ಕೃಷಿ-ಪರಿಸರ

ಗುರೆಳ್ಳು

ಸಜ್ಜೆ ರೊಟ್ಟಿಯಲ್ಲಿ ಮೊಸರು, ಗುರೆಳ್ಳು ಹಿಂಡಿ ಹಾಕಿಕೊಂಡು ಊಟ ಸವಿದರೆ ಅದರ ಮಜಾನೇ ಬೇರೆ. ಅಷ್ಟೊಂದು ರುಚಿ ಗುರೆಳ್ಳು ಚಟ್ನಿ (ಹಿಂಡಿ). ಆದರೆ, ಇಂಥ ಗುರೆಳ್ಳನ್ನು ಬೆಳೆಯುವ ಪ್ರಮಾಣ ಇತ್ತೀಚೆಗೆ ಕುಗ್ಗುತ್ತಿದೆ. ಆದರೂ ಇದನ್ನು ಬೀದರ್, ಹಾಸನ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.
ಗುರೆಳ್ಳು ರೈತರ ವಿಶಿಷ್ಟ ಬೆಳೆ. ಯಾಕೆಂದರೆ, ಇದು ಇತರ ಬೆಳೆಗಳಿಗೆ ರೋಗ ಬಾರದಂತೆ ತಡೆಗಟ್ಟುವ ಶಕ್ತಿ ಹೊಂದಿರುತ್ತದೆ. ಹಾಗಾಗಿಯೇ ಇದನ್ನು ಜಮೀನಿನ ಮೇರೆಯಲ್ಲಿ ಹಾಕುವುದು ವಾಡಿಕೆ. ಅಷ್ಟೇ ಇದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚು. ಇದಕ್ಕೆ ಯಾವುದೇ ರೋಗ ಬಾರದು ಅನ್ನೋದು ಅನುಭವಿ ಕೃಷಿಕರ ಮಾತು. ಇನ್ನು ಕಡಿಮೆ ಮಳೆ, ಫಲವತ್ತತೆ ಕಮ್ಮಿ ಇರುವ ಮಣ್ಣಲ್ಲಿ ಬರನಿರೋಧಕ ಶಕ್ತಿಯನ್ನು ಇದು ಹೊಂದಿದೆ. ಇದನ್ನು ಹೆಚ್ಚಾಗಿ ಅಡುಗೆಗೆ, ಚಟ್ನಿ ತಯಾರಿಸಲು ಬಳಸುತ್ತಾರೆ.

ಬೆಳೆಯುವ ವಿಧಾನ
ಗುರೆಳ್ಳನ್ನು ಏಕಬೆಳೆಯಾಗಿ ಮಾಡಿಕೊಂಡಿರುವುದು ಕಮ್ಮಿ. ಆದರೆ, ಇತರ ಬೆಳೆಗಳ ರಕ್ಷಣೆಗಾಗಿ ಬೆಳೆಯೋದು ಸಾಮಾನ್ಯ. ಮುಂಗಾರಿನಲ್ಲಿ ಬೆಳೆಯುವುದಾದರೆ ಜೂನ್ ಸೂಕ್ತ. ಇನ್ನು ಹಿಂಗಾರಿನಲ್ಲಿ ಬೆಳೆಯಬೇಕೆಂದರೆ ಅಕ್ಟೋಬರ್ ಉತ್ತಮ. ಕೆಲವು ತಳಿಗಳು ಐದು ತಿಂಗಳಿಗೆ ಫಸಲು ನೀಡಿದರೆ ಹಲವು ತಳಿಗಳು ಮೂರೇ ತಿಂಗಳಿಗೆ ಕೈಸೇರುತ್ತವೆ. ಮೊದಲು ಜಮೀನನ್ನು ಹದಗೊಳಿಸಿದ ನಂತರ ಸಾಲಿನಿಂದ ಸಾಲಿಗೆ 1 ಅಡಿ ಅಂತರದಲ್ಲಿ ಬೀಜ ಬಿತ್ತಬೇಕು. ಬೀಜದಿಂದ ಬೀಜಕ್ಕೆ ಅರ್ಧ ಇಂಚು ಅಂತರ. ಜಾಸ್ತಿ ನಿರ್ವಹಣೆ ಬಯಸದು. ರಾಜ್ಯದಲ್ಲಿ ಎನ್- 71, ಗಿಡ್ಡ ಗುರೆಳ್ಳು ಮತ್ತು ಸ್ಥಳೀಯ ತಳಿಗಳು ಹೆಚ್ಚು ಪ್ರಚಲಿತದಲ್ಲಿವೆ.
ಹೆಚ್ಚಿನ ಮಾಹಿತಿಗೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಕಲ್ಲಪ್ಪ ನೇಗಿನಹಾಳ (ಮೊ. 9980634062) ಅವರನ್ನು ಸಂಪರ್ಕಿಸಬಹುದು. ಅಲ್ಲದೆ, ಇಂಥ ಅಪರೂಪದ ಬೆಳೆಗಳನ್ನು ಉಳಿವಿಗೆ ರೈತರು ಮನಸ್ಸು ಮಾಡಬೇಕಿದೆ.

- ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು