಶ್ಯಾದಲ್ಲಿ ಬೈಬಲ್ ಹಾಗೂ ಕಲೆಗೆ ಸಂಬಂಧಿಸಿದ ಆಕ್ಸ್ ಫರ್ಡ್ ನ ವಿಶ್ವಕೋಶದಲ್ಲಿ ಸ್ಥಾನ ಪಡೆದಿದೆ.
ವಿಶ್ವಕೋಶದಲ್ಲಿ ಸ್ಥಾನ ಪಡೆದ ಕಲಾಕೃತಿಗೆ (ಮೈಟಿ ಸೇವಿಯರ್) ತಾನು ಕೇರಳದಲ್ಲಿ ರಿಟ್ರೀಟ್ ಮುಗಿಸಿ ವಾಪಸ್ಸಾಗುತ್ತಿರಬೇಕಾದರೆ ಕಂಡ ಕನಸಿನ ಆಧಾರ ಎಂದು ಆಂಡ್ರ್ಯೂ ಪೌಲ್ ಹೇಳಿದ್ದಾರೆ. ಕನಸಿನಲ್ಲಿ ಜೀಸಸ್ ನ ಮುಖದ ತುಂಬ ರಕ್ತ ಹಾಗೂ ಒಂದು ನೀಲಿ ಬಣ್ಣದ ಶಿಲುಬೆ ನೋಡಿದೆ. ಇದನ್ನು ಅರ್ಥೈಸುವಂತೆ ಪಾದ್ರಿಯೋಬ್ಬರನ್ನು ಕೇಳಿದೆ. ಈ ಕನಸಿನ ಹಿಂದೆ "ಜನರು ಎಷ್ಟೇ ಪಾಪ ಮಾಡಿದರೂ ಅವರನ್ನು ದೇವರು ರಕ್ಷಿಸುತ್ತಾನೆ" ಎಂಬ  ಸಂದೇಶವಿರುವುದಾಗಿ ಅವರು ಹೇಳಿದರು.
ಇದರ ನಂತರ ಕಲಾಕೃತಿಯನ್ನು ಸಿದ್ಧಪಡಿಸಲು ಆರು ಗಂಟೆಗಳು ಹಾಗೂ ಮುಕ್ತಾಯಗೊಳಿಸಲು 8 ಗಳಷ್ಟು ಸಮಯ ಬೇಕಾಯಿತು ಎಂದಿದ್ದಾರೆ ಆಂಡ್ರ್ಯೂ ಪೌಲ್. "ಆಕ್ಸ್ ಫರ್ಡ್ ನ ಪ್ರಬಂಧಕ್ಕಾಗಿ ಕೆಲಸ ಮಾಡುತ್ತಿದ್ದ ಕೆನಡಾ ವಿಶ್ವವಿದ್ಯಾನಿಲಯದ ಪ್ರೊ. ಕ್ಲಾರಾ ಜೋಸೆಫ್ ಪೌಲ್ ಅವರ ಕಲಾಕೃತಿಯನ್ನು ಫೇಸ್ ಬುಕ್ ನಲ್ಲಿ ನೋಡಿದ್ದರು. 2014 ರಲ್ಲಿ ಪೌಲ್ ಅವರನ್ನು ಸಂಪರ್ಕಿಸಿದ ಒಂದು ವರ್ಷದ ನಂತರ ಅದನ್ನು ಆಕ್ಸ್ ಫರ್ಡ್ ವಿಶ್ವಕೋಶದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು" ಎಂದು ಆಂಡ್ರ್ಯೂ ಪೌಲ್ ಹೇಳಿದ್ದಾರೆ.
2013 ರಲ್ಲಿ ಚಿತ್ರಕಲೆಯನ್ನು ಪ್ರಾರಂಭಿಸಿದ ಆಂಡ್ರ್ಯೂ ಪೌಲ್ ನ ಕಲಾಕೃತಿಗೆ ಅತಿ ಕಡಿಮೆ ಸಮಯದಲ್ಲಿ ಆಕ್ಸ್ ಫರ್ಡ್ ವಿಶ್ವಕೋಶದಲ್ಲಿ ಸ್ಥಾನ ದೊರೆತಿದೆ. ತನ್ನ ಕಲಾಕೃತಿಗಳನ್ನು ದುಬೈ ನ ಗ್ರ್ಯಾಂಡ್ ಹ್ಯಾಟ್ ನಲ್ಲಿ ಹರಾಜು ಹಾಕಿರುವ ಪೌಲ್, ಸಿಸ್ಟರ್ಸ್ ಆಫ್ ಚಾರಿಟಿಗಾಗಿ ಶಾಲಾ ಗೋಡೆಗಳ ಮೇಲೂ ಚಿತ್ರಕಲೆಯನ್ನು ಮೂಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT